Video: ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ವೇಳೆ ಮೊಬೈಲ್​​ನಲ್ಲಿ ರಮ್ಮಿ ಆಡಿದ ಸಚಿವ

Updated on: Jul 21, 2025 | 7:14 AM

ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ವೇಳೆ ಕೃಷಿ ಸಚಿವ ಮಾಣಿಕ್​ರಾವ್ ಕೊಕಟೆ ಮೊಬೈಲ್​​ನಲ್ಲಿ ರಮ್ಮಿ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಗ ವಿರೋಧ ಪಕ್ಷವು ಈ ವೀಡಿಯೊವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ವಿರೋಧ ಪಕ್ಷವು ಮಹಾರಾಷ್ಟ್ರದ ಮಹಾಯುತಿ ಮೈತ್ರಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದೆ.

ಮುಂಬೈ, ಜುಲೈ 21: ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ವೇಳೆ ಕೃಷಿ ಸಚಿವ ಮಾಣಿಕ್​ರಾವ್ ಕೊಕಟೆ ಮೊಬೈಲ್​​ನಲ್ಲಿ ರಮ್ಮಿ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಗ ವಿರೋಧ ಪಕ್ಷವು ಈ ವೀಡಿಯೊವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ವಿರೋಧ ಪಕ್ಷವು ಮಹಾರಾಷ್ಟ್ರದ ಮಹಾಯುತಿ ಮೈತ್ರಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದೆ.

ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕ ರೋಹಿತ್ ಪವಾರ್ ಕೊಕಟೆ ಅವರನ್ನು ತರಾಟೆಗೆ ತೆಗೆದುಕೊಂಡರು, ಮತ್ತು ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಕೃಷಿ ಸಂಬಂಧಿತ ಸಮಸ್ಯೆಗಳು ಬಾಕಿ ಉಳಿದಿದ್ದರೂ ಮತ್ತು ಪ್ರತಿದಿನ 8 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಕೃಷಿ ಸಚಿವರಿಗೆ ರಮ್ಮಿ ಆಡಲು ಸಮಯ ಸಿಗುತ್ತಿದೆ.

ಇಂಥಾ ಸಚಿವರು ಸರ್ಕಾರದ ಬೆಳೆ ವಿಮೆ, ಸಾಲ ಮನ್ನಾ ಬೆಂಬಲ ಬೆಲೆಯನ್ನು ಒತ್ತಾಯಿಸುವ ರೈತರ ಮನವಿಯನ್ನು ಎಂದಾದರೂ ಆಲಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಕೆಳ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಯೂಟ್ಯೂಬ್​ನಲ್ಲಿ ನೋಡಲು ಮೊಬೈಲ್ ಹಿಡಿದುಕೊಂಡೆ, ನನ್ನ ಮೊಬೈಲ್​ ಅಲ್ಲಿ ಗೇಮ್​ ಒಂದನ್ನು ಡೌನ್​ಲೋಡ್ ಮಾಡಲಾಗಿತ್ತು, ಅದು ಹೇಗಿದೆ ಎಂಬುದನ್ನು ನೋಡಲು ಓಪನ್ ಮಾಡಿದೆ ಬಳಿಕ ಆ ಆಟವನ್ನು ಕ್ವಿಟ್ ಮಾಡುವುದ್ಹೇಗೆ ಎಂಬುದು ತಿಳಿಯಲಿಲ್ಲ ಎಂದು ಮಾಣಿಕ್​ರಾವ್ ಸಮರ್ಥಿಸಿಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ