ಆರು ಗಂಟೆಗಳ ಫೇಸ್ಬುಕ್ ವ್ಯತ್ಯಯಕ್ಕೆ ಝಕರ್ಬರ್ಗ್ ಕಳೆದುಕೊಂಡಿದ್ದು ಸುಮಾರು ರೂ. 50,000 ಕೋಟಿ!
ಆರು ಗಂಟೆಗಳ ಅವಧಿಯಲ್ಲಿ ಫೇಸ್ಬುಕ್ ಸ್ಟಾಕ್ಗಳು ಶೇಕಡಾ 5 ರಷ್ಟು ಕಡಿಮೆಯಾಗಿ ಅದರ ಸಂಸ್ಥಾಪಕ ಮಾರ್ಕ್ ಝಕರ್ಬರ್ಗ್ ಸುಮಾರು ರೂ. 50,000 ಕೋಟಿಗಳ ನಷ್ಟ ಅನುಭವಿಸಿದ್ದಾರೆ.
ಪ್ರಪಂಚವು ಫೇಸ್ಬುಕ್, ವಾಟ್ಸ್ಯಾಪ್ ಮತ್ತು ಇನ್ಸ್ಟಾಗ್ರಾಮ್ ಸೇವೆಗಳನ್ನು ಎಷ್ಟು ನೆಚ್ಚಿಕೊಂಡಿದೆ ಅಂತ ಸೋಮವಾರ ಸ್ಪಷ್ಟವಾಯಿತು. ಫೇಸ್ಬುಕ್ ಅಧೀನದಲ್ಲಿರುವ ಸೇವೆಗಳು ಇದ್ದಕ್ಕಿದ್ದಂತೆ ಸೋಮವಾರ ರಾತ್ರಿ ಸ್ಥಗಿತಗೊಂಡು ವಿಶ್ವದಾದ್ಯಂತ 350 ಕೋಟಿ ಜನರಲ್ಲಿ ಹಿಂದೆಂದೂ ಕಾಣದ ಆತಂಕವನ್ನುಂಟು ಮಾಡಿದ್ದವು. 6 ಗಂಟೆಗಳ ಕಾಲ ಸೇವೆ ದೊರಕದೆ ಹೋಗಿ ಜನ ಹೌಹಾರಿದರು. ಆತಂಕ, ಚಡಪಡಿಕೆ ಮತ್ತು ಉದ್ವಿಗ್ನತೆ ಎಲ್ಲರ ಮುಖದಲ್ಲಿ ಕಾಣಿಸುತಿತ್ತು. ಸುಮಾರು 6 ಗಂಟೆಗಳ ನಂತರ ಈ ಪ್ಲಾಟ್ಫಾರ್ಮ್ಗಳು ಪುನಃ ಸಕ್ರಿಯಗೊಂಡ ನಂತರವೇ ಅವರು ನಿಟ್ಟುಸಿರಾದರು.
ಪ್ರಮಾದಕರ ಕಾನ್ಫ್ಯುಗರೇಷನ್ ಬದಲಾವಣೆಯಿದಾಗಿ ಸದರಿ ಅನಾಹುತ ಸಂಭವಿಸಿತು ಅಂತ ಫೇಸ್ಬುಕ್ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಹೇಳಿದರು. ಈ ಆರು ಗಂಟೆಗಳ ಅವಧಿಯಲ್ಲಿ ಫೇಸ್ಬುಕ್ ಸ್ಟಾಕ್ಗಳು ಶೇಕಡಾ 5 ರಷ್ಟು ಕಡಿಮೆಯಾಗಿ ಅದರ ಸಂಸ್ಥಾಪಕ ಮಾರ್ಕ್ ಝಕರ್ಬರ್ಗ್ ಸುಮಾರು ರೂ. 50,000 ಕೋಟಿಗಳ ನಷ್ಟ ಅನುಭವಿಸಿದ್ದಾರೆ.
ಫೇಸ್ಬುಕ್ ಅಸ್ತಿತ್ವಕ್ಕೆ ಬಂದ ನಂತರ ಅದು ಒದಗಿಸುವ ಸೇವೆಗಳಲ್ಲಿ ಅತಿ ದೀರ್ಘಕಾಲದ ವ್ಯತ್ಯಯ ಇದಾಗಿದೆ. ಇಂಟರ್ನೆಟ್ ನಿಂದ ಫೇಸ್ಬುಕ್ ಸೇವೆಗಳು ನಾಪತ್ತೆಯಾಗುತ್ತಿದ್ದಂತೆಯೇ ನೂರಾರು ಕತೆಗಳು ಹುಟ್ಟಿಕೊಂಡವು. ಒಂದು ಕತೆಯ ಸಾರಾಂಶದ ಪ್ರಕಾರದ ಭಾರಿ ಪ್ರಮಾಣ ಹ್ಯಾಕ್ ನಿಂದಾಗಿ ವ್ಯತ್ಯಯ ಸಂಭವಿಸಿತು.
ಅದರೆ ಕೆಲವು ಗಂಟೆಗಳ ನಂತರ ಫೇಸ್ಬುಕ್ ಅಧಿಕಾರಿಗಳು ಹ್ಯಾಕ್ ಆಗುವ ಸಾಧ್ಯತೆಗಳೇ ಇಲ್ಲ ಎಂದು ಬ್ಲಾಗ್ನಲ್ಲಿ ಬರೆದುಕೊಂಡರು. ವೇದಿಕೆಯ ರೌಟರ್ಗಳಲ್ಲಿ ಭಾರಿ ಪ್ರಮಾಣದ ತಾಂತ್ರಿಕ ತೊಂದೆರಯಿಂದಾಗಿ ವ್ಯತ್ಯಯ ಉಂಟಾಯಿತು ಅಂತ ಅಧಿಕಾರಿಗಳು ಹೇಳಿದರು. ಪ್ರಮಾದಕರ ಕಾನ್ಫ್ಯುಗರೇಷನ್ ಅನ್ನು ಸಹ ಅಧಿಕಾರಿಗಳು ದೂಷಿಸಿದ್ದಾರೆ.
ಇದನ್ನೂ ಓದಿ: Video: ಪ್ರತಿಭಟನಾನಿರತ ರೈತರ ಮೇಲೆ ಎರಡು ವಾಹನಗಳು ಹರಿದ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್; ಪ್ರಧಾನಿ ಮೋದಿ ವಿರುದ್ಧ ಟೀಕೆ