AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ಲಾಂತ’ ಸಿನಿಮಾ ಟೀಸರ್ ರಿಲೀಸ್: ಸಸ್ಪೆನ್ಸ್, ರೊಮ್ಯಾನ್ಸ್, ಆಕ್ಷನ್ ಎಲ್ಲವೂ

Klaantha: 'ಕ್ಲಾಂತ' ಸಿನಿಮಾದ ಟೀಸರ್ A2 ಮ್ಯೂಸಿಕ್ ಚಾನೆಲ್​ನಲ್ಲಿ ಬಿಡುಗಡೆ ಆಗಿದೆ. ನಟಿ ಸಂಗೀತ ಭಟ್ ನಾಯಕಿಯಾಗಿ ಈ ಸಿನಿಮಾ ಮೂಲಕ ಕಮ್​ ಬ್ಯಾಕ್ ಮಾಡಿದ್ದಾರೆ. ಈ ಕಾರಣಕ್ಕೂ ಈ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ.

‘ಕ್ಲಾಂತ’ ಸಿನಿಮಾ ಟೀಸರ್ ರಿಲೀಸ್: ಸಸ್ಪೆನ್ಸ್, ರೊಮ್ಯಾನ್ಸ್, ಆಕ್ಷನ್ ಎಲ್ಲವೂ
ಕ್ಲಾಂತ
ಮಂಜುನಾಥ ಸಿ.
|

Updated on: Oct 07, 2023 | 9:59 PM

Share

ಕನ್ನಡದಲ್ಲಿ ಇತ್ತೀಚೆಗೆ ಸಸ್ಪೆನ್ಸ್ ಥ್ರಿಲ್ಲರ್ ಕತೆಗಳು ಹೆಚ್ಚಾಗಿ ಬರುತ್ತಿವೆ. ‘ಕಾಂತಾರ‘ (Kantara), ‘ವಿಕ್ರಾಂತ್ ರೋಣ’ ಇನ್ನೂ ಕೆಲವು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಹಿಟ್ ಆಗಿರುವ ಕಾರಣ ಅದೇ ಮಾದರಿಯ ಪ್ರಯತ್ನಗಳು ಕೆಲವು ನಡೆಯುತ್ತಿವೆ. ಸಸ್ಪೆನ್ಸ್, ಆಕ್ಷನ್, ರೊಮ್ಯಾನ್ಸ್, ಹಾಸ್ಯ ಎಲ್ಲದರ ಪರಿಪೂರ್ಣ ಪ್ಯಾಕೇಜ್ ನೀಡುವ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ಅದೇ ಮಾದರಿಯ ಪ್ರಯತ್ನ ‘ಕ್ಲಾಂತ’ ಸಿನಿಮಾ. ಇದೀಗ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ.

‘ಕ್ಲಾಂತ’ ಸಿನಿಮಾದ ಟೀಸರ್ A2 ಮ್ಯೂಸಿಕ್ ಚಾನೆಲ್​ನಲ್ಲಿ ಬಿಡುಗಡೆ ಆಗಿದೆ. ನಟಿ ಸಂಗೀತ ಭಟ್ ನಾಯಕಿಯಾಗಿ ಈ ಸಿನಿಮಾ ಮೂಲಕ ಕಮ್​ ಬ್ಯಾಕ್ ಮಾಡಿದ್ದಾರೆ. ಈ ಕಾರಣಕ್ಕೂ ಈ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಈ ನಿರೀಕ್ಷೆಯನ್ನು ದ್ವಿಗುಣ ಮಾಡುವ ರೀತಿಯಲ್ಲಿ ಈ ಚಿತ್ರದ ಟೀಸರ್ ಮೂಡಿ ಬಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ‘ಕ್ಲಾಂತ ‘ ಟೀಸರ್ ಇದ್ದು, ಸಂಗೀತ ಅವರ ನಟನೆ ಎಲ್ಲರ ಗಮನ ಸೆಳೆದಿದೆ.

‘ರಂಗನ್ ಸ್ಟೈಲ್’, ‘ದಗಲು ಬಾಜಿಲು’ ಸೇರಿದಂತೆ ಬೇರೆ ಬಗೆಯ ಕತೆಗಳುಳ್ಳ ಸಿನಿಮಾಗಳನ್ನು ನಿರ್ದೇಶಿರುವ ವೈಭವ್ ಪ್ರಶಾಂತ್ ‘ಕ್ಲಾಂತ’ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ದಟ್ಟ ಅರಣ್ಯಕ್ಕೆ ತೆರಳುವ ಇಬ್ಬರು ಪ್ರೇಮಪಕ್ಷಿಗಳನ್ನು ಗ್ಯಾಂಗ್ ಒಂದು ಅಟ್ಯಾಕ್ ಮಾಡುತ್ತದೆ. ಆ ಗ್ಯಾಂಗ್ ನಿಂದ ಆ ಜೋಡಿ ಹೇಗೆ ತಪ್ಪಿಕೊಂಡು ಬರ್ತಾರೆ. ಅವರ ವಿರುದ್ಧ ಹೇಗೆ ಹೋರಾಡುತ್ತಾರೆ ಅನ್ನೋದನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಎಂ ವಿಘ್ನೇಶ್ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸುತ್ತಿದ್ದು, ಉಳಿದಂತೆ ಶೋಭರಾಜ್, ವೀಣಾ ಸುಂದರ್, ಕಾಮಿಡಿ ಕಿಲಾಡಿ ದೀಪಿಕಾ, ಪ್ರವೀಣ್ ಜೈನ್, ಯುವ, ತಿಮ್ಮಪ್ಪ ಕುಲಾಲ್, ಸ್ವಪ್ನ, ರಾಘವೇಂದ್ರ ಕಾರಂತ್, ಪಂಚಮಿ ವಾಮಂಜೂರ್, ವಾಮದೇವ ಪುಣಿಂಚತ್ತಾಯ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

‘ಕ್ಲಾಂತ’ ಸಿನಿಮಾದ ಚಿತ್ರೀಕರಣವನ್ನು ಕುಕ್ಕೆ ಸುಬ್ರಹ್ಮಣ್ಯ , ಗುಂಡ್ಯ , ಕಳಸದ ಸುತ್ತ ಮುತ್ತಲಿನ ಕಾಡಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು ಅದ್ಧೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಪಕ್ಕಾ ಆಕ್ಷನ್ , ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಎಸ್ ಪಿ ಚಂದ್ರಕಾಂತ್ ಸಂಗೀತ, ಪಿಆರ್ ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ. ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಸಾಹಿತ್ಯ ಹಾಡುಗಳಿಗಿದ್ದು, ವಿನೋದ್ ಸ್ಟಂಟ್ ಮಾಸ್ಟರ್ ಆಗಿ , ಮಹೇಶ್ ದೇವ್ ಡಿ ಎನ್ ಪುರ ಸಂಭಾಷಣೆ ಸಿನಿಮಾಕ್ಕಿದೆ. ಎರಡು ಹಾಡುಗಳಿಗೆ ರಘು ಅವರ ನೃತ್ಯ ಸಂಯೋಜನೆ ಇದೆ . ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ನಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿದ್ದು, ಅರುಣ್ ಗೌಡ, ಪ್ರದೀಪ್ ಗೌಡ ಹೇಮಂತ್ ರೈ ಸಹ ನಿರ್ಮಾಪಕರಾಗಿ ಆಗಿ ಸಾಥ್ ಕೊಟ್ಟಿದ್ದಾರೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ