ಶವಾಗಾರದಲ್ಲಿ ಆಲ್ಕೋಹಾಲ್ ಪಾರ್ಟಿ ಮಾಡಿದ ಮಹಾರಾಷ್ಟ್ರದ ವೈದ್ಯರ ಅಮಾನತು
ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡದ ಪ್ರತಿಷ್ಠಿತ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಯ ಶವಾಗಾರದಲ್ಲಿ ವೈದ್ಯರೊಬ್ಬರು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಆ ವೈದ್ಯರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಗುರುವಾರ ರಾತ್ರಿ ಪಿಂಪ್ರಿ-ಚಿಂಚ್ವಾಡ ಮುನ್ಸಿಪಲ್ ಕಾರ್ಪೊರೇಷನ್ಗೆ ಸೇರಿದ ವೈಸಿಎಂ ಆಸ್ಪತ್ರೆಯ ಶವಾಗಾರದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯ ಮರಣ ಪ್ರಮಾಣಪತ್ರ ಹಾಗೂ ಶವವನ್ನು ಪಡೆದುಕೊಳ್ಳಲು ಕುಟುಂಬಸ್ಥರು ರಾತ್ರಿಯಿಡೀ ಆಸ್ಪತ್ರೆಯ ಹೊರಗೆ ಕಾದು ಕುಳಿತಿದ್ದರು. ಆದರೆ ಒಳಗಡೆ ವೈದ್ಯರೊಬ್ಬರು ಟೇಬಲ್ ಮೇಲೆ ಮದ್ಯದ ಬಾಟಲಿಗಳು, ತಿಂಡಿ-ತಿನಿಸುಗಳನ್ನು ಇಟ್ಟುಕೊಂಡು ಆಲ್ಕೋಹಾಲ್ ಕುಡಿಯುವುದರಲ್ಲಿ ಮಗ್ನರಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವೈರಲ್ ಆದ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ವೈದ್ಯ ಡಾ. ವೈಭವ್ ಅವಿನಾಶ್ಮ್ ಮಹಾಸ್ಕೆ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮುಂಬೈ, ಅಕ್ಟೋಬರ್ 17: ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡದ ಪ್ರತಿಷ್ಠಿತ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಯ ಶವಾಗಾರದಲ್ಲಿ ವೈದ್ಯರೊಬ್ಬರು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಆ ವೈದ್ಯರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಗುರುವಾರ ರಾತ್ರಿ ಪಿಂಪ್ರಿ-ಚಿಂಚ್ವಾಡ ಮುನ್ಸಿಪಲ್ ಕಾರ್ಪೊರೇಷನ್ಗೆ ಸೇರಿದ ವೈಸಿಎಂ ಆಸ್ಪತ್ರೆಯ ಶವಾಗಾರದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯ ಮರಣ ಪ್ರಮಾಣಪತ್ರ ಹಾಗೂ ಶವವನ್ನು ಪಡೆದುಕೊಳ್ಳಲು ಕುಟುಂಬಸ್ಥರು ರಾತ್ರಿಯಿಡೀ ಆಸ್ಪತ್ರೆಯ ಹೊರಗೆ ಕಾದು ಕುಳಿತಿದ್ದರು. ಆದರೆ ಒಳಗಡೆ ವೈದ್ಯರೊಬ್ಬರು ಟೇಬಲ್ ಮೇಲೆ ಮದ್ಯದ ಬಾಟಲಿಗಳು, ತಿಂಡಿ-ತಿನಿಸುಗಳನ್ನು ಇಟ್ಟುಕೊಂಡು ಆಲ್ಕೋಹಾಲ್ ಕುಡಿಯುವುದರಲ್ಲಿ ಮಗ್ನರಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವೈರಲ್ ಆದ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ವೈದ್ಯ ಡಾ. ವೈಭವ್ ಅವಿನಾಶ್ಮ್ ಮಹಾಸ್ಕೆ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ