ದೆಹಲಿ ಮಾದರಿಯಂತೆ ಬೆಂಗಳೂರಿನ ಅಂಡರ್​ಪಾಸ್ ರಸ್ತೆಗಳಿಗೆ ಹೈಟೆಕ್ ಟಚ್​ ನೀಡಲು ಬಿಬಿಎಂಪಿ ಚಿಂತನೆ: ದಿಲ್ಲಿಯಲ್ಲಿ ಹೇಗಿವೆ? ಇಲ್ಲಿದೆ ವಿವರ

ಬೆಂಗಳೂರು ನಗರದ ಅಂಡರ್​ಪಾಸ್​ನಲ್ಲಿ ನೀರು ತುಂಬಿಕೊಂಡಿದ್ದರ ಪರಿಣಾಮ ಅಮಾಯಕರ ಜೀವ ಬಲಿಯಾದ ಬೆನ್ನಲ್ಲೇ, ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ದೆಹಲಿ ಮಾದರಿ ಅಂಡರ್​ಪಾಸ್ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜಾಗಿದೆ. ಏನಿದು ದೆಹಲಿ ಮಾದರಿ ಅಂಡರ್​ಪಾಸ್? ವಿಶೇಷತೆ ಏನು? ಇಲ್ಲಿದೆ ವಿವರ

ದೆಹಲಿ ಮಾದರಿಯಂತೆ ಬೆಂಗಳೂರಿನ ಅಂಡರ್​ಪಾಸ್ ರಸ್ತೆಗಳಿಗೆ ಹೈಟೆಕ್ ಟಚ್​ ನೀಡಲು ಬಿಬಿಎಂಪಿ ಚಿಂತನೆ: ದಿಲ್ಲಿಯಲ್ಲಿ ಹೇಗಿವೆ? ಇಲ್ಲಿದೆ ವಿವರ
ಬೆಂಗಳೂರು ಅಂಡರ್​ಪಾಸ್ ರಸ್ತೆ
Follow us
ರಮೇಶ್ ಬಿ. ಜವಳಗೇರಾ
|

Updated on: May 23, 2023 | 10:33 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಅಂಡರ್​ಪಾಸ್​ ರಸ್ತೆಗಳಲ್ಲಿ (Bengaluru Underpass) ನೀರು ತುಂಬಿಕೊಂಡಿದ್ದರ ಪರಿಣಾಮ ಅಮಾಯಕರ ಜೀವ ಬಲಿಯಾದ ಬೆನ್ನಲ್ಲೇ, ಬಿಬಿಎಂಪಿ ಅಲರ್ಟ್ ಆಗಿದೆ. ದೆಹಲಿ ಮಾಡಲ್ ಮೊರೆ ಹೋಗಿರುವ ಪಾಲಿಕೆ, ಬೆಂಗಳೂರಿನ ಅಂಡರ್ ಪಾಸ್​ಗಳಿಗೆ ದೆಹಲಿ ಅಂಡರ್​ಪಾಸ್​ಗಳಂತೆ ಹೈಟೆಕ್ ಟಚ್ ಕೊಡಲು ಮುಂದಾಗಿವೆ. ದೆಹಲಿಯಲ್ಲಿರುವ ಅಂಡರ್ ಪಾಸ್ ರಸ್ತೆಗಳನ್ನು ಹೈಟೆಕ್ ಟಚ್ ಮೂಲಕ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಮಳೆ ನೀರು ಶೇಖರಣೆಯಾಗದೆ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇದೆ. ಹೀಗಾಗಿ ಬಿಬಿಎಂಪಿ ಸಹ ದೆಹಲಿ ಮಾಡಲ್ ಫಾಲೋ ಮಾಡಲು ಚಿಂತನೆ ನಡೆಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿವೆ ಯಮರೂಪಿ ಅಂಡರ್ ಪಾಸ್​ಗಳು; ಮಳೆ ಬಂದಾಗ ವಾಹನ ಸವಾರರೆ ಜಾಗ್ರತೆ

ದೆಹಲಿ ಅಂಡರ್​ಪಾಸ್​ಗಳ ವಿಶೇಷತೆ ಏನು?

ರಾಜಧಾನಿ ದೆಹಲಿಯ ಅಂಡರ್ ಪಾಸ್​ಗಳಲ್ಲಿ ಇದೇ ಸಮಸ್ಯೆ ಇತ್ತು. ಮಳೆ ಬಂದರೆ ಸಾಕು ಅಂಡರ್​ಪಾಸ್​ಗಳು ಜಲಾವೃತವಾಗುತ್ತಿದ್ದವು. ಬಳಿಕ ದೆಹಲಿಯ ಅಂಡರ್ ಪಾಸ್ ಗಳಲ್ಲಿ ತಂತ್ರಜ್ಞಾನದ ಸಾಹಾಯದಿಂದ ಅಂಡರ್ ಪಾಸ್ ಗೆ ಹೈಟೆಕ್ ಟಚ್ ನೀಡಲಾಗಿದೆ. ಈಗ ಎಷ್ಟೇ ದೊಡ್ಡ ಮಳೆ ಬಂದು ನೀರು ನುಗ್ಗಿದರೂ ಅಂಡರ್ ಪಾಸ್ ನಲ್ಲಿ ಶೇಖರಣೆಯಾಗದೆ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇದೆ. ಜೊತೆಗೆ ಹೈಟೆಕ್ ಟಚ್ ನಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ.

ಅಂಡರ್​ಪಾಸ್ ಸುತ್ತಲ್ಲಿನ ಪ್ರದೇಶವನ್ನ ಎತ್ತರಿಸುವುದು. ಅಂಡರ್ ಪಾಸ್​ಗೆ ಹೊರ ಭಾಗದಿಂದ ನೀರು ಶೇಖರಣೆಯಾಗದಂತೆ ತಡೆ ನಿರ್ಮಾಣ ಮಾಡೋದು. ಅಂಡರ್​ಪಾಸ್​ಗೆ ನುಗ್ಗುವ ನೀರು ಹೀರಿಕೊಳ್ಳಲು ದೊಡ್ಡ ಗಾತ್ರದ ಇಂಗು ಗುಂಡಿ ನಿರ್ಮಿಸೋದು. ನೀರು ಹೊರ ಹಾಕಲು ಸ್ವಯಂ ಚಾಲಿತ ಪಂಪ್ ಸೆಟ್ ಅಳವಡಿಸೋದು, ಹೆವಿ ಡ್ಯೂಟಿ ಸಾಮರ್ಥ್ಯದ ಮೋಟಾರ್ ಅಳವಡಿಸೋದು. ಮಳೆಗಾಲದ ಸಮಯದಲ್ಲಿ ಅಂಡರ್ ಪಾಸ್ ನಿಗಾವಹಿಸಲು ಸಿಸಿಟಿವಿ ಅಳವಡಿಸಿದ್ದಾರೆ.

ಇದನ್ನೂ ಒದಿ: Underpasses in Bengaluru: ಬೆಂಗಳೂರಿನಲ್ಲೆಷ್ಟಿವೆ ಅಂಡರ್​ಪಾಸ್​ಗಳು? ಇಲ್ಲಿದೆ ವಿವರ

ಬಿಬಿಎಂಪಿ ಸಿದ್ಧತೆಗಳು ಏನು.?

  1. ಕೆ.ಆರ್. ಸರ್ಕಲ್​ನ ಇಳಿಜಾರಿನಲ್ಲಿ ನಿರ್ಮಿಸಿರುವ 4 ರಸ್ತೆಗಳ ಮತ್ತು ಕೆ.ಆರ್.ವೃತ್ತದ ರಸ್ತೆ ಮೇಲೆ ಮೇಲೆ ಬೀಳುವ ಎಲ್ಲಾ ಮಳೆ ನೀರು ಕೆಳಸೇತುವೆಯ ಚರಂಡಿಗೆ ಆಗಮಿಸುತ್ತಿದ್ದು, ಸದರಿ ಚರಂಡಿ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ಪ್ರಸ್ತುತ ಬೆಂಗಳೂರು ನಗರದಲ್ಲಿ ಕಡಿಮೆ ಅವಧಿಯಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ, ಎಲ್ಲಾ ಮಳೆ ನೀರು ಕೆಳಸೇತುವೆಗೆ ಹೋಗದಂತೆ, ಕೆಳಸೇತುವೆಯ ಏರುವ ಮತ್ತು ಇಳಿಯುವ ಱಂಪ್​ ಮುಂಭಾಗದಲ್ಲಿ ಪ್ರತ್ಯೇಕ ಚರಂಡಿ ನಿರ್ಮಿಸಿ, ನೇರವಾಗಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ.
  2. ರಸ್ತೆಯ ಮೇಲ್ಭಾಗದಿಂದ ಮಳೆ ನೀರು ಕೆಳಸೇತುವೆಗೆ ಹೋಗದಂತೆ ಱಂಪ್​ ಮುಂಭಾಗದಲ್ಲಿ ಪ್ರತ್ಯೇಕವಾಗಿ ಚರಂಡಿ ನಿರ್ಮಿಸುವ ಜೊತೆಗೆ ಒಂದು ರಸ್ತೆ ಉಬ್ಬರ ಸಹ ನಿರ್ಮಿಸಲು ಉದ್ದೇಶಿಸಲಾಗಿದೆ.
  3. ಕೆಳಸೇತುವೆಯ ಕೆಳಭಾಗದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನ ಅಳವಡಿಸುವುದರ ಜೊತೆಗೆ, Vertical Clearance Gauge Beam ಅನ್ನು ಆಳವಡಿಸುವುದು. ಅತೀ ಪ್ರವಾಹ ಉಂಟಾದ ತುರ್ತು ಸಂದರ್ಭಗಳಲ್ಲಿ ಒಂದು Boom Barrier ಅನ್ನು ಸಹ ನಿರ್ಮಿಸಿ ಕೆಳಸೇತುವೆಯ ವಾಹನ ನಿರ್ಬಂಧ ಪಡಿಸುವ ಕ್ರಮವನ್ನು ಸಂಚಾರಿ ಪೊಲೀಸ್​ ಇಲಾಖೆಯ ಸಹಯೋಗದಿಂದ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.

ಅಂಡರ್​ಪಾಸ್​ನಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು

ರಸ್ತೆಯ ಮೇಲ್ಭಾಗದಿಂದ ಮಳೆ ನೀರು ಕೆಳಸೇತುವೆಗೆ ಹೋಗದಂತೆ ಱಂಪ್​ ಮುಂಭಾಗದಲ್ಲಿ ಪ್ರತ್ಯೇಕವಾಗಿ ಚರಂಡಿ ನಿರ್ಮಿಸುವ ಜೊತೆಗೆ ಒಂದು ರಸ್ತೆ ಉಬ್ಬರ ಸಹ ನಿರ್ಮಿಸಲು ಉದ್ದೇಶಿಸಲಾಗಿದೆ. ಕೆಳಸೇತುವೆಯ ಕೆಳಭಾಗದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನ ಅಳವಡಿಸುವುದರ ಜೊತೆಗೆ, Vertical Clearance Gauge Beam ಅನ್ನು ಆಳವಡಿಸುವುದು. ಅತೀ ಪ್ರವಾಹ ಉಂಟಾದ ತುರ್ತು ಸಂದರ್ಭಗಳಲ್ಲಿ ಒಂದು Boom Barrier ಅನ್ನು ಸಹ ನಿರ್ಮಿಸಿ ಕೆಳಸೇತುವೆಯ ವಾಹನ ನಿರ್ಬಂಧ ಪಡಿಸುವ ಕ್ರಮವನ್ನು ಸಂಚಾರಿ ಪೊಲೀಸ್​ ಇಲಾಖೆಯ ಸಹಯೋಗದಿಂದ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.

ಒಟ್ಟಿನಲ್ಲಿ ಮಳೆ ಬಂದರೆ ಕೆರೆಯಂತಾಗೋ ಬಿಬಿಎಂಪಿ ಅಂಡರ್​ಪಾಸ್​ಗಳಿಂದ ಮುಕ್ತಿ ಹೊಂದಲು, ಈ ಮೂರು ಕ್ರಮಗಳನ್ನು 15 ದಿನಗಳಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲು ಬಿಬಿಎಂಪಿ ಉದ್ದೇಶಿದೆ. ಆದರೆ ಈ ಯೋಜನೆ ಎಷ್ಟು ಬೇಗ ಬೆಂಗಳೂರಿನಲ್ಲಿ ಜಾರಿಯಾಗುತ್ತೆ..? ಅದು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿರುತ್ತೆ ಎನ್ನುವುದನ್ನು ನೋಡಬೇಕಿದೆ.