ಮಹಾತ್ಮಾ ಗಾಂಧಿ ಕರ್ಮಭೂಮಿ ಸಬರಮತಿ ಆಶ್ರಮವನ್ನು ನವೀಕರಿಸುವ ಸಂಕಲ್ಪ ತೊಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 

ಮಹಾತ್ಮಾ ಗಾಂಧಿ ಕರ್ಮಭೂಮಿ ಸಬರಮತಿ ಆಶ್ರಮವನ್ನು ನವೀಕರಿಸುವ ಸಂಕಲ್ಪ ತೊಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 12, 2024 | 5:18 PM

ಗಾಂಧೀಜಿಯವರ ಬದುಕಿನ ಮಂತ್ರವಾಗಿದ್ದ ಸರಳತೆ ಮತ್ತು ವಾಸ್ತುವನ್ನು ಆಶ್ರಮದಲ್ಲಿ ಕಾಣಬಹುದಾಗಿತ್ತು. ಆದರೆ ಅವರು ಬದುಕಿದ್ದಾಗ 120 ಎಕರೆ ಪ್ರದೇಶದಲ್ಲಿ ಹಬ್ಬಿದ್ದ ಆಶ್ರಮವು ಕ್ರಮೇಣ ಕರಗುತ್ತಾ 5 ಎಕರೆ ಪ್ರದೇಶಕ್ಕೆ ಮಾತ್ರ ಸಂಕುಚಿತಗೊಂಡಿತು. ಅಲ್ಲಿದ್ದ 63 ಕಟ್ಟಡಗಳ ಸಂಖ್ಯೆ ಕೇವಲ 3ಕ್ಕೆ ಇಳಿಯಿತು. ದೇಶ ವಿದೇಶಗಳಿಂದ ಬರುತ್ತಿದ್ದ ಪ್ರವಾಸಿಗರಿಗೆ ಸಬರಮತಿ ಆಶ್ರಮದಲ್ಲಿ ಕೇವಲ ಇಷ್ಟು ಮಾತ್ರ ನೋಡಸಿಗುತಿತ್ತು

ಅಹಮದಾಬಾದ್: ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಅಹಮದಾಬಾದ್ ನಗರದ ಹೊರವಲಯದ ಮೂಲಕ ಹಾದುಹೋಗುವ ಸಬರಮತಿ ನದಿದಡದಲ್ಲಿರುವ ಸಬರಮತಿ ಆಶ್ರಮ (Sabarmati Ashram) ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ (Mahatma Gandhi) ಕರ್ಮಭೂಮಿಯಾಗಿತ್ತು. 1917ರಿಂದ 1930 ರವರೆಗೆ ಸ್ವಾತಂತ್ರ್ಯ ಹೋರಾಟಕ್ಕೆ (freedom struggle) ಸಂಬಂಧಿಸಿದ ಎಲ್ಲ ರೂಪುರೇಷೆಗಳನ್ನು ಗಾಂಧಿಯವರು ಇಲ್ಲೇ ನಿರ್ಧರಿಸುತ್ತಿದ್ದರು. ಅವರ ಎಲ್ಲ ರಚನಾತ್ಮಕ ಕಾರ್ಯಗಳ ಕೇಂದ್ರವಾಗಿತ್ತು ಈ ಆಶ್ರಮ. ಗಾಂಧೀಜಿಯವರ ಬದುಕಿನ ಮಂತ್ರವಾಗಿದ್ದ ಸರಳತೆ ಮತ್ತು ವಾಸ್ತುವನ್ನು ಆಶ್ರಮದಲ್ಲಿ ಕಾಣಬಹುದಾಗಿತ್ತು. ಆದರೆ ಅವರು ಬದುಕಿದ್ದಾಗ 120 ಎಕರೆ ಪ್ರದೇಶದಲ್ಲಿ ಹಬ್ಬಿದ್ದ ಆಶ್ರಮವು ಕ್ರಮೇಣ ಕರಗುತ್ತಾ 5 ಎಕರೆ ಪ್ರದೇಶಕ್ಕೆ ಮಾತ್ರ ಸಂಕುಚಿತಗೊಂಡಿತು. ಅಲ್ಲಿದ್ದ 63 ಕಟ್ಟಡಗಳ ಸಂಖ್ಯೆ ಕೇವಲ 3ಕ್ಕೆ ಇಳಿಯಿತು. ದೇಶ ವಿದೇಶಗಳಿಂದ ಬರುತ್ತಿದ್ದ ಪ್ರವಾಸಿಗರಿಗೆ ಸಬರಮತಿ ಆಶ್ರಮದಲ್ಲಿ ಕೇವಲ ಇಷ್ಟು ಮಾತ್ರ ನೋಡಸಿಗುತಿತ್ತು.

ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಾಂಧೀಜಿಯವರ ಕರ್ಮಭೂಮಿ ಸಬರಮತಿ ಆಶ್ರಮದ ಜೀರ್ಣೋದ್ಧಾರ ಮಾಡುವ ಪಣತೊಟ್ಟಿದ್ದಾರೆ. ಆಶ್ರಮವನ್ನು ಅದರ ಮೂಲ ಸ್ವರೂಪದಲ್ಲೇ ಪುನರ್ ಸ್ಥಾಪಿಸುವ ನಿರ್ಧಾರ ಮಾಡಿ ಅದರೆಡೆ ಕಾರ್ಯೋನ್ಮುಖರಾಗಿದ್ದಾರೆ. ಸಬರಮತಿ ಆಶ್ರಮದ ಪುನರ್ ನಿರ್ಮಾಣದ ಯೋಜನೆ ಪ್ರಕಾರ ಈಗಿರುವ 5 ಎಕರೆ ಪ್ರದೇಶವನ್ನು 55 ಎಕರೆಗಳಿಗೆ ವಿಸ್ತರಿಸಲಾಗುವುದು ಮತ್ತು ಇಲ್ಲಿರುವ 36 ಕಟ್ಟಡಗಳನ್ನು ನವೀಕರಿಸಲಾಗುವುದು. ಆಶ್ರಮವನ್ನು ಒಂದು ವಿಶ್ವದರ್ಜೆಯ ಸ್ಮಾರಕವಾಗಿ ಅಭಿವೃದ್ಧಿಗೊಳಿಸಿ ಪ್ರವಾಸಿಗರಿಗೆ ಮತ್ತು ಇಂದಿನ ಮತ್ತು ಮುಂದಿನ ಪೀಳಿಗೆಗೆ ಗಾಂಧೀಜಿಯವರ ಬದುಕಿನ ಶೈಲಿ ಮತ್ತು ಅವರ ಹೋರಾಟವನ್ನು ವಿವರಿಸುವ ಪ್ರಯತ್ನ ಮಾಡುವ ಸಂಕಲ್ಪ ಮೋದಿಯವರದ್ದು. ಗಾಂಧೀಜಿಯವರ ಕಾಲದಲ್ಲಿ ನಡೆಯುತ್ತಿದ್ದ ಚರಕ ಸುತ್ತುವ, ನೂಲು ತೆಗೆಯುವ ಮೊದಲಾದ ಚಟುವಟಿಕೆಗಳು ಪುನಾರಾರಂಭಗೊಳ್ಳುವ ವ್ಯವಸ್ಥೆ ಮಾಡಲಾಗುವುದು. ಆಶ್ರಮವಾಸಿಗಳಿಗೆ ಮನೆಗಳ ಜೊತೆಗೆ ಪ್ರವಾಸಿಗರಿಗೆ ಸಕಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಯನ್ನೂ ರೂಪಿಸಲಾಗಿದೆ.

ಆಶ್ರಮದಲ್ಲಿ ಪ್ರಶಾಂತವಾದ ವಾತಾವರಣ ನಿರ್ಮಾಣಗೊಳ್ಳಲು ಸಾಧ್ಯವಾಗುವ ಹಾಗೆ, ಒಳಗಿನ ಪರಿಸರವನ್ನು ಹಸುರಿನಿಂದ ಕಂಗೊಳಿಸುವಂತೆ ಮಾಡಲಾಗುವುದು. ದಾಂಡಿ ಸೇತುವೆಯ ಪುನರ್ ನಿರ್ಮಣವೂ ಯೋಜನೆಯ ಭಾಗವಾಗಿದ್ದು ಆಶ್ರಮಕ್ಕಾಗಿ ಒಂದು ಹೊಸ ದಾರಿಯನ್ನು ನಿರ್ಮಿಸಲಾಗುವುದು. ಭಾರತ ಸರ್ಕಾರವು ಈ ಬೃಹತ್ ಯೋಜನೆಗೆ ಹಣ ಒದಗಿಸಲಿದೆ. ಸಬರಮತಿ ಆಶ್ರಮವು ಗಾಂಧೀಜಿಯವರ ಮೂಲಕಲ್ಪನೆಯಲ್ಲಿ ಮತ್ತು ಅದೇ ಸರಳತೆ ಹಾಗೂ ವಾಸ್ತುವಿನೊಂದಿಗೆ ನವೀಕರಣಗೊಳ್ಳುತ್ತಿರುವುದು ಎಲ್ಲ ಭಾರತೀಯರನ್ನು ರೋಮಾಂಚನಗೊಳಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲಾಗದು: ಹೆಚ್​ಡಿ ಕುಮಾರಸ್ವಾಮಿ

Published on: Mar 12, 2024 03:27 PM