ನಿಖಿಲ್ ಕುಮಾರಸ್ವಾಮಿ ಸಿನಿಮಾ ಸೆಟ್​ಗೆ ಯುವ ರಾಜ್​ಕುಮಾರ್ ಭೇಟಿ

Nikhil-Yuva: ಯುವ ರಾಜ್​ಕುಮಾರ್ ಮತ್ತು ನಿಖಿಲ್ ಕುಮಾರಸ್ವಾಮಿ ಅವರುಗಳು ಪರಸ್ಪರ ಭೇಟಿ ಮಾಡಿ ಸಿನಿಮಾ ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಇಬ್ಬರ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ನಿಖಿಲ್ ಕುಮಾರಸ್ವಾಮಿ ಸಿನಿಮಾ ಸೆಟ್​ಗೆ ಯುವ ರಾಜ್​ಕುಮಾರ್ ಭೇಟಿ
ನಿಖಿಲ್-ಯುವ
Follow us
ಮಂಜುನಾಥ ಸಿ.
|

Updated on:Oct 07, 2023 | 10:59 PM

ದೊಡ್ಮನೆ ಕುಡಿ ಯುವ ರಾಜ್​ಕುಮಾರ್ (Yuva Rajkumar) ಭರ್ಜರಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಯುವ’ ಹೆಸರಿನ ಸಿನಿಮಾದಲ್ಲಿ ಯುವ ರಾಜ್​ಕುಮಾರ್ ಇದು ಅವರ ಮೊದಲ ಸಿನಿಮಾ. ಮೊದಲ ಸಿನಿಮಾ ಆಗಿದ್ದರೂ ಸಹ ಸ್ಟಾರ್ ನಟರ ಸಿನಿಮಾಗಳಿಗಿರುವಂತೆ ದೊಡ್ಡ ಮಟ್ಟದಲ್ಲಿ ಬಜ್ ಸೃಷ್ಠಿಯಾಗಿದೆ. ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎಂದು ಈಗಲೇ ಖ್ಯಾತಿ ಪಡೆದುಕೊಂಡಿದೆ. ಯುವ ರಾಜ್​ಕುಮಾರ್ ಅವರ ಸಿನಿಮಾ ಸೆಟ್​ಗೆ ಸಹ ಒಬ್ಬರ ಹಿಂದೊಬ್ಬರು ಸ್ಟಾರ್ ನಟರು ಭೇಟಿ ನೀಡಿ ಶುಭಾಶಯಗಳನ್ನು ಸಹ ತಿಳಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ‘ಯುವ’ ಸಿನಿಮಾದ ಸೆಟ್​ಗೆ ನಟ ದರ್ಶನ್ ತೂಗುದೀಪ ಭೇಟಿ ನೀಡಿದ್ದರು. ಯುವ ರಾಜ್​ಕುಮಾರ್, ನಿರ್ದೇಶಕ ಸಂತೋಶ್ ಆನಂದ್​ರಾಮ್ ಸಿನಿಮಾದ ನಾಯಕಿ ಸಪ್ತಮಿ ಇನ್ನೂ ಕೆಲವರೊಟ್ಟಿಗೆ ಸಮಯ ಕಳೆಯುವ ಜೊತೆಗೆ ಕೆಲವು ಸಲಹೆಗಳನ್ನು ಸಹ ನೀಡಿದ್ದರು. ಇದೀಗ ಯುವ ರಾಜ್​ಕುಮಾರ್ ಅವರ ಸಿನಿಮಾ ಸೆಟ್​ಗೆ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

ಯುವ ಹಾಗೂ ನಿಖಿಲ್ ಅವರ ಸಿನಿಮಾಗಳು ಪರಸ್ಪರ ಹತ್ತಿರದ ಲೊಕೇಶನ್​ಗಳಲ್ಲೇ ಚಿತ್ರೀಕರಣ ಆಗುತ್ತಿದ್ದ ಕಾರಣ ಸಿನಿಮಾ ಸೆಟ್​ನಲ್ಲಿ ಈ ಇಬ್ಬರೂ ಯುವನಟರು ಪರಸ್ಪರ ಭೇಟಿ ಆಗಿ ಕುಶಲೋಪರಿ ನಡೆಸಿದ್ದಾರೆ. ನಗರದ ಎಚ್.ಎಮ್.ಟಿ ಬಳಿಯ ಸಪೋಟ ತೋಟದ ಬಳಿಯೇ ಈ ಇಬ್ಬರು ನಟರ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಅದೇ ಕಾರಣ ಇಬ್ಬರೂ ನಟರು ಭೇಟಿ ಮಾಡಿ ಪರಸ್ಪರ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ:Darshan-Yuva: ದರ್ಶನ್-ಯುವ ರಾಜ್​ಕುಮಾರ್ ಆಲಿಂಗನ, ಇಲ್ಲಿವೆ ಚಿತ್ರಗಳು

ನಿಖಿಲ್ ಕುಮಾರಸ್ವಾಮಿ ಕೆಲವು ದಿನಗಳ ಹಿಂದಷ್ಟೆ ನಟ ಧ್ರುವ ಸರ್ಜಾ ಅವರನ್ನು ಸಹ ಭೇಟಿ ಆಗಿದ್ದರು. ಆ ಭೇಟಿ ಸಹ ಅನೌಪಚಾರಿಕ ಭೇಟಿ ಅಷ್ಟೆ ಆಗಿತ್ತು. ಇಬ್ಬರ ಸಿನಿಮಾಗಳ ಚಿತ್ರೀಕರಣ ಪರಸ್ಪರ ಹತ್ತಿರವೇ ನಡೆಯುತ್ತಿದ್ದ ಕಾರಣ ಸಿನಿಮಾ ಸೆಟ್​ನಲ್ಲಿ ಈ ನಟರು ಭೇಟಿಯಾಗಿ ತಮ್ಮ ಸಿನಿಮಾಗಳ ಬಗ್ಗ ಪರಸ್ಪರ ಚರ್ಚೆ ಮಾಡಿದರು.

ಯುವ ರಾಜ್​ಕುಮಾರ್ ನಟನೆಯ ‘ಯುವ’ ಸಿನಿಮಾವನ್ನು ಸಂತೋಶ್ ಆನಂದ್​ರಾಮ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್​ನವರು ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಸಪ್ತಮಿ ಗೌಡ ನಾಯಕಿ. ಸಿನಿಮಾದಲ್ಲಿ ಕಾಲೇಜು ಯುವಕನ ಪಾತ್ರದಲ್ಲಿ ಯುವ ರಾಜ್​ಕುಮಾರ್ ಕಾಣಿಸಿಕೊಂಡಿದ್ದಾರೆ. ಇನ್ನು ನಿಖಿಲ್, ತಮಿಳಿನ ಲೈಕಾ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಅದರ ಜೊತೆಗೆ ‘ಯಧುವೀರ’ ಹೆಸರಿನ ಸಿನಿಮಾದಲ್ಲಿಯೂ ಸಹ ನಿಖಿಲ್ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Sat, 7 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ