Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru Bengaluru Expressway ಮಂಡ್ಯ ಬಳಿ  ಟಿಪ್ಪರ್ ಲಾರಿ ಟೈಯರ್ ಬ್ಲಾಸ್ಟ್, ಸ್ವಲ್ಪದರಲ್ಲೇ ತಪ್ಪಿದ ಅವಘಡ

Mysuru Bengaluru Expressway ಮಂಡ್ಯ ಬಳಿ ಟಿಪ್ಪರ್ ಲಾರಿ ಟೈಯರ್ ಬ್ಲಾಸ್ಟ್, ಸ್ವಲ್ಪದರಲ್ಲೇ ತಪ್ಪಿದ ಅವಘಡ

ಪ್ರಶಾಂತ್​ ಬಿ.
| Updated By: ಸಾಧು ಶ್ರೀನಾಥ್​

Updated on: Aug 03, 2023 | 6:08 PM

Tipper lorry tyre blast: ಮಂಡ್ಯ - ಡಸ್ಟ್ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿಯ ಟೈಯರ್ ಬ್ಲಾಸ್ಟ್ ಆಗಿದ್ದು, ಸ್ವಲ್ಪದರಲ್ಲೇ ಸಂಭವಿಸಬಹುದಾಗಿದ್ದ ಭಾರೀ ಅವಘಡವೊಂದು ತಪ್ಪಿದಂತಾಗಿದೆ. ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.

ಮಂಡ್ಯ: ಡಸ್ಟ್ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿಯ ಟೈಯರ್ ಬ್ಲಾಸ್ಟ್ ಆಗಿದ್ದು (Tipper lorry tyre blast), ಸ್ವಲ್ಪದರಲ್ಲೇ ಸಂಭವಿಸಬಹುದಾಗಿದ್ದ ಭಾರೀ ಅವಘಡವೊಂದು ತಪ್ಪಿದಂತಾಗಿದೆ. ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ಹೆದ್ದಾರಿಯಲ್ಲಿ (Mysuru Bengaluru Expressway) ಈ ಅವಘಡ ಸಂಭವಿಸಿದೆ.

Also Read: ಕಾಮಗಾರಿಗಳನ್ನು ನಿಲ್ಲಿಸಿ ಬಿಲ್​ಗಳನ್ನು ತಡೆಹಿಡಿದು ಗುತ್ತಿಗೆದಾರರಿಗೆ ಉಸಿರುಗಟ್ಟಿಸುವ ಸ್ಥಿತಿ ರಾಜ್ಯ ಸರ್ಕಾರ ಸೃಷ್ಟಿಸಿದೆ: ಡಾ ಸಿ ಎನ್ ಅಶ್ವಥ್ ನಾರಾಯಣ

ಘಟನೆ ಮಂಡ್ಯ (Mandya) ತಾಲೂಕಿನ ಉಮ್ಮಡಹಳ್ಳಿ ಗೇಟ್ (Ummadahalli gate) ಬಳಿ ನಡೆದಿದೆ. ಮದ್ದೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿಯ ಟೈಯರ್ ಏಕಾಏಕಿ ಬ್ಲ್ಯಾಸ್ಟ್ ಆಗಿದೆ. ಇನ್ನು ಲಾರಿಯ ಪಕ್ಕದಲ್ಲೇ ಕಾರೊಂದು ಕೂಡ ಹೋಗುತ್ತಿತ್ತು. ಆದರೆ ಕಾರಿನ ಹಿಂಭಾಗಕ್ಕೆ ಲಾರಿಯ ಫುಟ್ ಬೋರ್ಡ್ ಬಿದ್ದಿದೆ. ಇನ್ನು ಟೈಯರ್ ಬ್ಲ್ಯಾಸ್ಟ್ ನ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ