ಕುಂದಾಪುರ ತಾಯಿ-ಮಗಳ ಸಾಹಸ: ಭಾರತ-ಚೀನಾ ಗಡಿಯಲ್ಲಿ ಜಗತ್ತಿನ ತುತ್ತತುದಿಗೆ ಬೈಕ್ ಪ್ರಯಾಣ

ಕುಂದಾಪುರ ತಾಯಿ-ಮಗಳ ಸಾಹಸ: ಭಾರತ-ಚೀನಾ ಗಡಿಯಲ್ಲಿ ಜಗತ್ತಿನ ತುತ್ತತುದಿಗೆ ಬೈಕ್ ಪ್ರಯಾಣ

ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on: Sep 21, 2023 | 5:48 PM

ತಮ್ಮ ಮಗಳು ಚೆರಿಶ್ ಕರ್ವಾಲೋ ರಿಂದಾಗಿ ಈ ಸಾಹಸಯಾತ್ರೆ ಸಾಧ್ಯವಾಗಿದೆ ಅಂತಾರೆ ಕುಂದಾಪುರ ಮೂಲದ ವಿಲ್ಮಾ ಕ್ರಾಸ್ತಾ ಕರ್ವಾಲೋ . ಯೋಗ ,ಪ್ರಾಣಾಯಾಮ,ಧ್ಯಾನ ಮತ್ತಿತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಇವರು ವೃತ್ತಿಯಲ್ಲಿ ಕಾರ್ಪೊರೇಟರ್ ಟ್ರೈನರ್. ಸದ್ಯ ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಕಳೆದ ಬಾರಿ ಜಗತ್ತಿನ ಎರಡನೇ ಎತ್ತರದ ಪ್ರದೇಶ ಖರ್ದುಂಗ್ಲಾ ಪಾಸ್ ಗೆ ಬೈಕ್ ಮೂಲಕ ಹೋಗಿ ಸುದ್ದಿ ಮಾಡಿದ್ದ ಕುಂದಾಪುರ ಮೂಲದ ವಿಲ್ಮಾ ಕ್ರಾಸ್ತಾ ಕರ್ವಾಲೋ ಈ ಬಾರಿ ಜಗತ್ತಿನ ಅತಿ ಎತ್ತರದ ಪ್ರದೇಶ ಉಮ್ಲಿಂಗ್ಲಾ ಪಾಸ್ ಗೆ ಹೋಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.ವಿಶೇಷ ಎಂದರೆ 55 ರ ಹರೆಯದ ವಿಲ್ಮಾ ,ಈ ಬಾರಿ ತಮ್ಮ ಮಗಳ ಜೊತೆಯೇ ಈ ಸಾಧನೆ ಮಾಡಿದ್ದಾರೆ.ಲಡಾಕ್ ಪ್ರಾಂತ್ಯದ ಈ ಪ್ರದೇಶ ಬೆಟ್ಟಗುಡ್ಡಗಳಿಂದ ತುಂಬಿದ್ದು ಸಾಹಸಿ ರೈಡರ್ ಗಳಿಗೆ ಮಾತ್ರ ಇಲ್ಲಿಗೆ ತಲುಪಲು ಸಾಧ್ಯ. ಐವತ್ತೈದರ ಹರೆಯದಲ್ಲೂ ತಮ್ಮ ಮಗಳ ಜೊತೆ ಹಲವು ಸವಾಲುಗಳನ್ನು ಮೆಟ್ಟಿ ನಿಂತು ಈ ಯಾತ್ರೆಯನ್ನು ಬೈಕ್ ಮುಲಕ ಯಶಸ್ವಿಯಾಗಿ ಪೂರೈಸಿದ್ದಾರೆ.

ಲಡಾಕ್ ಗೆ ಒಂದು ಬಾರಿ ರೈಡ್ ಮಾಡಿ ಹೋಗುವುದೇ ಕಷ್ಟ. ಅಂಥದ್ದರಲ್ಲಿ ಇದು ಲಡಾಖ್ ಗೆ ವಿಲ್ಮಾ ಅವರದ್ದು ಮೂರನೇ ಬೈಕ್ ರೈಡ್ . ತಮ್ಮ ಮಗಳು ಚೆರಿಶ್ ಕರ್ವಾಲೋ ರಿಂದಾಗಿ ಈ ಸಾಹಸಯಾತ್ರೆ ಸಾಧ್ಯವಾಗಿದೆ ಅಂತಾರೆ ಅವರು.ಯೋಗ ,ಪ್ರಾಣಾಯಾಮ,ಧ್ಯಾನ ಮತ್ತಿತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಇವರು ವೃತ್ತಿಯಲ್ಲಿ ಕಾರ್ಪೊರೇಟರ್ ಟ್ರೈನರ್.

ಫಿಟ್ನೆಸ್ ಕಾಯ್ದಿರಿಸಿಕೊಂಡು,ಸಾಹಸಗಳ ಮೂಲಕ ಇತರರಿಗೆ ಸ್ಪೂರ್ತಿಯಾಗಿರುವ ವಿಲ್ಮಾ ,ತಮ್ಮ ಈ ಸಾಹಸ ಯಾತ್ರೆಯನ್ನು ಸವಾಲಾಗಿ ತೆಗೆದುಕೊಂಡು ಈ ಸಾಧನೆ ಮಾಡಿದ್ದಾರೆ.ಭವಿಷ್ಯದಲ್ಲಿ ಇನ್ನಷ್ಟು ಸಾಹಸ ಯಾತ್ರೆಗಳ ಮೂಲಕ ಸ್ಪೂರ್ತಿ ನೀಡುವ ಆಸೆ ಹೊಂದಿದ್ದು ,ಸದ್ಯ ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ