ಬೀಚ್‌ನ ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ

Updated on: Dec 31, 2024 | 4:10 PM

ಒಡಿಶಾದ ರಾಯಗಡದ ರೆವ್ದಂಡಾ ಕಡಲತೀರದಲ್ಲಿ ಫೆರಾರಿ ಕ್ಯಾಲಿಫೋರ್ನಿಯಾ ರೋಡ್‌ಸ್ಟರ್ ಮರಳಿನಲ್ಲಿ ಸಿಲುಕಿಕೊಂಡಿತ್ತು. ಕೋಟಿ ಕೋಟಿ ಬೆಲೆ ಬಾಳುವ ಈ ಐಷಾರಾಮಿ ಕಾರನ್ನು ಎತ್ತಿನ ಗಾಡಿಯ ಮೂಲಕ ಎಳೆದು ರಸ್ತೆಗೆ ತರಲಾಗಿದೆ. ಈ ಅಪರೂಪದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೆರಾರಿಯ ವೇಗ ಮತ್ತು ಐಷಾರಾಮಿಗೆ ವಿರುದ್ಧವಾಗಿ, ಸರಳ ಎತ್ತಿನ ಗಾಡಿ ಅದನ್ನು ರಕ್ಷಿಸಿದ್ದು ವಿಶೇಷ.

ಒಡಿಶಾ: ತನ್ನ ವೇಗ ಮತ್ತು ಐಷಾರಾಮಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಫೆರಾರಿ ಕ್ಯಾಲಿಫೋರ್ನಿಯಾ ರೋಡ್‌ಸ್ಟರ್ ಬೀಚ್‌ನ ಮರಳಿನಲ್ಲಿ ಸಿಲುಕಿಕೊಂಡಿರುವ ಘಟನೆ ಒಡಿಶಾದ ರಾಯಗಡದಲ್ಲಿ ನಡೆದಿದೆ. ವಿಪರ್ಯಾಸವೆನೆಂದರೆ ಈ ಕೋಟಿ ಕೋಟಿ ಬೆಲೆ ಬಾಳುವ ಕಾರಿನ ರಕ್ಷಣೆಗೆ ಬಂದಿದ್ದು ಎತ್ತಿನ ಗಾಡಿ. ಮರಳಿನಲ್ಲಿ ಹೂತಿದ್ದಈ ಐಷಾರಾಮಿ ಕಾರನ್ನು ಎತ್ತಿನ ಗಾಡಿ ಸುಲಭವಾಗಿ ರಸ್ತೆಗೆ ಎಳೆದು ತಂದಿದೆ. ಈ ರೆವ್ದಂಡಾ ಕಡಲತೀರದಲ್ಲಿ ಸಂಭವಿಸಿದೆ ಮತ್ತು ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More