Karnataka Assembly Polls: ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸುವ ಮಹೇಶ್ ಕುಮಟಳ್ಳಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುತ್ತಾರೆ!

|

Updated on: Apr 06, 2023 | 12:34 PM

ರಮೇಶ್ ಜಾರಕಿಹೊಳಿ ಹೇಳಿದ್ದನ್ನು ಕುಮಟಳ್ಳಿಗೆ ಜ್ಞಾಪಿಸಿದಾಗ ಎಲ್ಲ ಹೈಕಮಾಂಡ್​ಗೆ ಬಿಟ್ಟಿದ್ದು, ಅಲ್ಲಿಂದ ಯಾವುದೇ ನಿರ್ಣಯ ಬಂದರೂ ಅದಕ್ಕೆ ಬದ್ಧ ಎಂದು ಹೇಳಿದರು.

ಬೆಂಗಳೂರು: ಅಥಣಿ ಶಾಸಕ ಮಹೇಶ್ ಕುಮಟಳ್ಳಿಗೆ (Mahesh Kumatalli) ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗೋದು ಅನಿಶ್ಚಿತವಾಗಿದ್ದು, ಅವರಿಗೆ ಟಿಕೆಟ್ ಸಿಗಲಿಲ್ಲವಾದರೆ ತಾನೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದು ರಾಜ್ಯ ಬಿಜೆಪಿ ನಾಯಕತ್ವವನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಟಳ್ಳಿ ಟಿಕೆಟ್ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ರಮೇಶ್ ಜಾರಕಿಹೊಳಿ ಹೇಳಿದ್ದನ್ನು ಅವರಿಗೆ ಜ್ಞಾಪಿಸಿದಾಗ ಎಲ್ಲ ಹೈಕಮಾಂಡ್ ಗೆ (high command) ಬಿಟ್ಟಿದ್ದು, ಅಲ್ಲಿಂದ ಯಾವುದೇ ನಿರ್ಣಯ ಬಂದರೂ ಅದಕ್ಕೆ ಬದ್ಧ ಎಂದು ಅಥಣಿ ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 06, 2023 12:34 PM