ಗಂಡನ ಪ್ರೇಮ, ಪ್ರೀತಿ-ಪ್ರಣಯದಾಟಕ್ಕೆ ಪತ್ನಿ ಸುಸ್ತು: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ

Updated on: Feb 15, 2026 | 5:29 PM

ಇದು ಮಂಗಳೂರು (Mangaluru) ಮನ್ಮಥನ ಭಯಾನಕ ಸ್ಟೋರಿ. ಫೇಸ್​ಬುಕ್​ನಲ್ಲಿ ಹುಡುಗಿಯರಿಗೆ ಗಾಳ ಹಾಕಿ ವಂಚಿಸುವುದೇ ಮನೀಶ್​​​​ನ ಕೆಲಸ. ಫೇಸ್​ಬುಕ್​ನಲ್ಲಿ ಪರಿಚಯವಾಗಿ, ಪ್ರೀತಿ ಎಂಬಾಕೆಯನ್ನು ಮನೀಶ್ ಮದುವೆ ಆಗಿದ್ದ. ಆ ನಂತರ ಪ್ರೀತಿಯೇ 2 ಲಕ್ಷ ರೂ. ಕೊಟ್ಟು ಮನೀಶ್​ಗೆ ವಿದೇಶದಲ್ಲಿ ಕೆಲಸ ಕೊಡಿಸಿದ್ದಳು. ಆದ್ರೆ, ದುಬೈ ಕೆಲಸಕ್ಕೆಂದು ಹೋದ ಮನೀಶ್, ಬಹರೇನ್​ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿಗೆ ಬಿದ್ದಿದ್ದ. ಈ ವಿಷಯ ಪ್ರೀತಿಗೆ ತಿಳಿದು ಮನೀಷ್ ಇತಿಹಾಸ ಕೆದಕಿದ್ದು, ಈತನಿಗೆ ಮದುವೆಗೂ ಮುನ್ನ ಯುವತಿಯರ ಜೊತೆ ಲವ್ ಅಫೇರ್ ಇತ್ತು ಎನ್ನುವುದು ಬಯಲಾಗಿದೆ.

ಮಂಗಳೂರು, (ಫೆಬ್ರವರಿ 15): ಇದು ಮಂಗಳೂರು (Mangaluru) ಮನ್ಮಥನ ಭಯಾನಕ ಸ್ಟೋರಿ. ಫೇಸ್​ಬುಕ್​ನಲ್ಲಿ ಹುಡುಗಿಯರಿಗೆ ಗಾಳ ಹಾಕಿ ವಂಚಿಸುವುದೇ ಮನೀಶ್​​​​ನ ಕೆಲಸ. ಫೇಸ್​ಬುಕ್​ನಲ್ಲಿ ಪರಿಚಯವಾಗಿ, ಪ್ರೀತಿ ಎಂಬಾಕೆಯನ್ನು ಮನೀಶ್ ಮದುವೆ ಆಗಿದ್ದ. ಆ ನಂತರ ಪ್ರೀತಿಯೇ 2 ಲಕ್ಷ ರೂ. ಕೊಟ್ಟು ಮನೀಶ್​ಗೆ ವಿದೇಶದಲ್ಲಿ ಕೆಲಸ ಕೊಡಿಸಿದ್ದಳು. ಆದ್ರೆ, ದುಬೈ ಕೆಲಸಕ್ಕೆಂದು ಹೋದ ಮನೀಶ್, ಬಹರೇನ್​ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿಗೆ ಬಿದ್ದಿದ್ದ. ಈ ವಿಷಯ ಪ್ರೀತಿಗೆ ತಿಳಿದು ಮನೀಷ್ ಇತಿಹಾಸ ಕೆದಕಿದ್ದು, ಈತನಿಗೆ ಮದುವೆಗೂ ಮುನ್ನ ಯುವತಿಯರ ಜೊತೆ ಲವ್ ಅಫೇರ್ ಇತ್ತು ಎನ್ನುವುದು ಬಯಲಾಗಿದೆ.

ಈ ಹಿಂದೆಯೂ ಮನೀಷ್ ಯುವತಿಯರ ಬಳಿ ಹಣ ಪಡೆದು ಮೋಸ ಮಾಡಿದ್ದ ಅನ್ನೋ ಬಗ್ಗೆ ಪ್ರೀತಿಗೆ ಮಾಹಿತಿ ಸಿಕ್ಕಿದೆ. ಹಣ ವಾಪಸ್ ಕೇಳಿದ್ರೆ, ಬ್ರೈನ್ ಟ್ಯೂಮರ್ ಇದೆ ಎಂದು ಎಲ್ಲಾ ಹುಡುಗೀರಿಗೆ ಹೇಳಿ, ಹಣ ಕೊಡದೇ ಲವ್ ಬ್ರೇಕಪ್ ಮಾಡ್ಕೊಂಡಿದ್ದಾನೆ. ಅಂದಾಗೆ, ಈ ಮಂಗಳೂರಿನ ಮನ್ಮಥ, ಟಿಕ್ ಟಾಕ್​ನಲ್ಲಿ ರೀಲ್ಸ್ ಮಾಡಿ ಯುವತಿಯರಿಗೆ ಗಾಳ ಹಾಕ್ತಿದ್ದ. ಸದ್ಯ ಮನೀಷ್ ವಿರುದ್ಧ ಪತ್ನಿ ದೂರು ನೀಡಿದ್ದು, ಮಂಗಳೂರು ಮಹಿಳಾ ಠಾಣೆಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ: ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ

Published on: Feb 15, 2026 05:28 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More