Video: ಹಣ ಹಂಚಿಕೆ ವಿಚಾರವಾಗಿ ಮಂಗಳಮುಖಿಯರ ನಡುವೆ ಮಾರಾಮಾರಿ

Updated on: Nov 29, 2025 | 10:13 AM

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ಹಣ ಹಂಚಿಕೆ ವಿಚಾರಕ್ಕೆ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ನಡೆದ ಭೀಕರ ಗಲಾಟೆ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಮಾರಾಮಾರಿಯಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ ಹಾಗೂ ವಸ್ತುಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಮಂಡ್ಯ, ನ.29: ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ಮಂಗಳಮುಖಿಯರ (Mandya transgender fight) ನಡುವೆ ಬಿಗ್​​​ ಫೈಟ್​​​​​​ ನಡೆದಿದೆ. ಇದೀಗ ಈ ಬಗ್ಗೆ ವಿಡಿಯೋವೊಂದು ವೈರಲ್​​ ಆಗಿದೆ. ಹಣ ಹಂಚಿಕೆ ವಿಚಾರಕ್ಕೆ ಮೈಸೂರು ಮತ್ತು ಮಂಡ್ಯದ ಮಂಗಳಮುಖಿಯರ ಗುಂಪುಗಳ ಮಧ್ಯೆ ಗಲಾಟೆ​ ನಡೆದಿದೆ. ಎರಡು ಕಡೆಯವರು ಸಾರ್ವಜನಿಕ ಸ್ಥಳದಲ್ಲಿ ಸಿಕ್ಕ ಸಿಕ್ಕ ವಸ್ತುಗಳಿಂದ ಮನಬಂದಂತೆ ಬಡಿದಾಡಿಕೊಂಡಿದ್ದಾರೆ. ಇವರ ಗಲಾಟೆಯಿಂದ ಸಾರ್ವಜನಿಕ ವಸ್ತುಗಳಿಗೆ ಹಾನಿಯಾಗಿದೆ. ಜತೆಗೆ ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರತಿದಿನ ಈ ಮಂಗಳಮುಖಿಯರ ಜಗಳ ನಡೆಯುತ್ತಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದೀಗ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 29, 2025 09:46 AM