ಮಾಧ್ಯಮದವರಿಗೆ ನೈತಿಕತೆ ಇದ್ದರೆ ರಾಮನಗರದ ಬಗ್ಗೆ ಕುಮಾರಸ್ವಾಮಿ ಆಡಿದ ಮಾತುಗಳನ್ನು ಜನರ ಮುಂದಿಡಲಿ: ಡಿಕೆ ಸುರೇಶ್

Updated on: Jun 29, 2024 | 11:58 AM

ಒಕ್ಕಲಿಗ ಸಮಾಜದವರು ಸಹಕಾರ ಸಚಿವ ಕೆಎನ್ ರಾಜಣ್ಣ ಒಕ್ಕಲಿಗ ಮಹಾ ಸಂಸ್ಥಾನ ಮಠದ ಸ್ವಾಮೀಜಿ ಚಂದ್ರಶೇಖರ ಶ್ರೀಗಳ ಕ್ಷಮೆ ಕೇಳಬೇಕು ಎಂದಿರುವ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್ ಅದು ಸಮಾಜದ ತೀರ್ಮಾನ ಎಂದು ಹೇಳಿದರು. ಏತನ್ಮಧ್ಯೆ, ಡಿಕೆ ಶಿವಕುಮಾರ್ ರಾಜಣ್ಣಗೆ ಬಾಯಿಗೆ ಬೀಗ ಜಡಿದುಕೊಂಡಿರುವಂತೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ.

ರಾಮನಗರ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಂಸದ ಡಿಕೆ ಸುರೇಶ್ ತಮ್ಮ ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ಚನ್ನಪಟ್ಟಣ ವಿಧಾನಸಭಾ ಉಪ ಚುನಾವನೆಯಲ್ಲಿ ನಿಮ್ಮ ಕುಟುಂಬದಿಂದ ಯಾರಾದರೂ ಸ್ಪರ್ಧಿಸುತ್ತಿರಾ ಅಂತ ಕೇಳಿದ ಪ್ರಶ್ನೆಗೆ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಮತ್ತು ಮಾಧ್ಯಮದವರು ನನ್ನ ಆಚಾರ ವಿಚಾರಗಳನ್ನು ತಿರಸ್ಕಾರ ಮಾಡಿದ್ದಾರೆ, ಹಾಗಾಗಿ ಇನ್ನು ಮುಂದೆ ನಾನು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಕುಮಾರಸ್ವಾಮಿಯವರು ತಾನೇ ಚನ್ನಪಟ್ಟಣಕ್ಕೆ ಮೊದಲು ಬಂದಿದ್ದು ಹೇಳಿರುವುದಕ್ಕೆ ಉತ್ತರಿಸಿದ ಸುರೇಶ್, ಯಾರು ಮೊದಲು ಬಂದಿದ್ದರು ಯಾರು ನಂತರ ಬಂದರು ಅನ್ನೋದನ್ನು ಕಟ್ಟಿಕೊಂಡು ಏನೂ ಆಗಬೇಕಿಲ್ಲ, ರಾಮನಗರ ಒಂದು ಕಣ್ಣು ಹೋಯಿತು, ಚನ್ನಪಟ್ಟಣದಲ್ಲಿ ಮತ್ತೊಂದು ಕಣ್ಣೂ ಹೋಯಿತು ಅಂತ ಸೂಚ್ಯವಾಗಿ ಹೇಳಿ ಮಾಧ್ಯಮದವರಿಗೆ ನೈತಿಕತೆ ಇದ್ದರೆ ಕುಮಾರಸ್ವಾಮಿಯವರು ಹಿಂದೆ ನೀಡಿದ ಹೇಳಿಕೆಗಳನ್ನು ಜನರ ಮುಂದೆ ಇಡಲಿ ಅನ್ನುತ್ತಾರೆ. ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿತ್ರನಟ ದರ್ಶನ್ ಅವರನ್ನು ಕಣಕ್ಕಿಳಿಸುವ ಯೋಚನೆ ಇತ್ತೇ ಎಂದು ಕೇಳಿದ ಪ್ರಶ್ನೆಗೆ ಸುರೇಶ್ ಕುಚೇಷ್ಟೆಯ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆಯಿಲ್ಲ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯೋಗ್ಯತೆ ಇಲ್ಲವೆಂದಾದರೆ ಚುನಾವಣೆಗೆ ಹೋಗುವುದು ವಾಸಿ: ಕೆಎನ್ ರಾಜಣ್ಣ ವಿರುದ್ಧ ಡಿಕೆ ಸುರೇಶ್ ಆಕ್ರೋಶ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More