ಮಂಡ್ಯ: ಪಾನಮತ್ತನಾಗಿ ಸಂತೆ ನಡೆಯುತ್ತಿದ್ದ ಸ್ಥಳಕ್ಕೆ ಜೆಸಿಬಿ ನುಗ್ಗಿಸಿದ ಚಾಲಕ, ಆಮೇಲೇನಾಯ್ತು? ವಿಡಿಯೋ ನೋಡಿ

Edited By:

Updated on: Nov 13, 2023 | 8:48 PM

ಚಾಲಕ ಕುಡಿದ ಅಮಲಿನಲ್ಲಿ ಮನಸೋಇಚ್ಛೆ ಜೆಸಿಬಿ ಚಲಾಯಿಸಿದ್ದಾನೆ. ವ್ಯಾಪಾರಿಗಳು, ಸಾರ್ವಜನಿಕರು ಜೆಸಿಬಿ ನಿಲ್ಲಿಸುವಂತೆ ಕಲ್ಲು ತೂರಿದರು. ಬಳಿಕ ಜೆಸಿಬಿ ಬೆನ್ನತ್ತಿ ಹಿಡಿದು ಚಾಲಕನಿಗೆ ಥಳಿಸಿದರು. ಪರಿಣಾಮವಾಗಿ ಬಿಹಾರ ಮೂಲದ ಜೆಸಿಬಿ ಚಾಲಕ ರಾಜ್​ಕುಮಾರ್ ಸ್ಥಿತಿ ಗಂಭೀರವಾಗಿದೆ.

ಮಂಡ್ಯ, ನವೆಂಬರ್ 13: ಜೆಸಿಬಿ ಚಾಲಕನೊಬ್ಬ ಪಾನಮತ್ತನಾಗಿ ಸಂತೆ ನಡೆಯುತ್ತಿದ್ದ ಸ್ಥಳಕ್ಕೆ ಜೆಸಿಬಿ (JCB) ನುಗ್ಗಿಸಿದ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಸೋಮವಾರ ನಡೆದಿದೆ. ರಸ್ತೆ ಬದಿ ಅಂಗಡಿಗಳು, ತರಕಾರಿ ಅಂಗಡಿಗಳ ಮೇಲೆ ಜೆಸಿಬಿ ಚಲಿಸಿದೆ. ಜೆಸಿಬಿ ಡಿಕ್ಕಿ ರಭಸಕ್ಕೆ ಟೀ ಹೋಟೆಲ್, ತಳ್ಳುವ ಗಾಡಿಗಳು ಛಿದ್ರ ಛಿದ್ರವಾಗಿವೆ. ಅದೃಷ್ಟವಶಾತ್, ಜೆಸಿಬಿ ನುಗ್ಗಿ ಬರುವುದನ್ನು ಗಮನಿಸಿ ಓಡಿದ್ದರಿಂದ ಜನರು ಸುರಕ್ಷಿತರಾಗಿದ್ದಾರೆ.

ಚಾಲಕ ಕುಡಿದ ಅಮಲಿನಲ್ಲಿ ಮನಸೋಇಚ್ಛೆ ಜೆಸಿಬಿ ಚಲಾಯಿಸಿದ್ದಾನೆ. ವ್ಯಾಪಾರಿಗಳು, ಸಾರ್ವಜನಿಕರು ಜೆಸಿಬಿ ನಿಲ್ಲಿಸುವಂತೆ ಕಲ್ಲು ತೂರಿದರು. ಬಳಿಕ ಜೆಸಿಬಿ ಬೆನ್ನತ್ತಿ ಹಿಡಿದು ಚಾಲಕನಿಗೆ ಥಳಿಸಿದರು. ಪರಿಣಾಮವಾಗಿ ಬಿಹಾರ ಮೂಲದ ಜೆಸಿಬಿ ಚಾಲಕ ರಾಜ್​ಕುಮಾರ್ ಸ್ಥಿತಿ ಗಂಭೀರವಾಗಿದೆ.

ಸ್ಥಳಕ್ಕೆ ಆಗಮಿಸಿ ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ಬೆಳ್ಳೂರಿನ ಬಿಜಿಎಸ್​​ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಜ್​ಕುಮಾರ್, ಕುಣಿಗಲ್ ಮೂಲದವರಿಗೆ ಸೇರಿದ ಜೆಸಿಬಿ ಚಾಲಕನಾಗಿದ್ದಾನೆ. ಮಂಡ್ಯ ಜಿಲ್ಲೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More