Video: ಪತಿಯ ಅಂತ್ಯಕ್ರಿಯೆಗೆ ಇನ್ನೂ ಕಣ್ಣು ಬಿಡದ ಕಂದನ ಜತೆ ಸ್ಟ್ರೆಚರ್‌ನಲ್ಲಿ ಬಂದ ಸೈನಿಕನ ಪತ್ನಿ
ಇಂಥಾ ಸ್ಥಿತಿ ಯಾರಿಗೂ ಬೇಡ, ಇಬ್ಬರೂ ತಮ್ಮ ಮುದ್ದು ಮಗುವಿನ ಬರುವಿಕೆಗಾಗಿ ಕಾತುರದಿಂದ ಕಾದಿದ್ದರು. ಇನ್ನೇನು ಹೆರಿಗೆ ದಿನವೂ ಬಂದೇ ಬಟ್ಟಿತ್ತು, ಅಲ್ಲಿ ಪತ್ನಿ ಹೆರಿಗೆ ನೋವಿನಿಂದ ಬಳಲುತ್ತಿದ್ದರೆ ಇತ್ತ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದಾದ ಬಳಿಕ ಸುಸೂತ್ರವಾಗಿ ಹೆರಿಗೆ ಏನೋ ಆಯಿತು ಆದರೆ ಮಗುವನ್ನು ನೋಡಲು ತಂದೆಯೇ ಇರಲಿಲ್ಲ. ಇದು ಸೈನಿಕನ ಕುಟುಂಬದ ಮನಕಲಕುವ ಕತೆ.
ಸತಾರ, ಜನವರಿ 12: ಇಂಥಾ ಸ್ಥಿತಿ ಯಾರಿಗೂ ಬೇಡ, ಇಬ್ಬರೂ ತಮ್ಮ ಮುದ್ದು ಮಗುವಿನ ಬರುವಿಕೆಗಾಗಿ ಕಾತುರದಿಂದ ಕಾದಿದ್ದರು. ಇನ್ನೇನು ಹೆರಿಗೆ ದಿನವೂ ಬಂದೇ ಬಟ್ಟಿತ್ತು, ಅಲ್ಲಿ ಪತ್ನಿ ಹೆರಿಗೆ ನೋವಿನಿಂದ ಬಳಲುತ್ತಿದ್ದರೆ ಇತ್ತ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದಾದ ಬಳಿಕ ಸುಸೂತ್ರವಾಗಿ ಹೆರಿಗೆ ಏನೋ ಆಯಿತು ಆದರೆ ಮಗುವನ್ನು ನೋಡಲು ತಂದೆಯೇ ಇರಲಿಲ್ಲ. ಇದು ಸೈನಿಕನ ಕುಟುಂಬದ ಮನಕಲಕುವ ಕತೆ.
ಪಿತೃತ್ವ ರಜೆ ಪಡೆದು ಊರಿಗೆ ಬಂದಿದ್ದ ಸೈನಿಕ ಪ್ರಮೋದ್ ಪರಶುರಾಮ್, ಬೈಕಿನಲ್ಲಿ ತೆರಳುತ್ತಿರುವಾಗ ಪಿಕಪ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸತಾರದಲ್ಲಿ ನಡೆದಿದೆ. ಜಾಧವ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಮರಣದ ಕೆಲವು ಗಂಟೆಗಳ ನಂತರ, ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ ಯೋಧನ ಮೃತದೇಹವನ್ನು ಮನೆಗೆ ತರಲಾಗುತ್ತಿದ್ದಂತೆ, ಅವರ ಪತ್ನಿಯನ್ನು ಆಸ್ಪತ್ರೆಯಿಂದ ಸ್ಟ್ರೆಚರ್‌ನಲ್ಲಿ ಪತಿಯ ಅಂತ್ಯಕ್ರಿಯೆಗಾಗಿ ಕರೆತರಲಾಯಿತು.
ಹೆರಿಗೆ ನೋವೇ ಇನ್ನೂ ಕಡಿಮೆಯಾಗದಿರುವಾಗ ಪತಿಯ ಅಗಲುವಿಕೆಯು ಮತ್ತಷ್ಟು ನೋವುಂಟು ಮಾಡಿತ್ತು. ಪತ್ನಿ ತನ್ನ ಪತಿಯ ಮೃತದೇಹದ ಪಕ್ಕದಲ್ಲಿ ಅಳುತ್ತಿರುವು ಎಲ್ಲರ ಕಣ್ಣಲ್ಲಿ ಕಣ್ಣೀರು ಜಿನುಗುವಂತೆ ಮಾಡಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ