Video: ನೀನು ಹೊರಗೆ ಬರ್ತೀಯಾ ಅಥವಾ ನಾವು ಒಳಗೆ ಬರ್ಬೇಕಾ, ಭೂತದ ವೇಷ ತೊಟ್ಟು ಮನೆ ಬಾಗಿಲು ತಟ್ಟಿದ ದುಷ್ಕರ್ಮಿಗಳು
ಭೂತ ಬಂದು ಮನೆ ಬಾಗಿಲು ಬಡಿದ್ರೆ ನಿಮಗೆ ಏನು ಅನ್ಸುತ್ತೆ ಅಂತಾ ಒಮ್ಮೆ ಯೋಚನೆ ಮಾಡಿ. ಅಮೆರಿಕದಲ್ಲಿ ಮನೆಯೊಂದರ ಬಳಿಗೆ ಮೂವರು ಹ್ಯಾಲೋವೀನ್ ವೇಷ ಧರಿಸಿ ಬಂದು ಬಾಗಿಲು ತಟ್ಟಿ ನೀನು ಹೊರಗೆ ಬರ್ತೀಯಾ ಅಥವಾ ನಾವು ಒಳಗೆ ಬರಬೇಕಾ ಎಂದು ಗದರಿಸಿರುವ ಘಟನೆ ನಡೆದಿದೆ. ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕೆಲವರು ಪ್ರ್ಯಾಂಕ್ ಎಂದು ಕರೆದರೆ ಪೊಲೀಸರು ಇದೇನು ತಮಾಷೆಯಾ ಎಂದು ಗರಂ ಆಗಿದ್ದಾರೆ. ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೊದಲು ಮನೆಯವರು ಇದು ತಮಾಷೆ ಎಂದು ಭಾವಿಸಿದ್ದರು
ವಾಷಿಂಗ್ಟನ್, ಅಕ್ಟೋಬರ್ 21: ಭೂತ ಬಂದು ಮನೆ ಬಾಗಿಲು ಬಡಿದ್ರೆ ನಿಮಗೆ ಏನು ಅನ್ಸುತ್ತೆ ಅಂತಾ ಒಮ್ಮೆ ಯೋಚನೆ ಮಾಡಿ. ಅಮೆರಿಕದಲ್ಲಿ ಮನೆಯೊಂದರ ಬಳಿಗೆ ಮೂವರು ಹ್ಯಾಲೋವೀನ್ ವೇಷ ಧರಿಸಿ ಬಂದು ಬಾಗಿಲು ತಟ್ಟಿ ನೀನು ಹೊರಗೆ ಬರ್ತೀಯಾ ಅಥವಾ ನಾವು ಒಳಗೆ ಬರಬೇಕಾ ಎಂದು ಗದರಿಸಿರುವ ಘಟನೆ ನಡೆದಿದೆ. ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕೆಲವರು ಪ್ರ್ಯಾಂಕ್ ಎಂದು ಕರೆದರೆ ಪೊಲೀಸರು ಇದೇನು ತಮಾಷೆಯಾ ಎಂದು ಗರಂ ಆಗಿದ್ದಾರೆ. ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೊದಲು ಮನೆಯವರು ಇದು ತಮಾಷೆ ಎಂದು ಭಾವಿಸಿದ್ದರು. ಹಾಗಾಗಿ ಹ್ಯಾಪಿ ಹ್ಯಾಲೋವೀನ್ ಎಂದು ಹೇಳಿದ್ದಾಗಿ ಭಾರತ ಮೂಲದ ಮಹಿಳೆ ಶೈಲಾ ಹೇಳಿದ್ದಾರೆ. ಬಳಿಕ ಮನೆಯ ಗೇಟ್ ಒಳಗೆ ನುಗ್ಗಿ ಪದೇ ಪದೇ ಬಾಗಿಲು ಬಡಿದಿದ್ದಾರೆ. ಬಳಿಕ ಭಯಪಟ್ಟು ಪೊಲೀಸರಿಗೆ ಕರೆ ಮಾಡಿರುವುದಾಗಿ ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 21, 2025 11:42 AM