Underpasses in Bengaluru: ಬೆಂಗಳೂರಿನಲ್ಲೆಷ್ಟಿವೆ ಅಂಡರ್ಪಾಸ್ಗಳು? ಇಲ್ಲಿದೆ ವಿವರ
ಬೆಂಗಳೂರಿನಲ್ಲಿ ಒಟ್ಟು ಎಷ್ಟು ಅಂಡರ್ಪಾಸ್ಗಳಿವೆ? ಅವುಗಳು ಯಾವಾಗ ನಿರ್ಮಾಣವಾಗಿದ್ದವು? ಇಲ್ಲಿದೆ ಮಾಹಿತಿ
ಬೆಂಗಳೂರು: ನಗರದ ಕೆಆರ್ ಸರ್ಕಲ್ (KR Circle) ಅಂಡರ್ಪಾಸ್ನಲ್ಲಿ ಕಾರು ಮುಳುಗಿ ಯುವತಿ ಸಾವನ್ನಪ್ಪಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಳೆ ಬಂದಾಗದ ನಗರದ ಬಹುತೇಕ ಅಂಡರ್ಪಾಸ್ಗಳಲ್ಲಿ (Under-Passes) ನೀರು ನಿಲ್ಲುತ್ತಿವೆ. ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದಿರುವುದು, ಅಂಡರ್‌ಪಾಸ್‌ಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಇತ್ಯಾದಿ ಕಾರಣಗಳಿಂದ ಅಂಡರ್ಪಾಸ್ಗಳು ಕೃತಕ ಬಾವಿಗಳಂತಾಗುತ್ತಿವೆ. ಪರಿಣಾಮವಾಗಿ ವಾಹನ ಸಂಚಾರರ ಪ್ರಾಣಕ್ಕೆ ಸಂಚಕಾರ ಎದುರಾಗುತ್ತಿದೆ. ಈ ಮಧ್ಯೆ, ಯುವತಿ ಸಾವು ಘಟನೆ ಬೆನ್ನಲ್ಲೇ ನಗರದಲ್ಲಿರುವ ಪ್ರಮುಖ 20 ಅಂಡರ್‌ಪಾಸ್‌ಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ನಿರ್ದೇಶನ ನೀಡಿತ್ತು.
ಹಾಗಿದ್ದರೆ ಬೆಂಗಳೂರಿನಲ್ಲಿ ಒಟ್ಟು ಎಷ್ಟು ಅಂಡರ್ಪಾಸ್ಗಳಿವೆ? ಅವುಗಳು ಯಾವಾಗ ನಿರ್ಮಾಣವಾಗಿದ್ದವು? 2023-24ನೇ ಸಾಲಿನಲ್ಲಿ ಬಿಬಿಎಂಪಿ ಮಂಡನೆ ಮಾಡಿರುವ ಬಜೆಟ್ನಲ್ಲಿ ಉಲ್ಲೇಖಿಸಿರುವ ಪ್ರಕಾರ ನಗರದಾದ್ಯಂತ 42 ಫ್ಲೈಓವರ್ಗಳು, 28 ಅಂಡರ್ಪಾಸ್ಗಳು ಇವೆ. ಅಂಡರ್‌ಪಾಸ್‌ಗಳ ವಿವರ ಇಲ್ಲಿದೆ.
ಸ್ಥಳ – ಅಂಡರ್‌ಪಾಸ್ ಹೆಸರು (ನಿರ್ಮಾಣವಾದ ಇಸವಿ)
ಗುಟ್ಟಹಳ್ಳಿ – ಕಾವೇರಿ ಜಂಕ್ಷನ್ ಅಂಡರ್‌ಪಾಸ್ (2013)
ಸಿವಿ ರಾಮನ್ ರಸ್ತೆ – ಸಿಎನ್ಆರ್ ರಾವ್ ಅಂಡರ್ ಪಾಸ್ (2014)
ಹೊಸಕೆರೆಹಳ್ಳಿ – ಮುತ್ತುರಾಜ್ ಜಂಕ್ಷನ್ ಅಂಡರ್ ಪಾಸ್ (2019)
ಬನ್ನೇರುಘಟ್ಟ ರಸ್ತೆ – ಡೈರಿ ಸರ್ಕಲ್ ಅಂಡರ್ ಪಾಸ್ (2004)
ರಾಜಾಜಿನಗರ – ಡಾ. ರಾಜ್‌ಕುಮಾರ್ ರಸ್ತೆ ಕೆಳಸೇತುವೆ (2017)
ಜೆಪಿ ನಗರ – ಜಿಆರ್ ವಿಶ್ವನಾಥ್ ಅಂಡರ್ ಪಾಸ್ (2011)
ಹಳೆಯ ವಿಮಾನ ನಿಲ್ದಾಣ ರಸ್ತೆ – ಎಚ್ಎಎಲ್ (2023)
ಹೆಣ್ಣೂರು – ಹೆಣ್ಣೂರು ಅಂಡರ್ ಪಾಸ್
ಹೊರಮಾವು – ಹೊರಮಾವು ಅಂಡರ್ ಪಾಸ್
ಬನ್ನೇರುಘಟ್ಟ ರಸ್ತೆ – ಜಯದೇವ ಆಸ್ಪತ್ರೆ ಕೆಳಸೇತುವೆ (2006)
ಉತ್ತರಹಳ್ಳಿ – ಕಡೇರನಹಳ್ಳಿ ಅಂಡರ್ ಪಾಸ್ (2012)
ಕಾಡುಬೀಸನಹಳ್ಳಿ – ಕಾಡುಬೀಸನಹಳ್ಳಿ ಅಂಡರ್ ಪಾಸ್ (2012)
ಬಸವೇಶ್ವರನಗರ – ಕೆಎಚ್ಬಿ ಜಂಕ್ಷನ್ ಅಂಡರ್‌ಪಾಸ್ (2017)
ಕೆಆರ್ ಸರ್ಕಲ್ – ಕೆಆರ್ ಸರ್ಕಲ್ ಅಂಡರ್ ಪಾಸ್ (2009)
ಕುಂದಲಹಳ್ಳಿ – ಕುಂದಲಹಳ್ಳಿ ಅಂಡರ್ ಪಾಸ್ (2022)
ಹೊರ ವರ್ತುಲ ರಸ್ತೆ – ಕುವೆಂಪು ವೃತ್ತದ ಕೆಳಸೇತುವೆ
ಲಗ್ಗೆರೆ – ಲಗ್ಗೆರೆ ಅಂಡರ್ ಪಾಸ್ (2020)
ಮಡಿವಾಳ – ಮಡಿವಾಳ ಅಂಡರ್ ಪಾಸ್ (2010)
ವಿಜಯನಗರ – ಮಾಗಡಿ ರಸ್ತೆ ಟೋಲ್‌ಗೇಟ್ ಅಂಡರ್‌ಪಾಸ್ (2009)
ಅರಮನೆ ರಸ್ತೆ – ಮಹಾರಾಣಿ ಕಾಲೇಜು ಕೆಳಸೇತುವೆ (2009)
ಮಲ್ಲೇಶ್ವರಂ – ಮಲ್ಲೇಶ್ವರಂ ಅಂಡರ್ ಪಾಸ್ (2008)
ಬಳ್ಳಾರಿ ರಸ್ತೆ – ಮೇಖ್ರಿ ವೃತ್ತ (2001)
ನಾಗರಭಾವಿ – ನಾಗರಭಾವಿ ಅಂಡರ್ ಪಾಸ್ (2009)
ನಾಯಂಡಹಳ್ಳಿ – ನಾಯಂಡಹಳ್ಳಿ ಅಂಡರ್ ಪಾಸ್ (2010)
ರಾಜಾಜಿನಗರ – ರಾಜಾಜಿನಗರ ಪ್ರವೇಶ ಅಂಡರ್‌ಪಾಸ್ (2004)
ರಾಜಾಜಿನಗರ – ಸ್ಟಾರ್ ಸರ್ಕಲ್ ಅಂಡರ್ ಪಾಸ್ (2004)
ರಾಮಮೂರ್ತಿ ನಗರ – ರಾಮಮೂರ್ತಿ ನಗರ ಕೆಳಸೇತುವೆ
ವಸಂತ ನಗರ – ಸ್ಯಾಂಕಿ ರಸ್ತೆ ಅಂಡರ್‌ಪಾಸ್ (2008)
ಬಸವನಗುಡಿ – ಟ್ಯಾಗೋರ್ ಸರ್ಕಲ್ ಅಂಡರ್ ಪಾಸ್ (2012)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Mon, 22 May 23