AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾ ಡ್ರೈವರ..’ ಗಾಯಕ ಮಾಳು ನಿಪನಾಳ ಕಂಠಕ್ಕೆ ಫಿದಾ ಆದ ಶಿವರಾಜ್​ಕುಮಾರ್​

‘ನಾ ಡ್ರೈವರ..’ ಗಾಯಕ ಮಾಳು ನಿಪನಾಳ ಕಂಠಕ್ಕೆ ಫಿದಾ ಆದ ಶಿವರಾಜ್​ಕುಮಾರ್​

ಮದನ್​ ಕುಮಾರ್​
|

Updated on: Mar 12, 2024 | 4:34 PM

Share

ಯೋಗರಾಜ್​ ಭಟ್​ ನಿರ್ದೇಶನದ ‘ಕರಟಕ ದಮನಕ’ ಸಿನಿಮಾದಲ್ಲಿ ‘ಹಿತಲಕ ಕರಿಬ್ಯಾಡ ಮಾವ..’ ಹಾಡು ಹಿಟ್​ ಆಗಿದೆ. ಮಾಳು ನಿಪನಾಳ ಅವರು ಈ ಗೀತೆಯನ್ನು ಹಾಡಿದ್ದಾರೆ. ಉತ್ತರ ಕರ್ನಾಟಕಕ್ಕೆ ವಿಜಯ ಯಾತ್ರೆ ತೆರಳಿರುವ ಶಿವರಾಜ್​ಕುಮಾರ್​ ಅವರು ಅಭಿಮಾನಿಗಳ ಎದುರಿನಲ್ಲಿ ಮಾಳು ನಿಪನಾಳ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.

ನಟ ಶಿವರಾಜ್​ಕುಮಾರ್​ (Shivarajkumar) ಅವರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕದ ಊರುಗಳಿಗೆ ಅವರು ತೆರಳಿ, ಅಲ್ಲಿನ ಜನರ ಜೊತೆ ಮಾತನಾಡುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ‘ಕರಟಕ ದಮನಕ’ ಸಿನಿಮಾ. ಯೋಗರಾಜ್​ ಭಟ್​ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಕಥೆ ಇದೆ. ಹಾಗಾಗಿ ಅಲ್ಲಿನ ಜಿಲ್ಲೆಗಳಿಗೆ ಹೋಗಿ ಶಿವರಾಜ್​ಕುಮಾರ್​ ಅವರು ಪ್ರಚಾರ ಮಾಡುತ್ತಿದ್ದಾರೆ. ಮಾರ್ಚ್​ 8ರಂದು ‘ಕರಟಕ ದಮನಕ’ (Karataka Damanaka) ಬಿಡುಗಡೆ ಆಯಿತು. ಈಗ ಶಿವರಾಜ್​ಕುಮಾರ್​ ಅವರು ವಿಜಯ ಯಾತ್ರೆ ಮಾಡುತ್ತಿದ್ದಾರೆ. ಈ ಸಿನಿಮಾದ ‘ಹಿತಲಕ ಕರಿಬ್ಯಾಡ ಮಾವ..’ ಹಾಡನ್ನು ಉತ್ತರ ಕರ್ನಾಟಕದ ಗಾಯಕ ಮಾಳು ನಿಪನಾಳ ಅವರು ಹಾಡಿದ್ದಾರೆ. ಈ ಗೀತೆಯಲ್ಲಿ ಪ್ರಭುದೇವ ಮತ್ತು ನಿಶ್ವಿಕಾ ನಾಯ್ಡು ಡ್ಯಾನ್ಸ್​ ಮಾಡಿದ್ದಾರೆ. ಜನರಿಗೆ ಈ ಸಾಂಗ್​ ಇಷ್ಟ ಆಗಿದೆ. ಬೆಳಗಾವಿಯಲ್ಲಿ ಅಭಿಮಾನಿಗಳ ಎದುರು ಮಾತನಾಡಿದ ಶಿವರಾಜ್​ಕುಮಾರ್​ ಅವರು ಮಾಳು ನಿಪನಾಳ (Malu Nipanal) ಅವರ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಮೊದಲು ‘ನಾ ಡ್ರೈವರಾ..’ ಹಾಡಿನ ಮೂಲಕ ಫೇಮಸ್​ ಆಗಿದ್ದ ಮಾಳು ನಿಪನಾಳ ಅವರಿಗೆ ಈಗ ಸಿನಿಮಾಗಳಲ್ಲಿ ಹಾಡುವ ಅವಕಾಶ ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More