ರಾಯಚೂರು: CCTVಯಲ್ಲಿ ಸೆರೆಯಾಗಿದೆ ಲೋಕಲ್ ಬ್ರ್ಯಾಂಡ್ ಎಣ್ಣೆ ಕಳ್ಳತನ ಕೈಚಳಕ

| Updated By: ಆಯೇಷಾ ಬಾನು

Updated on: Aug 18, 2024 | 11:42 AM

ರಾಯಚೂರಿನಲ್ಲಿ ಡಾಬಾವೊಂದರಲ್ಲಿ ಹಣ ಕಳ್ಳತನ ಮಾಡದೇ, ಬರೀ ಲೋಕಲ್ ಬ್ರ್ಯಾಂಡ್ ಎಣ್ಣೆ ಕಳ್ಳತನ ಮಾಡಲಾಗಿದೆ. ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಈ ಹಿಂದೆ ನಿತ್ಯ ಕಳ್ಳತನವಾಗುತ್ತಿದ್ದ ಹಿನ್ನೆಲೆ ಡಾಬಾದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಹೀಗಾಗಿ ಕೃತ್ಯ ಸೆರೆಯಾಗಿದೆ.

ರಾಯಚೂರು, ಆಗಸ್ಟ್​.18: ಲಿಂಗಸುಗೂರು ತಾಲೂಕಿನ ಮಾಕಾಪುರ ಗ್ರಾಮದ ಬಳಿಯ ಡಾಬಾವೊಂದರಲ್ಲಿ ಮದ್ಯ ಕಳ್ಳತನವಾಗಿದೆ. ಟೀನ್ ಶೆಡ್ ಗ್ಯಾಪ್ ಮೂಲಕ ಡಾಬಾ ಒಳನುಗ್ಗಿ ಮದ್ಯ ಕಳ್ಳತನ ಮಾಡಲಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳ ಹಣ ಕಳ್ಳತನ ಮಾಡದೇ, ಬರೀ ಲೋಕಲ್ ಬ್ರ್ಯಾಂಡ್ ಎಣ್ಣೆಯನ್ನು ಕಳ್ಳತನ ಮಾಡಿದ್ದಾನೆ.

ಈ ಹಿಂದೆ ನಿತ್ಯವೂ ಈ ಡಾಬಾದಲ್ಲಿದ್ದ ಟೆಟ್ರಾ ಪ್ಯಾಕೆಟ್ ಎಣ್ಣೆಗಳು ಕಳ್ಳತನವಾಗುತ್ತಿದ್ದವು. ಈ ಹಿನ್ನೆಲೆ ಡಾಬಾ ಮಾಲೀಕ ಬಸವರಾಜ್ ಡಾಬಾದಲ್ಲಿ ಸಿಸಿಟಿವಿ ಅಳವಡಿಸಿದ್ದರು. ಸದ್ಯ ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳನ ಕೈಚಳಕ ಬಯಲಾಗಿದೆ. ಬೀಗ ಮುರಿಯದೇ ಟೀನ್ ಶೆಡ್ ಗ್ಯಾಪ್ ಮೂಲಕ ಒಳನುಗ್ಗಿ ಕೃತ್ಯ ಎಸಗಲಾಗಿದೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:40 am, Sun, 18 August 24

Follow us on