ಸಸ್ಪೆನ್ಸ್ ಥ್ರಿಲ್ಲರ್​​ನೊಂದಿಗೆ ಬಂದ ವಿಜಯ್ ರಾಘವೇಂದ್ರ; 136 ಜನರ ಮಿಸ್ಸಿಂಗ್ ಕಥೆ ಹೇಳಲಿದೆ ‘ಜೋಗ್ 101’

‘ಜೋಗ್ 101’ ಟ್ರೇಲರ್ ನೋಡಿದವರಿಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅನ್ನೋದು ಗೊತ್ತಾಗುತ್ತದೆ. ಈ ಸಿನಿಮಾ ‘ಸೆವೆನ್ ಸ್ಟಾರ್ ಪಿಕ್ಚರ್ಸ್’ ಮೂಲಕ ರಾಘು ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ಕನ್ನಡಿಗ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.  

ಸಸ್ಪೆನ್ಸ್ ಥ್ರಿಲ್ಲರ್​​ನೊಂದಿಗೆ ಬಂದ ವಿಜಯ್ ರಾಘವೇಂದ್ರ; 136 ಜನರ ಮಿಸ್ಸಿಂಗ್ ಕಥೆ ಹೇಳಲಿದೆ ‘ಜೋಗ್ 101’
ವಿಜಯ್ ರಾಘವೇಂದ್ರ
Follow us
ರಾಜೇಶ್ ದುಗ್ಗುಮನೆ
|

Updated on: Mar 04, 2024 | 8:59 AM

ವಿಜಯ್ ರಾಘವೇಂದ್ರ (Vijay Raghavendra) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈ ಪೈಕಿ ಹಲವು ಸಸ್ಪೆನ್ಸ್ ಸಿನಿಮಾಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಅವರ ನಟನೆಯ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಜೋಗ್ 101’ ರಿಲೀಸ್​ಗೆ ರೆಡಿ ಇದೆ. ಮಾರ್ಚ್ 7ರಂದು ಬಿಡುಗಡೆ ಆಗಲಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ವಿಶ್ವ ವಿಖ್ಯಾತ ಜಲಪಾತ ಇರುವ ಜೋಗ್​ನಲ್ಲಿ ನಡೆಯುವ ಕಥೆ ಇದಾಗಿದೆ.

‘ಜೋಗ್ 101’ ಚಿತ್ರವನ್ನು ‘ಸೆವೆನ್ ಸ್ಟಾರ್ ಪಿಕ್ಚರ್ಸ್’ ಮೂಲಕ ರಾಘು ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ಕನ್ನಡಿಗ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಮಾರ್ಚ್ 7ರಂದು ತೆರೆಗೆ ಬರಲಿದೆ. ಅದಕ್ಕೂ ಮೊದಲು ಟ್ರೇಲರ್ ರಿಲೀಸ್ ಮಾಡಲಾಗಿದೆ.

‘ಜೋಗ್ 101’ ಟ್ರೇಲರ್ ನೋಡಿದವರಿಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ವಿಕ್ರಮ್ (ವಿಜಯ್ ರಾಘವೇಂದ್ರ) ಹವ್ಯಾಸಿ ಫೋಟೋಗ್ರಾಫರ್. ಅವರು ಜೋಗ್​ಗೆ ಬರುತ್ತಾರೆ. ‘ಈ ಪೋಲಿಸ್​ ಸ್ಟೇಷನ್​ ಲಿಮಿಟ್​ನಲ್ಲಿ 131 ಜನ ಮಿಸ್ಸಿಂಗ್. ಆತ್ಮಹತ್ಯೆ ಮಾಡಿಕೊಂಡ 31 ಜನರ ಬಾಡಿ ಸಿಕ್ಕಿದೆ. ಉಳಿದವರು ಇನ್ನೂ ಮಿಸ್ಸಿಂಗ್’ ಎಂದು ವಿಕ್ರಮ್ ಹೇಳುತ್ತಾರೆ. ಜೊತೆಗೆ ಅವರು ಜೋಗ್​ ಬೆಂದ ಉದ್ದೇಶವ್ನೂ ರಿವೀಲ್ ಮಾಡುತ್ತಾರೆ. ಇದಿಷ್ಟು ವಿಚಾರ ಟ್ರೇಲರ್​ನಲ್ಲಿದೆ.

ಈ ಸಿನಿಮಾದಲ್ಲು ಸಸ್ಪೆನ್ಸ್, ಲವ್, ಕಾಮಿಡಿ ಸೇರಿ ಎಲ್ಲಾ ಅಂಶಗಳು ಇವೆಯಂತೆ. ಟ್ರೇಲರ್​ನಲ್ಲಿ ಅವಿನಾಶ್ ಆರ್ ಬಾಸೂತ್ಕರ್ ಸಂಗೀತ ಗಮನ ಸೆಳೆಯುತ್ತಿದೆ. ‘ನಿರ್ಮಾಪಕರ ಹೆಸರು ರಾಘವೇಂದ್ರ, ನಿರ್ದೇಶಕರ ಹೆಸರು ವಿಜಯ್. ಇವರ ಹೆಸರು ಸೇರಿಸಿದಾಗ ನನ್ನ ಹೆಸರು’ ಎಂದರು ನಟ ವಿಜಯ್ ರಾಘವೇಂದ್ರ.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ವಿಜಯ್ ರಾಘವೇಂದ್ರ ಸಿನಿಮಾ ‘ಕೇಸ್‌ ಆಫ್ ಕೊಂಡಾಣ’ ರಿಲೀಸ್; ವಿಶೇಷತೆ ಏನು?

ಈ ಚಿತ್ರಕ್ಕೆ ತೇಜಸ್ವಿನಿ ನಾಯಕಿ. ಸುನೀತ್ ಹಲಗೇರಿ ಛಾಯಾಗ್ರಾಹಣ, ಕಲೈ ನೃತ್ಯ ನಿರ್ದೇಶನ ಸಿನಿಮಾಗೆ ಇದೆ. ಮೋಹನ್ ರಂಗಕಹಳೆ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ. ಕಡ್ಡಿಪುಡಿ ಚಂದ್ರು, ಗೋವಿಂದೇ ಗೌಡ, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ,  ಪ್ರಸನ್ನ, ಶಶಿಧರ್, ಸುಂದರಶ್ರೀ, ಹರ್ಷಿತಾ ಗೌಡ ‘ಜೋಗ್ 101’ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ