ಬಿಗ್ ಬಾಸ್ ಗೆಲ್ಲೋದು ಇವರೇ; ಭವಿಷ್ಯ ನುಡಿದ ಲಿಖಿತ್
ಬಿಗ್ ಬಾಸ್ ಕನ್ನಡದಲ್ಲಿ ಯಾರು ಟಾಪ್ 5 ಸ್ಥಾನ ಪಡೆಯುತ್ತಾರೆ ಮತ್ತು ಯಾರು ವಿಜೇತರಾಗುತ್ತಾರೆ ಎಂದು ಲಿಖಿತ್ ವಿಶ್ಲೇಷಿಸಿದ್ದಾರೆ. ಮಂಜು, ಗಗನ್, ಆಸಿಯಾ, ಸೌಂದರ್ಯ ಮತ್ತು ಶಾಸ್ತ್ರಿ ಟಾಪ್ 5 ರಲ್ಲಿ ಇರುತ್ತಾರೆ ಎಂದು ಹೇಳಿರುವ ಅವರು, ತಮ್ಮ ಬದಲಾವಣೆಯಿಂದಾಗಿ ಮಂಜ 100% ವಿಜೇತರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಲಿಖಿತ್ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಸ್ಪರ್ಧಿಗಳು ಇನ್ನೂ ಆಟವನ್ನು ಅರ್ಥಮಾಡಿಕೊಳ್ಳುವ ಹಂತದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. ಯಾರು ಟಾಪ್ 5 ರಲ್ಲಿ ಇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಲಿಖಿತ್, ‘ಮಂಜು, ಗಗನ್, ಆಸಿಯಾ, ಸೌಂದರ್ಯ, ಮತ್ತು ಕಿರಣ್ ಶಾಸ್ತ್ರಿ ಅವರ ಹೆಸರನ್ನು ಹೇಳಿದ್ದಾರೆ. ಈ ಐದು ಮಂದಿಯಲ್ಲಿ, ಶಾಸ್ತ್ರಿ ಖಂಡಿತವಾಗಿಯೂ ಕೊನೆಯವರೆಗೂ ಇರುತ್ತಾರೆ ಎಂದು ಭವಿಷ್ಯ ಹೇಳಿದ್ದಾರೆ. ‘ಮಂಜು ನೂರಕ್ಕೆ ನೂರು ಗೆಲ್ಲುತ್ತಾರೆ. ಅವನ ವ್ಯಕ್ತಿತ್ವದಲ್ಲಿ ಆಗಿರುವ ಬದಲಾವಣೆ ಇದಕ್ಕೆ ಮುಖ್ಯ ಕಾರಣ’ ಎಂದು ಅವರು ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
