Video: ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ, ಆಮೇಲೆ ನಡೆದಿದ್ದೇ ರೋಚಕ

Updated on: Dec 26, 2025 | 7:12 AM

ವ್ಯಕ್ತಿಯೊಬ್ಬರು 10ನೇ ಮಹಡಿಯಲ್ಲಿರುವ ತಮ್ಮ ಫ್ಲ್ಯಾಟ್​ನಲ್ಲಿ ಮಲಗಿದ್ದರು. ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಎರಡು ಮಹಡಿಗಳ ಕೆಳಗಿನ ಗ್ರಿಲ್​ಗಳ ನಡುವೆ ಸಿಲುಕಿದ್ದರು. 57 ವರ್ಷದ ನಿತಿನ್ ಭಾಯ್ ಆದಿಯಾ ಸೂರತ್‌ನ ಜಹಾಂಗೀರ್‌ಪುರದಲ್ಲಿರುವ ಟೈಮ್ಸ್ ಗ್ಯಾಲಕ್ಸಿ ಕಟ್ಟಡದಲ್ಲಿರುವ ತಮ್ಮ ಮನೆಯ ಕಿಟಕಿಯ ಬಳಿ ಮಲಗಿದ್ದಾಗ ಆಯತಪ್ಪಿ ಬಿದ್ದು, ಎಂಟನೇ ಮಹಡಿಯಲ್ಲಿ ಗ್ರಿಲ್‌ನಿಂದ ಆಯತಪ್ಪಿ ಬಿದ್ದಿದ್ದು, ಅವರ ಕಾಲು ಸಿಲುಕಿಕೊಂಡಿದೆ.

ಸೂರತ್, ಡಿಸೆಂಬರ್ 26: ವ್ಯಕ್ತಿಯೊಬ್ಬರು 10ನೇ ಮಹಡಿಯಲ್ಲಿರುವ ತಮ್ಮ ಫ್ಲ್ಯಾಟ್​ನಲ್ಲಿ ಮಲಗಿದ್ದರು. ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಎರಡು ಮಹಡಿಗಳ ಕೆಳಗಿನ ಗ್ರಿಲ್​ಗಳ ನಡುವೆ ಸಿಲುಕಿದ್ದರು. 57 ವರ್ಷದ ನಿತಿನ್ ಭಾಯ್ ಆದಿಯಾ ಸೂರತ್‌ನ ಜಹಾಂಗೀರ್‌ಪುರದಲ್ಲಿರುವ ಟೈಮ್ಸ್ ಗ್ಯಾಲಕ್ಸಿ ಕಟ್ಟಡದಲ್ಲಿರುವ ತಮ್ಮ ಮನೆಯ ಕಿಟಕಿಯ ಬಳಿ ಮಲಗಿದ್ದಾಗ ಆಯತಪ್ಪಿ ಬಿದ್ದು, ಎಂಟನೇ ಮಹಡಿಯಲ್ಲಿ ಗ್ರಿಲ್‌ನಿಂದ ಆಯತಪ್ಪಿ ಬಿದ್ದಿದ್ದು, ಅವರ ಕಾಲು ಸಿಲುಕಿಕೊಂಡಿದೆ.

ನಂತರ ಒಂದು ಗಂಟೆಯ ಕಾಲ ಅಗ್ನಿಶಾಮಕ ದಳದ ಅಧಿಕಾರಿಗಳು ಹಗ್ಗಗಳು ಮತ್ತು ಸುರಕ್ಷತಾ ಬೆಲ್ಟ್‌ಗಳನ್ನು ಬಳಸಿಕೊಂಡು ನಿರಂತರ ಪ್ರಯತ್ನ ಪಟ್ಟು ಸುರಕ್ಷಿತವಾಗಿ ಅವರನ್ನು ಕೆಳಗಿಳಿಸಲಾಯಿತು. ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ, ವೀಡಿಯೊಗಳಲ್ಲಿ ಆದಿಯಾ ತಲೆಕೆಳಗಾಗಿ ನೇತಾಡುತ್ತಿರುವುದು ಕಂಡುಬಂದಿದ್ದು, ಅವರ ಕಾಲು ಮೇಲಿನಿಂದ ಗ್ರಿಲ್ ಬಾಕ್ಸ್‌ಗೆ ತೀವ್ರವಾಗಿ ಬಿಗಿದಂತಾಗಿರುವುದನ್ನು ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ