Video: ಗಾಜಿಯಾಬಾದ್ ಅಪಾರ್ಟ್ಮೆಂಟ್ನ ಲಿಫ್ಟ್ ಬಳಿ ಮಹಿಳೆ ಮೇಲೆ ಸಾಕು ನಾಯಿ ದಾಳಿ
ಗಾಜಿಯಾಬಾದ್ನ ಅಪಾರ್ಟ್ಮೆಂಟ್ನ ಲಿಫ್ಟ್ ಬಳಿ ಸಾಕು ನಾಯಿಯೊಂದು ಮಹಿಳೆ ಮೇಲೆ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಲಿಫ್ಟ್ಗಾಗಿ ಕಾಯುತ್ತಿದ್ದ ಮನೆಕೆಲಸದಾಕೆ ಮೇಲೆ ಮಾಲೀಕರ ಮುಂದೆಯೇ ನಾಯಿ ಕಚ್ಚಿದೆ. ಆದರೆ ಏನಾಯಿತು ಎಂದು ಕೂಡ ವಿಚಾರಿಸದೆ ನಾಯಿ ಜತೆ ನಾಯಿ ಮಾಲೀಕ ಹೊರಟುಹೋಗಿರುವ ವಿಡಿಯೋ ವೈರಲ್ ಆಗಿದೆ
ಗಾಜಿಯಾಬಾದ್, ಆಗಸ್ಟ್ 20: ಗಾಜಿಯಾಬಾದ್ನ ಅಪಾರ್ಟ್ಮೆಂಟ್ನ ಲಿಫ್ಟ್ ಬಳಿ ಸಾಕು ನಾಯಿಯೊಂದು ಮಹಿಳೆ ಮೇಲೆ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಲಿಫ್ಟ್ಗಾಗಿ ಕಾಯುತ್ತಿದ್ದ ಮನೆಕೆಲಸದಾಕೆ ಮೇಲೆ ಮಾಲೀಕರ ಮುಂದೆಯೇ ನಾಯಿ ಕಚ್ಚಿದೆ. ಆದರೆ ಏನಾಯಿತು ಎಂದು ಕೂಡ ವಿಚಾರಿಸದೆ ನಾಯಿ ಜತೆ ನಾಯಿ ಮಾಲೀಕ ಹೊರಟುಹೋಗಿರುವ ವಿಡಿಯೋ ವೈರಲ್ ಆಗಿದೆ.
ಸಂಜೆ 7.30ರ ಸುಮಾರಿಗೆ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ತನ್ನ ತಾಯಿ ಹಾಗೂ ನಾಯಿ ಜತೆ ಲಿಫ್ಟ್ನಲ್ಲಿ ಬಂದಿದ್ದ. ಬಾಗಿಲು ತೆರೆಯುತ್ತಿದ್ದಂತೆ ನಾಯಿಯು ಲಿಫ್ಟ್ನಿಂದ ಹೊರ ಬಂದು ಮಹಿಳೆ ಕಾಲನ್ನು ಕಚ್ಚಿದೆ. ಆಕೆ ಕೂಗಿಕೊಂಡಾಗ ನಾಯಿ ಮಾಲೀಕ ಲಿಫ್ಟ್ನಿಂದ ಹೊರಬಂದು ನಾಯಿಯನ್ನು ಮತ್ತೆ ಕರೆದುಕೊಂಡು ಲಿಫ್ಟ್ ಒಳಗೆ ಹೋಗಿದ್ದಾನೆ. ಆದರೆ ಮಹಿಳೆಗೆ ಏನಾಗಿದೆ ಎಂದೂ ವಿಚಾರಿಸಿಲ್ಲ, ಆಕೆ ನೋವಿನಿಂದ ನರಳುತ್ತಾ ಕುಂಟು ಹಾಕುತ್ತಾ ಹೋಗುತ್ತಿರುವುದನ್ನು ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ