Crazy act at KR Market: ಫ್ಲೈಓವರ್ ಮೇಲಿಂದ ಹಣ ಎಸೆದ ಅರುಣ್ ಯಾಕೆ ಹಾಗೆ ಮಾಡಿದ್ದು ಅಂತ ಮಾತ್ರ ಬಾಯಿ ಬಿಡುತ್ತಿಲ್ಲ!

Edited By:

Updated on: Jan 24, 2023 | 6:28 PM

ಕಾರೊಳಗೆ ಕುಳಿತಾಗಲೂ ಅವನು ಕೇವಲ ಒಳ್ಳೇ ಉದ್ದೇಶದಿಂದಲೇ ದುಡ್ಡು ಎಸೆದಿದ್ದು ಅಂತ ಮಾತ್ರ ಹೇಳಿ ಅಲ್ಲಿಂದ ಪರಾರಿಯಾಗುತ್ತಾನೆ. ಅವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು:  ಬೆಳಗ್ಗೆ ಕೆ ಆರ್ ಮಾರ್ಕೆಟ್ ಫ್ಲೈಓವರ್ (KR Market) ಮೇಲಿಂದ ಹಿಡಿಹಿಡಿಯಾಗಿ ನೋಟುಗಳನ್ನು ಕೆಳಗಿಸಿದ ವ್ಯಕ್ತಿಯ ಹೆಸರು ಅರುಣ್ (Arun) ಅಂತ ಗೊತ್ತಾಗಿದೆ. ಆದರೆ ಸೂಟುಧಾರಿ ಮೂರ್ಖ ಮಾಧ್ಯಮದವರು ಎಷ್ಟೇ ದುಂಬಾಲು ಬಿದ್ದರೂ ದುಡ್ಡು ಯಾಕೆ ಎಸೆದೆ ಅನ್ನೋದನ್ನು ಮಾತ್ರ ಬಾಯಿಬಿಡಲಿಲ್ಲ. ಪತ್ರಕರ್ತರು ಪ್ರಶ್ನೆ ಕೇಳಿದರೆ ಅವರು ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಅವನು ಮಾಡುತ್ತಾನೆ ಆದರೆ ಬಾಯಿ ಮಾತ್ರ ಬಿಡುವುದಿಲ್ಲ. ಕಾರೊಳಗೆ ಕುಳಿತಾಗಲೂ ಅವನು ಕೇವಲ ಒಳ್ಳೇ ಉದ್ದೇಶದಿಂದಲೇ (good reason) ದುಡ್ಡು ಎಸೆದಿದ್ದು ಅಂತ ಮಾತ್ರ ಹೇಳಿ ಅಲ್ಲಿಂದ ಪರಾರಿಯಾಗುತ್ತಾನೆ. ಅವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 24, 2023 05:40 PM