ತುಮಕೂರು: ಪಾವಗಡ ತಾಲೂಕು ಆಸ್ಪತ್ರೆ ಪಕ್ಕದಲ್ಲಿರುವ ಕಸ್ತೂರಬಾ ಬಾಲಕಿಯರ ವಸತಿ ಶಾಲೆಗೆ (Kasturba Girls’ Residential School) ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಲೀಂ ಅಹ್ಮದ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯಲ್ಲಿ ಸ್ವಚ್ಛತೆಯೇ ಇಲ್ಲದ್ದನ್ನು ನೋಡಿ ಸಿಟ್ಟಾದ ಲೋಕಾ ಇನ್ಸ್‌ಪೆಕ್ಟರ್, ಸ್ವತಃ ಪೊರಕೆ ಹಿಡಿದು ಕಸ ಗುಡಿಸಿದರು. ಅಲ್ಲದೆ, ಟಿವಿ, ಸಿಸಿಟಿವಿ ಮೇಲೆ ಕೂತಿದ್ದ ಧೂಳನ್ನು ಬಟ್ಟೆಯಿಂದ ಒರೆಸಿ ಶುಚಿಗೊಳಿಸಿದರು. ಉತ್ತಮ ಶೌಚಾಲಯ, ಮಲಗಲು ಸರಿಯಾದ ವ್ಯವಸ್ಥೆಯಿಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ತಂದೆ ತಾಯಿ ಇಲ್ಲದ ಹಾಗೂ ವಲಸೆ ಹೋದಂತವರ ಸುಮಾರು 250 ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ವಸತಿ ಶಾಲೆ ಇದಾಗಿದೆ. ಇಂದು ಬೆಳಿಗ್ಗೆ ಸಿಬ್ಬಂದಿ ಜೊತೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ತುಮಕೂರು: ಪೊಲೀಸ್, ನಿರಾಶ್ರಿತರ ಕೇಂದ್ರದ ಸಿಬ್ಬಂದಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಉಗಾಂಡ ಮಹಿಳೆಯರು
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ