Video: ಹೈಕೋರ್ಟ್​​ನ ವರ್ಚ್ಯುವಲ್​ ವಿಚಾರಣೆಗೆ ಟಾಯ್ಲೆಟ್​ನಿಂದ ಹಾಜರಾದ ವ್ಯಕ್ತಿ, 1 ಲಕ್ಷ ರೂ. ದಂಡ

Updated on: Jul 17, 2025 | 9:35 AM

ವ್ಯಕ್ತಿಯೊಬ್ಬ ಟಾಯ್ಲೆಟ್ ಸೀಟ್ ಮೇಲೆ ಕುಳಿತು ಗುಜರಾತ್ ಹೈಕೋರ್ಟ್​​ನ ವರ್ಚ್ಯುವಲ್ ವಿಚಾರಣೆಗೆ ಹಾಜರಾಗಿದ್ದು, ಆತನಿಗೆ ನ್ಯಾಯಾಲಯವು 1 ಲಕ್ಷರೂ. ದಂಡ ವಿಧಿಸಿದೆ. ಆ ವ್ಯಕ್ತಿಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ನಡೆಯುತ್ತಿದೆ.ಸೋಮವಾರ ನ್ಯಾಯಮೂರ್ತಿ ಎ.ಎಸ್. ಸುಪೆಹಿಯಾ ಮತ್ತು ನ್ಯಾಯಮೂರ್ತಿ ಆರ್.ಟಿ. ವಚ್ಛಾನಿ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಸಲಾಯಿತು. ನ್ಯಾಯಾಲಯವು ತನ್ನ ಆದೇಶದಲ್ಲಿ, ಆರೋಪಿ ಸಮದ್ ಅಬ್ದುಲ್ ರೆಹಮಾನ್ ಶಾ ತಮ್ಮ ನಡವಳಿಕೆಗಾಗಿ ಬೇಷರತ್ತಾಗಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.

ಅಹಮದಾಬಾದ್, ಜುಲೈ 17: ವ್ಯಕ್ತಿಯೊಬ್ಬ ಟಾಯ್ಲೆಟ್ ಸೀಟ್ ಮೇಲೆ ಕುಳಿತು ಗುಜರಾತ್ ಹೈಕೋರ್ಟ್​​ ವರ್ಚ್ಯುವಲ್ ವಿಚಾರಣೆಗೆ ಹಾಜರಾಗಿದ್ದು, ಆತನಿಗೆ ನ್ಯಾಯಾಲಯವು 1 ಲಕ್ಷ ರೂ. ದಂಡ ವಿಧಿಸಿದೆ. ಆ ವ್ಯಕ್ತಿಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ನಡೆಯುತ್ತಿದೆ. ಸೋಮವಾರ ನ್ಯಾಯಮೂರ್ತಿ ಎ.ಎಸ್. ಸುಪೆಹಿಯಾ ಮತ್ತು ನ್ಯಾಯಮೂರ್ತಿ ಆರ್.ಟಿ. ವಚ್ಛಾನಿ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಸಲಾಯಿತು.

ನ್ಯಾಯಾಲಯವು ತನ್ನ ಆದೇಶದಲ್ಲಿ, ಆರೋಪಿ ಸಮದ್ ಅಬ್ದುಲ್ ರೆಹಮಾನ್ ಶಾ ತಮ್ಮ ನಡವಳಿಕೆಗಾಗಿ ಬೇಷರತ್ತಾಗಿ ಕ್ಷಮೆಯಾಚಿಸಲು ಸಿದ್ಧರಿದ್ದಾನೆ ಹೀಗಾಗಿ, ಈ ಹಂತದಲ್ಲಿ, ಮುಂದಿನ ವಿಚಾರಣೆಯ ದಿನಾಂಕದೊಳಗೆ ಈ ನ್ಯಾಯಾಲಯದ ರಿಜಿಸ್ಟ್ರಿಯ ಮುಂದೆ 1 ಲಕ್ಷ ರೂ.ಗಳ ಮೊತ್ತವನ್ನು ಠೇವಣಿ ಇಡುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ಜೂನ್ 20 ರಂದು ಸಮದ್ ಒಟ್ಟು 74 ನಿಮಿಷಗಳ ಕಾಲ ವಿಚಾರಣೆಗೆ ಹಾಜರಾಗಿದ್ದ, ಆ ಸಮಯದಲ್ಲಿ ಆತ ಶೌಚಾಲಯದಲ್ಲಿ ಕಮೋಡ್ ಮೇಲೆ ಕುಳಿತಿದ್ದ.  ಜೂನ್ 30 ರಂದು, ನ್ಯಾಯಮೂರ್ತಿ ಎ.ಎಸ್. ಸುಪೆಹಿಯಾ ಮತ್ತು ಆರ್.ಟಿ. ವಚ್ಛಾನಿ ಅವರ ವಿಭಾಗೀಯ ಪೀಠವು ಆ ವ್ಯಕ್ತಿಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಆದೇಶಿಸಿತು. ಜುಲೈ 3 ರಂದು, ನ್ಯಾಯಾಲಯದ ಮೌಖಿಕ ಆದೇಶವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಯಿತು. ಬಾರ್ ಆಂಡ್ ಬೆಂಚ್ ವಿಡಿಯೋವನ್ನು ಹಂಚಿಕೊಂಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jul 17, 2025 09:34 AM