Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ಯುವ ಮೀಟ್ಸ್ ಶಿವ: ಡ್ಯಾನ್ಸ್​ನಲ್ಲಿ ಯಾರು ಬೆಸ್ಟ್?

Yuva-Shiva: ಯುವ ರಾಜ್​ಕುಮಾರ್ ತಮ್ಮ ದೊಡ್ಡಪ್ಪ ಶಿವರಾಜ್ ಕುಮಾರ್ ಅವರೊಟ್ಟಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅಂದಹಾಗೆ ಯಾರು ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ? ವಿಡಿಯೋ ನೋಡಿ ನೀವೇ ತಿಳಿಸಿ.

ವಿಡಿಯೋ: ಯುವ ಮೀಟ್ಸ್ ಶಿವ: ಡ್ಯಾನ್ಸ್​ನಲ್ಲಿ ಯಾರು ಬೆಸ್ಟ್?
Follow us
ಮಂಜುನಾಥ ಸಿ.
|

Updated on: Mar 03, 2024 | 1:13 PM

ದೊಡ್ಮನೆ ಕುಡಿ, ಯುವ ರಾಜ್​ಕುಮಾರ್ (Yuva Rajkumar) ನಟಿಸಿರುವ ಮೊದಲ ಸಿನಿಮಾ ‘ಯುವ’ ಬಿಡುಗಡೆಗೆ ರೆಡಿಯಾಗಿದೆ ಸಿನಿಮಾದ ಮೊದಲ ಹಾಡು ನಿನ್ನೆ (ಮಾರ್ಚ್ 2) ಚಾಮರಾಜನಗರದಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ‘ಒಬ್ಬನೇ ಶಿವ, ಒಬ್ಬನೇ ಯುವ’ ಎಂದು ಆರಂಭವಾಗುವ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದ್ದು, ಯುವ ರಾಜ್​ಕುಮಾರ್ ಸಖತ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಒಳ್ಳೆಯ ಡ್ಯಾನ್ಸ್ ಮೂವ್ಸ್ ಸಹ ತೋರಿಸಿದ್ದಾರೆ. ಚಿತ್ರತಂಡ ಪ್ರಚಾರ ಆರಂಭಿಸಿದ್ದು, ಯುವ ರಾಜ್​ಕುಮಾರ್ ತಮ್ಮ ದೊಡ್ಡಪ್ಪ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ.

‘ಒಬ್ಬನೇ ಶಿವ, ಒಬ್ಬನೇ ಯುವ’ ಹಾಡಿಗೆ ಶಿವರಾಜ್ ಕುಮಾರ್ ಹಾಗೂ ಯುವ ರಾಜ್​ಕುಮಾರ್ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಹಾಡಿನ ಥೀಮ್ ಸ್ಟೆಪ್ ಅನ್ನು ಇಬ್ಬರೂ ಒಟ್ಟಿಗೆ ಮಾಡಿದ್ದು, ಯುವ ರಾಜ್​ಕುಮಾರ್​ಗೆ ಹೋಲಿಸಿದರೆ ಶಿವರಾಜ್ ಕುಮಾರ್ ಅನಾಯಾಸವಾಗಿ ಸ್ಟೆಪ್ ಹಾಕಿದ್ದಾರೆ. ಶಿವಣ್ಣ ಯಾಕೆ ದಿ ಬೆಸ್ಟ್ ಎನ್ನುವುದನ್ನು ಸಾಕ್ಷಿ ಸಮೇತ ತೋರಿಸಿದ್ದಾರೆ.

ಯುವ ರಾಜ್​ಕುಮಾರ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ಸ್ಟೆಪ್ ಹಾಕಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈಗಾಗಲೇ ಕೆಲವು ಸೆಲೆಬ್ರಿಟಿಗಳು ವಿಡಿಯೋ ಹಂಚಿಕೊಂಡು ಯುವ ರಾಜ್​ಕುಮಾರ್​​ಗೆ ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳಂತೂ ದೊಡ್ಮನೆಯ ಎರಡು ತಲೆಮಾರಿನ ನಟರು ಒಟ್ಟಿಗೆ ಕಾಣಿಸಿಕೊಂಡಿರುವ ಖುಷಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಯುವ ರಾಜ್​ಕುಮಾರ್ ಮುಂದಿನ ದಿನಗಳಲ್ಲಿ ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಸಹ ಬಯಸುತ್ತಿದ್ದಾರೆ.

ಇದನ್ನೂ ಓದಿ:ದೊಡ್ಡ ಮೊತ್ತಕ್ಕೆ ಸೇಲ್​ ಆಯ್ತು ‘ಯುವ’ ಆಡಿಯೋ ಹಕ್ಕು; ಮಾ.29ಕ್ಕೆ ಸಿನಿಮಾ ರಿಲೀಸ್​

ಯುವ ರಾಜ್​ಕುಮಾರ್ ನಟನೆಯ ‘ಯುವ’ ಸಿನಿಮಾ ಮಾರ್ಚ್ 29ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ಮೆಚ್ಚಿನ ನಿರ್ದೇಶಕ ಸಂತೋಷ್ ಆನಂದ್​ರಾಮ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪುನೀತ್ ರಾಜ್​ಕುಮಾರ್ ಅವರಿಗಾಗಿ ಹೊಂಬಾಳೆ ಸಿನಿಮಾ ಮಾಡಬೇಕಿತ್ತು, ಅವರ ನಿಧನದ ಬಳಿಕ ಯುವ ರಾಜ್​ಕುಮಾರ್ ಜೊತೆ ಸಿನಿಮಾ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ