Bengaluru: ಮಹಾರಾಣಿ ಕಾಲೇಜು ಬಳಿಯ ಅಂಡರ್​ಪಾಸ್ ನಲ್ಲಿ ಸಿಲುಕಿದ ಲಾರಿ, ಹೊರಗೆಳೆಯಲು ಪೊಲೀಸರಿಂದ ಹರಸಾಹಸ

ಅರುಣ್​ ಕುಮಾರ್​ ಬೆಳ್ಳಿ

Updated on: Jun 07, 2023 | 10:24 AM

ಮಳೆ ಬರಲಿ, ಬಾರದಿರಲಿ; ನಗರದಲ್ಲಿರುವ ಅಂಡರ್​ಪಾಸ್ ಗಳು ನಾಗರಿಕರಿಗೆ ಸಮಸ್ಯೆ ಒಡ್ಡುತ್ತಿರುವುದು ಖೇದಕರ ಸಂಗತಿ.

ಬೆಂಗಳೂರು: ನಗರದಲ್ಲಿ ಇಂದು ಬೆಳಗ್ಗೆ ಮಹಾರಾಣಿ ಕಾಲೇಜು (Maharani College) ಬಳಿಯ ಅಂಡರ್​ಪಾಸ್ (underpass) ಮೂಲಕ ಹಾದು ಆಫೀಸು, ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದವರು ತಾವು ಎದ್ದ ಘಳಿಗೆಯನ್ನು ಶಪಿಸುತ್ತಿದ್ದರು. ಕಾರಣ ನಿಮಗೆ ವಿಡಿಯೋದಲ್ಲಿ ಕಾಣುತ್ತಿದೆ. ಮೈಸೂರು ಬ್ಯಾಂಕ್ ಕಡೆಯಿಂದ ಬಂದ ಲಾರಿಯೊಂದು (lorry) ಅಂಡರ್​ಪಾಸ್ ನಲ್ಲಿ ಸಿಲುಕಿಕೊಂಡುಬಿಟ್ಟಿತ್ತು. ಅದನ್ನು ಅಲ್ಲಿಂದ ಹೊರತೆಗೆಯಲು ಸಂಚಾರಿ ಪೊಲೀಸರು ಹರಸಾಹಸ ಪಡಬೇಕಾಯಿತು. ಅಂಡರ್ ಪಾಸ್ ಬಳಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಪೊಲೀಸರು ವಾಹನ ಸವಾರರಿಗೆ ಬದಲೀ ರಸ್ತೆಗಳಿಂದ ಹೋಗುವಂತೆ ಹೇಳಿದರು. ಮಳೆ ಬರಲಿ, ಬಾರದಿರಲಿ; ನಗರದಲ್ಲಿರುವ ಅಂಡರ್​ಪಾಸ್ ಗಳು ನಾಗರಿಕರಿಗೆ ಸಮಸ್ಯೆ ಒಡ್ಡುತ್ತಿರುವುದು ಖೇದಕರ ಸಂಗತಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.