ಆಂಧ್ರ ಬಸ್ ದುರಂತ: ಬೆಂಗಳೂರಿನಲ್ಲಿ ಸೇಲ್ ಮಾಡಲು ತಂದಿದ್ದ ರಾಶಿ ರಾಶಿ ಮೊಬೈಲ್​​ಗಳು ಭಸ್ಮ

Updated on: Oct 24, 2025 | 3:03 PM

ಹೈದರಾಬಾದ್​ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್​ನ ವೋಲ್ವೊ ಬಸ್ ಅಪಘಾತದ ಬಳಿಕ ಬೆಂಕಿಗಾಹುತಿಯಾಗಿದೆ. ಅದರಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಾಹಿತಿ ಲಭ್ಯವಾಗಿದೆ. ಬಸ್ನ ಡಿಕ್ಕಿಯಲ್ಲಿದ್ದ ಸಾಕಷ್ಟು ವಸ್ತುಗಳು ಹೊತ್ತು ಉರಿದಿದ್ದು, ಬೆಂಗಳೂರಿನಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ರಾಶಿ ರಾಶಿ ಮೊಬೈಲ್​ಗಳು ಸುಟ್ಟು ಭಸ್ಮವಾಗಿವೆ. ಘಟನಾ ಸ್ಥಳದಲ್ಲಿ ಎಫ್ಎಸ್ಎಲ್ ತಂಡ ಶೋಧಕಾರ್ಯ ಆರಂಭಿಸಿದ್ದು, ತನಿಖೆ ಮುಂದುವರೆದಿದೆ.

ಆಂಧ್ರ ಪ್ರದೇಶ, ಅಕ್ಟೋಬರ್ 24: ಹೈದರಾಬಾದ್​ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್​ನ ವೋಲ್ವೊ ಬಸ್ ಅಪಘಾತದ ಬಳಿಕ ಬೆಂಕಿಗಾಹುತಿಯಾಗಿದೆ. ಅದರಲ್ಲಿದ್ದ 20 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಾಹಿತಿ ಲಭ್ಯವಾಗಿದೆ. ಬಸ್ನ ಡಿಕ್ಕಿಯಲ್ಲಿದ್ದ ಸಾಕಷ್ಟು ವಸ್ತುಗಳು ಹೊತ್ತು ಉರಿದಿದ್ದು, ಬೆಂಗಳೂರಿನಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ರಾಶಿ ರಾಶಿ ಮೊಬೈಲ್​ಗಳು ಸುಟ್ಟು ಭಸ್ಮವಾಗಿವೆ. ಘಟನಾ ಸ್ಥಳದಲ್ಲಿ ಎಫ್ಎಸ್ಎಲ್ ತಂಡ ಶೋಧಕಾರ್ಯ ಆರಂಭಿಸಿದ್ದು, ತನಿಖೆ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 24, 2025 02:55 PM