ಮಡಿಕೇರಿ-ಭಾಗಮಂಡಲ ರಸ್ತೆಯೂ ಜಲಾವೃತ, ಅಪೂರ್ಣಗೊಂಡ ಫ್ಲೈಓವರ್ ಅನ್ನೇ ಸಂಚಾರಕ್ಕೆ ಬಳಸುತ್ತಿರುವ ಜನ
ನದಿ ತೊರೆಗಳು ನಿಧಾನಕ್ಕೆ ಮೈದುಂಬಿಕೊಳ್ಳುತ್ತಿವೆ. ಆರಿದ್ರಾ ಮಳೆ ರೈತರಿಗೆ ಹರ್ಷ ತಂದಿದೆ. ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನಮಟ್ಟ ಏರುತ್ತಿದೆ.
ಕೊಡಗು ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ. ಜುಲೈ 8 ರವರೆಗೂ ಕೊಡಗಿನಲ್ಲಿ ಮಳೆ ಮುಂದುವರಿಕೆ ಸಾಧ್ಯತೆಯಿದೆ. ಮುನ್ನೆಚ್ಚರಿಕೆಯಿಂದ ಇರುವಂತೆ ಜನರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ತೊರೆಗಳು ನಿಧಾನಕ್ಕೆ ಮೈದುಂಬಿಕೊಳ್ಳುತ್ತಿವೆ. ಆರಿದ್ರಾ ಮಳೆ ರೈತರಿಗೆ ಹರ್ಷ ತಂದಿದೆ. ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನಮಟ್ಟ ಏರುತ್ತಿದೆ. ಇದರಿಂದ ಭಾಗಮಂಡಲ ತ್ರಿವೇಣಿ ಸಂಗಮ ಮುಳುಗಡೆ ಸಾಧ್ಯತೆಯಿದೆ. ಮಡಿಕೇರಿ-ಭಾಗಮಂಡಲ ರಸ್ತೆಯೂ ಜಲಾವೃತವಾಗುವ ಸಾಧ್ಯತೆ ಇದೆ. ಅಪೂರ್ಣಗೊಂಡಿರುವ ಭಾಗಮಂಡಲ ಫ್ಲೈಓವರ್ ಅನ್ನೇ ಜನ ಸಂಚಾರಕ್ಕೆ ಬಳಸುತ್ತಿದ್ದಾರೆ.
Loading...
Unable to load recommendations.
Follow Us