Prajadhvani Yatre: ಶಿರಹಟ್ಟಿಯ ಫಕೀರೇಶ್ವರ ಮಠಕ್ಕೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

|

Updated on: Feb 16, 2023 | 6:55 PM

ಹಿರಿಯ ಸ್ವಾಮೀಜಿಗಳಿಗೆ ಸಿದ್ದರಾಮಯ್ಯ ಹೂಮಾಲೆಯಿಂದ ಸತ್ಕರಿಸಿದ ಬಳಿಕ ಮಠದ ವತಿಯಿಂದ ಅಜಾನುಬಾಹು ಶ್ರೀಗಳು ಅತಿಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು

ಗದಗ: ಪ್ರಜಾಧ್ವನಿಯ ಯಾತ್ರೆಯ ಭಾಗವಾಗಿ ಸಿದ್ದರಾಮಯ್ಯ (Siddaramaiah) ಇತರ ಕೆಲ ನಾಯಕರೊಂದಿಗೆ ಜಿಲ್ಲೆಯ ಶಿರಹಟ್ಟಿಯಲ್ಲಿರುವ ಫಕೀರೇಶ್ವರ ಮಠಕ್ಕೆ ಭೇಟಿ ನೀಡಿದರು. ಹಿರಿಯ ಫಕೀರ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಯವರ (Sri Siddarameshwara Swamiji) ಮುಖಂಡತ್ವ ಮತ್ತ್ತು ಕಿರಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರ ನೆರವಿನೊಂದಿಗೆ ಫಕೀರೇಶ್ವರ ಮಠವು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಯಿಂದ ಸ್ವಾಮೀಜಿಗಳು ಬಹಳ ಸಂತುಷ್ಟರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಿರಿಯ ಸ್ವಾಮೀಜಿಗಳಿಗೆ ಸಿದ್ದರಾಮಯ್ಯ ಹೂಮಾಲೆಯಿಂದ ಸತ್ಕರಿಸಿದ ಬಳಿಕ ಮಠದ ವತಿಯಿಂದ ಅಜಾನುಬಾಹು ಶ್ರೀಗಳು ಅತಿಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಶಾಸಕ ಜಮೀರ್ ಅಹ್ಮದ್ (Zameer Ahmed) ಅವರನ್ನೂ ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ