ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಸರ್ಕಾರೀ ನೌಕರರ ಮನೆಗಳ ಮೇಲೆ ಲೋಕಾಯುಕ್ತ ದಾಳಿ, ಬೀದರ್ ಕಾನ್ ಸ್ಟೇಬಲ್ ಕೂಡ ಕುಬೇರ!

ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2023 | 10:56 AM

ಬೀದರ್ ನಗರದ ಒಬ್ಬ ಕಾನ್​ಸ್ಟೇಬಲ್ ಕೂಡ ಆದಾಯಕ್ಕಿಂತ ಹೆಚ್ಚಿ ಆಸ್ತಿ ಸಂಪಾದಿಸಿದ್ದಾನೆ ಅಂದರೆ ನಂಬಿತ್ತೀರಾ? ದಾವಣಗೆರೆಯ ಹೊಳಲ್ಕೆರೆಯಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನೀಯರ್ ಆಗಿರುವ ಕೆ ಮಹೇಶ್ ಮತ್ತು ಬಿಬಿಎಂಪಿಯಲ್ಲಿ ಸಹಾಯಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿರುವ ಅವರ ಪತ್ನಿ ಹೆಚ್ ಭಾರತಿ ಮನೆ ಮೇಲೆ ದಾಳಿ ನಡೆದಿದೆ.

ಬೆಂಗಳೂರು/ಧಾರವಾಡ: ಆದಾಯಕ್ಕೂ ಮೀರಿದ ಮೀರಿದ ಸಂಪತ್ತಿನ (disproportionate Assets) ಒಡೆಯರಾಗಿರುವ ಕೆಲ ಆಧಿಕಾರಿಗಳ ಬೆನ್ನಹುರಿಯಲ್ಲಿ ನಡುಕ ಹುಟ್ಟಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta Sleuths) ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ ಅಕ್ರಮವಾಗಿ ಆಸ್ತಿ ಮಾಡಿಕೊಂಡಿರುವ ಸರ್ಕಾರೀ ನೌಕರರ ಆಸ್ತಿ ವಿವರ (property details) ಪಡೆಯುತ್ತಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ ಬೀದರ್, ಕೊಡಗು, ಚಿತ್ರದುರ್ಗ ಮತ್ತು ದಾವಣಗೆರೆ ಮೊದಲಾದ ಜಿಲ್ಲೆಗಳಲ್ಲಿ ದಾಳಿ ನಡೆದಿದೆ. ಬೀದರ್ ನಗರದ ಒಬ್ಬ ಕಾನ್​ಸ್ಟೇಬಲ್ ಕೂಡ ಆದಾಯಕ್ಕಿಂತ ಹೆಚ್ಚಿ ಆಸ್ತಿ ಸಂಪಾದಿಸಿದ್ದಾನೆ ಅಂದರೆ ನಂಬಿತ್ತೀರಾ? ದಾವಣಗೆರೆಯ ಹೊಳಲ್ಕೆರೆಯಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನೀಯರ್ ಆಗಿರುವ ಕೆ ಮಹೇಶ್ ಮತ್ತು ಬಿಬಿಎಂಪಿಯಲ್ಲಿ ಸಹಾಯಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿರುವ ಅವರ ಪತ್ನಿ ಹೆಚ್ ಭಾರತಿ ಮನೆ ಮೇಲೆ ದಾಳಿ ನಡೆದಿದೆ. ಧಾರವಾಡದಲ್ಲಿ ಸುಜಾತಾ ಮತ್ತು ಸಂತೋಷ್ ಅನಿಶೆಟ್ಟರ್ ದಂಪತಿಗೆ ಸೇರಿದ ಮನೆ ನೋಡಿ. ಇಬ್ಬರಲ್ಲಿ ಯಾರು ಸರ್ಕಾರೀ ನೌಕರರು ಅಂತ ಗೊತ್ತಿಲ್ಲ, ಆದರೆ ಅರಮನೆಯಂಥ ಮನೆ ಕಟ್ಟಿಸಿಕೊಂಡಿದ್ದಾರೆ. ವಿವರಗಳನ್ನು ಎದುರು ನೋಡಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.