ಮಹಾತ್ಮ ಗಾಂಧಿ ಜಯಂತಿ ವಿಶೇಷ: ನಂದಿ ಬೆಟ್ಟಕ್ಕೂ ಗಾಂಧೀಜಿಗೂ ಎಲ್ಲಿಲ್ಲದ ನಂಟು
ನಂದಿ ಬೆಟ್ಟಕ್ಕೂ ಗಾಂಧೀಜಿ ಅವರಿಗೂ ಎಲ್ಲಿಲ್ಲದ ನಂಟು. ಮಹಾತ್ಮರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗುತ್ತಿದ್ದಂತೆ, ಅವರು ನೇರವಾಗಿ ವಿಶ್ರಾಂತಿಗೆಂದು ನಂದಿ ಬೆಟ್ಟಕ್ಕೆ ಬರುತ್ತಿದ್ದರು. ತಮ್ಮ ಜೀವಿತಾವಧಿಯಲ್ಲಿ ಅವರು ಸಬರಮತಿ ಆಶ್ರಮ ಹೊರತುಪಡಿಸಿದರೆ, ವಿಶ್ರಾಂತಿಗೆಂದು ಹೆಚ್ಚು ತಂಗಿದ್ದ ತಾಣ ನಂದಿ ಗಿರಿಧಾಮ. 1927 ಮತ್ತು 1936 ಹೀಗೆ ಎರಡು ಬಾರಿ ನಂದಿಗೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಿಕ್ಕಬಳ್ಳಾಪುರ, (ಅ,2): ಅಕ್ಟೋಬರ್ 2 ಇಂದು ಮಹಾತ್ಮ ಗಾಂಧಿ ಜಯಂತಿ. ಈ ದೇಶಕ್ಕೆ ಮಹಾತ್ಮ ಗಾಂಧಿ ಸ್ವಾತಂತ್ರ್ಯವನ್ನಷ್ಟೆ ಅಲ್ಲ, ಇಡೀ ಜಗತ್ತಿಗೆ ಶಾಂತಿಯ, ಸೋದರತ್ವದ, ಸ್ವಾವಲಂಬನೆಯ ಪಾಠವನ್ನೂ ಕಲಿಸಿಕೊಟ್ಟರು. ಅದರಲ್ಲೂ, ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು. ಮತ್ತೊಬ್ಬರಿಗೆ ಹೊರೆ ಆಗದಂತೆ ಜೀವಿಸಬೇಕು ಎಂಬುದು ಅವರ ತತ್ತ್ವ ಆಗಿತ್ತು. ಇನ್ನು ನಂದಿ ಬೆಟ್ಟಕ್ಕೂ ಗಾಂಧೀಜಿ ಅವರಿಗೂ ಎಲ್ಲಿಲ್ಲದ ನಂಟು. ಮಹಾತ್ಮರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗುತ್ತಿದ್ದಂತೆ, ಅವರು ನೇರವಾಗಿ ವಿಶ್ರಾಂತಿಗೆಂದು ನಂದಿ ಬೆಟ್ಟಕ್ಕೆ ಬರುತ್ತಿದ್ದರು. ತಮ್ಮ ಜೀವಿತಾವಧಿಯಲ್ಲಿ ಅವರು ಸಬರಮತಿ ಆಶ್ರಮ ಹೊರತುಪಡಿಸಿದರೆ, ವಿಶ್ರಾಂತಿಗೆಂದು ಹೆಚ್ಚು ತಂಗಿದ್ದ ತಾಣ ನಂದಿ ಗಿರಿಧಾಮ. 1927 ಮತ್ತು 1936 ಹೀಗೆ ಎರಡು ಬಾರಿ ನಂದಿಗೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
