Live: ಹಿರಿಯ ಗಾಯಕಿ ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ

Updated on: Jul 12, 2026 | 8:23 AM

S Janaki Passes Away: ಹೃದಯಾಘಾತದಿಂದ ನಿನ್ನೆ ಮೃತಪಟ್ಟಿರುವ ಹಿರಿಯ ಗಾಯಕಿ ಎಸ್. ಜಾನಕಿ (88) ಅವರ ಅಂತಿಮ ದರ್ಶನಕ್ಕೆ ಮೈಸೂರಿನ ಮಹಾರಾಜ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರ ಅಂತಿಮ ವಿಧಿ ವಿಧಾನಗಳು ಮೈಸೂರಿನಲ್ಲಿಯೇ ಇಂದು ನಡೆಯಲಿದ್ದು, ಮೊಮ್ಮಗಳು ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ. ಗಾನಕೋಗಿಲೆಯ ಅಂತಿಮ ದರ್ಶನದ ನೇರಪ್ರಸಾರ ಇಲ್ಲಿದೆ.

ಮೈಸೂರು, ಜುಲೈ 12: ಹಿರಿಯ ಗಾಯಕಿ ಎಸ್​.ಜಾನಕಿ(88) ಅವರ ಅಂತಿಮ ವಿಧಿ ವಿಧಾನಗಳು ಮೈಸೂರಿನಲ್ಲಿಯೇ ಇಂದು ನಡೆಯಲಿದ್ದು, ಮೊಮ್ಮಗಳು ಅಪ್ಸರಾ ಅಂತ್ಯಕ್ರಿಯೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಮಹಾರಾಜ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ನೂರಾರು ಮಂದಿ ಗಣ್ಯರು ಜಾನಕಿ ಅವರಿಗೆ ನಮನ ಸಲ್ಲಿಸಿದ್ದಾರೆ. ಮೈದಾನದಲ್ಲಿ ಸುಮಾರು 800 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಮೈಸೂರಿನ ಗದ್ದಿಗೆ ರಸ್ತೆಗೆ ಎಸ್​​.ಜಾನಕಿ ಹೆಸರು ಇಡಲು ಶಾಸಕ ಜಿ.ಟಿ.ದೇವೇಗೌಡರಿಗೆ ಜಾನಕಿ ಕೇರ್​​ಟೇಕರ್ ನವೀನ್​ ಮನವಿ ಮಾಡಿದ್ದು, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವೆ ಎಂದು ಜಿಟಿಡಿ ಕೂಡ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jul 12, 2026 08:22 AM
Follow Us