‘ಮಹಾನಟಿ ಸೀಸನ್ 2’ ವಿನ್ನರ್ ಆದ ಮಂಗಳೂರಿನ ವಂಶಿ
‘ಮಹಾನಟಿ ಸೀಸನ್ 2’ನಲ್ಲಿ ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಒಳ್ಳೆಯ ರೀತಿಯಲ್ಲಿ ಅವರು ಶೋ ನಡೆಸಿಕೊಟ್ಟಿದ್ದಾರೆ. ಶನಿವಾರ (ನವೆಂಬರ್ 8) ಹಾಗೂ ಭಾನುವಾರ (ನವೆಂಬರ್ 9) ಫಿನಾಲೆ ಪ್ರಸಾರ ಕಂಡಿದೆ. ವಂಶಿ ಅವರು ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಮಹಾನಟಿ ಸೀಸನ್ 2’ನ ವಿನ್ನರ್ ಆಗಿ ಮಂಗಳೂರಿನ ವಂಶಿ ಹೊರ ಹೊಮ್ಮಿದ್ದಾರೆ. ಕಳೆದ ಕೆಲ ತಿಂಗಳಿಂದ ತಮ್ಮ ನಟನಾ ಪ್ರತಿಭೆಯನ್ನು ತೋರಿಸುತ್ತಾ ಬರುತ್ತಿದ್ದ ಅವರು, ಈಗ ಕಪ್ ಗೆದ್ದಿದ್ದಾರೆ. ಬೆಳಗಾವಿಯ ವರ್ಷಾ ಡಿಗ್ರಜೆ ಅವರು ಮೊದಲ ರನ್ನರ್ ಅಪ್ ಆದರು.
ವಿನ್ ಆದ ಬಳಿಕ ಮಾತನಾಡಿದ ವಂಶಿ ಅವರು, ‘ತುಂಬಾ ಖುಷಿ ಆಗ್ತಿದೆ. ಬಿ ಸರೋಜಾ ದೇವಿ ಅವರನ್ನು ನೋಡಿಲ್ಲ ನಾನು. ಆದರೆ, ಅವರ ನಟನೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಟ್ರೋಫಿ ಮೂಲಕ ಅವರ ಆಶೀರ್ವಾದ ನನಗಿದೆ. ನಟಿ ಆಗಬೇಕು ಎಂಬ ಕನಸು ಕಂಡ ನನಗೆ ಇದು ಸಣ್ಣ ಹೆಜ್ಜೆ’ ಎಂದಿದ್ದಾರೆ ವಂಶಿ.
‘ಮಹಾನಟಿ ಸೀಸನ್ 2’ನಲ್ಲಿ ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಒಳ್ಳೆಯ ರೀತಿಯಲ್ಲಿ ಅವರು ಶೋ ನಡೆಸಿಕೊಟ್ಟಿದ್ದಾರೆ. ಶನಿವಾರ (ನವೆಂಬರ್ 8) ಹಾಗೂ ಭಾನುವಾರ (ನವೆಂಬರ್ 9) ಫಿನಾಲೆ ಪ್ರಸಾರ ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.