Man rains money in KR Market | ಅರುಣ್ ಒಳ್ಳೆಯ ವ್ಯಕ್ತಿ, ಕೋವಿಡ್ ಸಮಯದಲ್ಲಿ ತುಂಬಾ ಜನರಿಗೆ ಸಹಾಯ ಮಾಡಿದ್ದಾನೆ: ಶಿವಕುಮಾರ್, ಅರುಣ್ ಸ್ನೇಹಿತ

|

Updated on: Jan 24, 2023 | 7:30 PM

ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ಮಾಧ್ಯಮದವರಿಗೆ ನೀಡಿರುವ ಹೇಳಿಕೆ ಪ್ರಕಾರ ಅರುಣ್ ಪ್ರಚಾರದ ಗೀಳಿಗಾಗಿ ಹಾಗೆ ಮಾಡಿದ್ದಾನೆ.

ಬೆಂಗಳೂರು:  ಮಂಗಳವಾರ ಬೆಳಗ್ಗೆ ವ್ಯಕ್ತಿಯೊಬ್ಬ ಕೆಆರ್ ಮಾರ್ಕೆಟ್ ಫ್ಲೈ ಓವರ್ (flyover) ಮೇಲೆ ನಿಂತು ಕೆಳಭಾಗಕ್ಕೆ ಹಣ ಎಸೆದಿದ್ದನ್ನು ನೀವು ನೋಡಿರಬಹುದು. ಪ್ರಾಯಶಃ ಇದಕ್ಕೆ ಮೊದಲು ಇಂಥ ಘಟನೆ ಬಗ್ಗೆ ನಾವ್ಯಾರೂ ಕೇಳಿರಲಿಲ್ಲ. ಹಣ ಎಸೆದವನ ಹೆಸರು ಅರುಣ್ ಅಂತೆ ಮತ್ತು ಅವನ ಸ್ನೇಹಿತ ಹೇಳುವ ಪ್ರಕಾರ ಅವನು ಈವೆಂಟ್ ಮ್ಯಾನೇಜ್ಮೆಂಟ್ (event management) ಕಂಪನಿಯೊಂದನ್ನು ನಡೆಸುತ್ತಾನೆ. ಶಿವಕುಮಾರ (Shivakumar) ಹೆಸರಿನ ಸ್ನೇಹಿತ ಮಂಗಳವಾರ ಮಾಧ್ಯಮದವರ ಜೊತೆ ಮಾತಾಡಿರುವ ಪ್ರಕಾರ ಅರುಣ್ ಒಬ್ಬ ಒಳ್ಳೆಯ ವ್ಯಕ್ತಿ ಮತ್ತು ಪರೋಪಕಾರಿ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಅವನು ಕಷ್ಟದಲ್ಲಿದ್ದ ಅನೇಕರಿಗೆ ಸಹಾಯ ಮಾಡಿದ್ದಾನೆ ಎಂದು ಹೇಳುತ್ತಾರೆ. ಅದರೆ ಮಂಗಳವಾರ ಅವನ್ಯಾಕೆ ಹಣ ಎಸೆದ ಅಂತ ತನಗೂ ಗೊತ್ತಿಲ್ಲ ಎಂದು ಅಂತ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ಮಾಧ್ಯಮದವರಿಗೆ ನೀಡಿರುವ ಹೇಳಿಕೆ ಪ್ರಕಾರ ಅರುಣ್ ಪ್ರಚಾರದ ಗೀಳಿಗಾಗಿ ಹಾಗೆ ಮಾಡಿದ್ದಾನೆ. ಆದರೆ ಅರುಣ್ ಹಣ ಎಸೆದಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದಲ್ಲದೆ ಇತರೆ ಸಮಸ್ಯೆಗಳು ಎದುರಾಗಿದ್ದವು. ಹಾಗಾಗಿ ಕೋರ್ಟ್ ಅನುಮತಿ ಪಡೆದು ಅವನ ವಿರುದ್ಧ ಸುವೋ ಮೋಟು ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಹಣ ಎಸೆಯುತ್ತಿರುವ ದೃಶ್ಯವನ್ನು ರೆಕಾರ್ಡ್ ಮಾಡಿಸಿಕೊಂಡಿರುವ ಅರುಣ್ ಅದನ್ನು ಸಾಮಾಜಿಕಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದನ್ನು ನೋಡಿದರೆ ಅವನಿಗೆ ಖಂಡಿತ ಪ್ರಚಾರದ ಗೀಳಿದೆ. ಮನಶಾಸ್ತ್ರಜ್ಞರ ಪ್ರಕಾರ ವ್ಯಕ್ತಿಯೊಬ್ಬ ಹಣ ಎಸೆಯುವುದು ಮತ್ತು ಜನ ಅದನ್ನು ಎತ್ತಿಕೊಳ್ಳುವುದನ್ನು ನೋಡುವುದು ಅವನಲ್ಲಿನ ಅಹಂಕಾರದ ದ್ಯೋತಕವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ