Belagavi: ಬಾಲ್ಯದ ಕ್ರೀಡೆಗಳನ್ನು ಆಡಿ ಖುಷಿಪಟ್ಟ ಸ್ಪೀಕರ್​​ ಯು.ಟಿ. ಖಾದರ್​​

Updated By: ಪ್ರಸನ್ನ ಹೆಗಡೆ

Updated on: Dec 11, 2025 | 3:21 PM

ಚಿನ್ನಿ ದಾಂಡು ಸೇರಿ ಕೆಲ ಬಾಲ್ಯದ ಕ್ರೀಡೆಗಳನ್ನು ಆಡಿ ವಿಧಾನ ಸಭೆಯ ಸ್ಪೀಕರ್​​ ಯು.ಟಿ. ಖಾದರ್​​ ಖುಷಿ ಪಟ್ಟ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ. ನಗರದ ಟಿಳಕವಾಡಿ ಲೀಲೆ ಮೈದಾನದಲ್ಲಿ ಶಾಸಕ ಅಭಯ್ ಪಾಟೀಲ್ ಆಯೋಜಿಸಿದ್ದ ಬಾಲ್ಯದ ಗ್ರಾಮೀಣ ಕ್ರೀಡೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ತಾವೂ ವಿವಿಧ ಆಟಗಳಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.

ಬೆಳಗಾವಿ, ಡಿಸೆಂಬರ್​​ 11: ಬೆಳಗಾವಿ ನಗರದ ಟಿಳಕವಾಡಿ ಲೀಲೆ ಮೈದಾನದಲ್ಲಿ ಶಾಸಕ ಅಭಯ್ ಪಾಟೀಲ್ ಆಯೋಜಿಸಿದ್ದ ಬಾಲ್ಯದ ಗ್ರಾಮೀಣ ಕ್ರೀಡೆಗಳ ಕಾರ್ಯಕ್ರಮಕ್ಕೆ ವಿಧಾನ ಸಭೆ ಸ್ಪೀಕರ್​​ ಯು.ಟಿ. ಖಾದರ್​​ ಚಾಲನೆ ನೀಡಿದ್ದಾರೆ. ಗೋಲಿ ಆಡುವ ಮೂಲಕ ಸ್ಪೀಕರ್​ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಿದ್ದು, ಚಿನ್ನಿ ದಾಂಡು ಸೇರಿ ಕೆಲ ಕ್ರೀಡೆಗಳನ್ನು ತಾವೇ ಆಡಿ ಸಂತಸ ಪಟ್ಟರು. ಇತ್ತೀಚೆಗೆ ಇಂತಹ ಕ್ರೀಡೆಗಳು ಮರೆಯಾಗುತ್ತಿರುವ ಹಿನ್ನಲೆ ಯುವ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋಲಿ, ರಿಂಗ್ ಆಟ, ಚಿನ್ನಿ ದಾಂಡು, ಲಗೋರಿ ಸೇರಿದಂತೆ ವಿವಿಧ ಬಾಲ್ಯದ ಕ್ರೀಡೆಗಳನ್ನು ಆಡಿ ನೆರೆದಿದ್ದವರು ಖುಷಿ ಪಟ್ಟರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.