ಹೊಸಬರಿಗೆ ಅವಕಾಶ ಕಲ್ಪಿಸಿದರೆ ಸ್ವಾಗತಿಸುತ್ತೇನೆ, ವರಿಷ್ಠರ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ: ನಳಿನ್ ಕುಮಾರ್ ಕಟೀಲ್

ಹೊಸಬರಿಗೆ ಅವಕಾಶ ಕಲ್ಪಿಸಿದರೆ ಸ್ವಾಗತಿಸುತ್ತೇನೆ, ವರಿಷ್ಠರ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ: ನಳಿನ್ ಕುಮಾರ್ ಕಟೀಲ್

ಅರುಣ್​ ಕುಮಾರ್​ ಬೆಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on:Mar 15, 2024 | 5:46 PM

ಪಕ್ಷದ ವರಿಷ್ಠರು ಹೊಸಬರಿಗೆ ಅವಕಾಶ ಕಲ್ಪಿಸಿದರೆ ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ ಅವರು ರಾಷ್ಟ್ರೀಯ ನಾಯಕರು ಯಾವುದೇ ನಿರ್ಣಯ ತೆಗೆದುಕೊಂಡರೂ ಅದನ್ನು ಗೌರವಿಸುವುದಾಗಿ ಹೇಳಿದರು. ಅಸಲಿಗೆ ಎಲ್ಲ ಬಿಜೆಪಿ ನಾಯಕರ ಗುರಿ ಒಂದೇ ಆಗಿದೆ, ದೇಶದೆಲ್ಲೆಡೆ ಬಿಜೆಪಿ ಜಯಭೇರಿ ಬಾರಿಸಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha polls) ತಮಗೆ ಟಿಕೆಟ್ ಸಿಗದಿರುವ ಸಾಧ್ಯತೆಯನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಂಡಿರುವಂತಿದೆ. ಟಿಕೆಟ್ ತಪ್ಪುವ ಸಂಭವನೀಯತೆ ಕುರಿತು ಇಂದು ಮಂಗಳೂರಲ್ಲಿ ಮಾತಾಡಿದ ಕಟೀಲ್, ರಾಜಕಾರಣದಲ್ಲಿ ಅಧಿಕಾರವೇ ಮುಖ್ಯವಲ್ಲ, ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ, ಅವರು ಗುಡಿಸು ಅಂದರೆ ಗುಡಿಸುತ್ತೇನೆ, ಒರೆಸು ಅಂತ ಹೇಳಿದರೆ ಒರೆಸುವುದಾಗಿ ಹೇಳಿದರು. ರಾಜಕಾರಣ ಯಾವತ್ತೂ ನಿಂತ ನೀರಲ್ಲ, ತಮ್ಮ ಪಕ್ಷದ ವೈಶಿಷ್ಟ್ಯತೆಯೇ ಅದು, ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು (ordinary party worker) ಗುರುತಿಸಿ ಬೆಳೆಸುವುದು. ಪಕ್ಷದ ವರಿಷ್ಠರು ಹೊಸಬರಿಗೆ ಅವಕಾಶ ಕಲ್ಪಿಸಿದರೆ ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ ಅವರು ರಾಷ್ಟ್ರೀಯ ನಾಯಕರು ಯಾವುದೇ ನಿರ್ಣಯ ತೆಗೆದುಕೊಂಡರೂ ಅದನ್ನು ಗೌರವಿಸುವುದಾಗಿ ಹೇಳಿದರು. ಅಸಲಿಗೆ ಎಲ್ಲ ಬಿಜೆಪಿ ನಾಯಕರ ಗುರಿ ಒಂದೇ ಆಗಿದೆ, ದೇಶದೆಲ್ಲೆಡೆ ಬಿಜೆಪಿ ಜಯಭೇರಿ ಬಾರಿಸಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಂಟ್ವಾಳದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತಾಡುವಾಗ ಸಂಸದ ನಳಿನ್ ಕುಮಾರ್ ಕಟೀಲ್ ಭಾವುಕರಾದರು

Published on: Mar 12, 2024 12:45 PM