ಮಾಳು ನಿಪನಾಳ ಹಾಡಿದ ಗೀತೆಗೆ ಪ್ರಭುದೇವ ಡ್ಯಾನ್ಸ್​; ಮಿಲಿಯನ್​ ವೀವ್ಸ್​

‘ಕರಟಕ ದಮನಕ’ ಸಿನಿಮಾದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ. ಈ ಸಿನಿಮಾದಿಂದ ‘ಹಿತಲಕ ಕರಿಬ್ಯಾಡ ಮಾವ..’ ಸಾಂಗ್​ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಉತ್ತರ ಕರ್ನಾಟಕದ ಗಾಯಕ ಮಾಳು ನಿಪನಾಳ ಅವರು ಧ್ವನಿ ನೀಡಿದ್ದಾರೆ. ಅವರ ಜೊತೆ ಶ್ರುತಿ ಪ್ರಹ್ಲಾದ್​ ಕೂಡ ಹಾಡಿದ್ದಾರೆ. ಯೋಗರಾಜ್​ ಭಟ್​ ಅವರ ಸಾಹಿತ್ಯ, ವಿ. ಹರಿಕೃಷ್ಣ ಅವರ ಸಂಗೀತದಲ್ಲಿ ಈ ಗೀತೆ ಮೂಡಿಬಂದಿದೆ.

ಮಾಳು ನಿಪನಾಳ ಹಾಡಿದ ಗೀತೆಗೆ ಪ್ರಭುದೇವ ಡ್ಯಾನ್ಸ್​; ಮಿಲಿಯನ್​ ವೀವ್ಸ್​
ಯೋಗರಾಜ್​ ಭಟ್​, ಮಾಳು ನಿಪನಾಳ, ನಿಶ್ವಿಕಾ ನಾಯ್ಡು, ಪ್ರಭುದೇವ
Follow us
ಮದನ್​ ಕುಮಾರ್​
|

Updated on: Mar 03, 2024 | 5:58 PM

ಉತ್ತರ ಕರ್ನಾಟಕದಲ್ಲಿ ‘ನಾ ಡ್ರೈವರಾ..’ ಹಾಡಿನ ಮೂಲಕ ಕ್ರೇಜ್​ ಸೃಷ್ಟಿಸಿದ ಮಾಳು ನಿಪನಾಳ (Malu Nipanal) ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಈಗ ಅವರು ಸಿನಿಮಾದಲ್ಲೂ ಬ್ಯುಸಿ ಆಗಿದ್ದಾರೆ. ಸ್ಟಾರ್​ ನಟರ ಸಿನಿಮಾಗಳಲ್ಲಿ ಹಾಡುವ ಅವಕಾಶವನ್ನು ಅವರು ಗಿಟ್ಟಿಸಿಕೊಂಡಿದ್ದಾರೆ. ಮಾಳು ನಿಪನಾಳ ಅವರು ‘ಕರಟಕ ದಮನಕ’ (Karataka Damanaka) ಸಿನಿಮಾದ ಹೊಸ ಹಾಡಿಗೆ ಧ್ವನಿ ನೀಡಿದ್ದಾರೆ. ‘ಹಿತಲಕ ಕರಿಬ್ಯಾಡ ಮಾವ..’ (Hithalaka Karibyada Maava) ಎಂಬ ಈ ಹಾಡಿನಲ್ಲಿ ಪ್ರಭುದೇವ ಮತ್ತು ನಿಶ್ವಿಕಾ ನಾಯ್ಡು ಅವರು ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ. ಬಿಡುಗಡೆಯಾದ ಒಂದೇ ದಿನದಲ್ಲಿ ಯೂಟ್ಯೂಬ್​ನಲ್ಲಿ ಈ ಹಾಡು ಮಿಲಿಯನ್​ ವೀಕ್ಷಣೆ ಪಡೆಯುವತ್ತ ಮುನ್ನುಗ್ಗುತ್ತಿದೆ.

ಮಾಳು ನಿಪನಾಳ ಅವರು ಉತ್ತರ ಕರ್ನಾಟಕದವರು. ಈಗ ರಿಲೀಸ್​ ಆಗಿರುವ ‘ಹಿತಲಕ ಕರಿಬ್ಯಾಡ ಮಾವ..’ ಹಾಡಿನ ಸಾಹಿತ್ಯ ಕೂಡ ಉತ್ತರ ಕರ್ನಾಟಕದ ಶೈಲಿಯಲ್ಲೇ ಇದೆ. ನಿರ್ದೇಶಕ ಯೋಗರಾಜ್​ ಭಟ್​ ಅವರು ಈ ಹಾಡನ್ನು ಬರೆದಿದ್ದಾರೆ. ಅವರ ಸಾಹಿತ್ಯಕ್ಕೆ ಮಾಳು ನಿಪನಾಳ ಧ್ವನಿ ನೀಡಿದ್ದಾರೆ. ಆ ಮೂಲಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ಅವರ ಅಭಿಮಾನಿಗಳು ಈ ಹಾಡನ್ನು ಇಷ್ಟಪಟ್ಟಿದ್ದಾರೆ.

ಮಾಳು ನಿಪನಾಳ ಇನ್​ಸ್ಟಾಗ್ರಾಮ್​ ಪೋಸ್ಟ್:

ಮಾರ್ಚ್​ 8ರಂದು ‘ಕರಟಕ ದಮಕನ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ವಿ. ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿವರಾಜ್​ಕುಮಾರ್​ ಮತ್ತು ಪ್ರಭುದೇವ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿರುವುದು ವಿಶೇಷ. ಪ್ರಿಯಾ ಆನಂದ್​ ಮತ್ತು ನಿಶ್ವಿಕಾ ನಾಯ್ಡು ಅವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು ಕ್ರೇಜ್​ ಸೃಷ್ಟಿ ಮಾಡಿವೆ.

‘ಹಿತಲಕ ಕರಿಬ್ಯಾಡ ಮಾವ..’ ಹಾಡು:

‘ಹಿತಲಕ ಕರಿಬ್ಯಾಡ ಮಾವ..’ ಹಾಡಿನಲ್ಲಿ ಮಾಳು ನಿಪನಾಳ ಜೊತೆ ಶ್ರುತಿ ಪ್ರಹ್ಲಾದ ಅವರು ಕೂಡ ಧ್ವನಿ ನೀಡಿದ್ದಾರೆ. ಇಬ್ಬರ ಕಾಂಬಿನೇಷನ್​ನಲ್ಲಿ ಈ ಸಾಂಗ್​ ಮೂಡಿಬಂದಿದೆ. ‘ಆನಂದ್​ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ. ರೀಲ್ಸ್​ನಲ್ಲಿ ಕೂಡ ಟ್ರೆಂಡ್​ ಆಗುತ್ತಿದೆ. ಎಂದಿನಂತೆ ಯೋಗರಾಜ್​ ಭಟ್​ ಅವರ ಸಾಹಿತ್ಯಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: ನಾ ಡ್ರೈವರಾ; ಯೂಟ್ಯೂಬ್​ಗೂ ಮೊದಲು ಟ್ರ್ಯಾಕ್ಟರ್​ನಲ್ಲೇ ವೈರಲ್​ ಆಗಿತ್ತು ಈ ಗಾಯಕನ ಸಾಂಗ್​

‘ಕರಟಕ ದಮನಕ’ ಸಿನಿಮಾ ಬಿಡುಗಡೆಗೂ ಮುನ್ನ ಹಾಡುಗಳು ಸಖತ್​ ಸದ್ದು ಮಾಡುತ್ತಿವೆ. ಈ ಮೊದಲು ಬಿಡುಗಡೆ ಆಗಿದ್ದ ‘ಡೀಗ ಡಿಗರಿ..’ ಹಾಡು ಕೂಡ 27 ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ