ದೇಶದೆಲ್ಲೆಡೆ ಮೈ ಮೋದಿ ಕಾ ಪರಿವಾರ್ ಹೂಂ ಘೋಷಣೆ ಯಾಕೆ ಪ್ರತಿಧ್ವನಿಸುತ್ತಿದೆ ಗೊತ್ತಾ? ವಿಡಿಯೋ ವೀಕ್ಷಿಸಿ

|

Updated on: Mar 16, 2024 | 11:17 AM

ಚಂದ್ರಯಾನ-3 ಮಿಷನ್ ಮೊದಲ ಪ್ರಯತ್ನದಲ್ಲಿ ಸೇಫ್ ಲ್ಯಾಂಡಿಂಗ್ ವಿಫಲವಾದಾಗ ಆಗಿನ ಇಸ್ರೋ ಚೇರ್ಮನ್ ಆಗಿದ್ದ ಡಾ ಕೆ ಸಿವನ್ ಅವರನ್ನು ಪ್ರಧಾನಿ ಮೋದಿ ತಬ್ಬಿಕೊಂಡು ಸಂತೈಸುವ ದೃಶ್ಯ ಈಗಲೂ ನಮ್ಮನ್ನು ಭಾವುಕರಾಗಿಸಿ ಕಣ್ಣು ತೇವಗೊಳಿಸುತ್ತದೆ.

ಬೆಂಗಳೂರು: ‘ನನ್ನದು ಮೋದಿಯ ಪರಿವಾರ’ (Main Modi Ka Parivar Hoon), ನಿಮ್ಮದು? ಈ ವಿಡಿಯೋ ಪೂರ್ತಿಯಾಗಿ ನೋಡಿದ ಬಳಿಕ ಅದಕ್ಕೆ ಉತ್ತರ ಸಿಗುತ್ತದೆ. ಹೌದು, ದೇಶದ ಎಲ್ಲ ಮೂಲೆ, ಎಲ್ಲ ವರ್ಗ ಮತ್ತು ಸಮುದಾಯಗಳ (Communities) ಜನ ನಾನು ಮೋದಿಯ ಪರಿವಾರ ಅಂತ ಹೆಮ್ಮೆ, ಅಭಿಮಾನ ಮತ್ತು ಗರ್ವದಿಂದ ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡುವಿರಿ. ನಾನು ಯಾಕೆ ಮೋದಿಯ ಪರಿವಾರಕ್ಕೆ ಸೇರಿದವನಾಗಿದ್ದೇನೆ ಅನ್ನುವುದಕ್ಕೂ ಉತ್ತರಗಳು ವಿಡಿಯೋದಲ್ಲಿ ಸಿಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕಳೆದ 10 ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆಗಳು, ದೇಶವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಬಲಾಢ್ಯಗೊಳಿಸಿರುವ ಅಂಶಗಳ ಕ್ಲಿಪ್ಪಿಂಗ್ ಗಳು ಇಲ್ಲಿ ಕಾಣಸಿಗುತ್ತವೆ. ಚಂದ್ರಯಾನ-3 ಮಿಷನ್ ಮೊದಲ ಪ್ರಯತ್ನದಲ್ಲಿ ಸೇಫ್ ಲ್ಯಾಂಡಿಂಗ್ ವಿಫಲವಾದಾಗ ಆಗಿನ ಇಸ್ರೋ ಚೇರ್ಮನ್ ಆಗಿದ್ದ ಡಾ ಕೆ ಸಿವನ್ ಅವರನ್ನು ಪ್ರಧಾನಿ ಮೋದಿ ತಬ್ಬಿಕೊಂಡು ಸಂತೈಸುವ ದೃಶ್ಯ ಈಗಲೂ ನಮ್ಮನ್ನು ಭಾವುಕರಾಗಿಸಿ ಕಣ್ಣು ತೇವಗೊಳಿಸುತ್ತದೆ. ನಮ್ಮ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ತಂದಾಗ ಪ್ರಧಾನಿ ಮೋದಿ ಖುದ್ದು ಅವರನ್ನು ಅಭಿನಂದಿಸುವ ದೃಶ್ಯ ನೋಡುವಾಗ ನಾನು ಮೋದಿ ಪರಿವಾರದವನು ಅಂತ ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲ ಭಾಗ ಮತ್ತು ರಾಜ್ಯಗಳ ಜನ ಹೇಳುತ್ತಿದ್ದಾರೆ, ಮೈ ಮೋದಿ ಕಾ ಪರಿವಾರ್ ಕಾ ಹೂಂ…

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಹಾತ್ಮಾ ಗಾಂಧಿ ಕರ್ಮಭೂಮಿ ಸಬರಮತಿ ಆಶ್ರಮವನ್ನು ನವೀಕರಿಸುವ ಸಂಕಲ್ಪ ತೊಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 

Follow us on