ತಂದೆಯ ಎದುರೇ ಮಗಳನ್ನು ಅಪಹರಿಸಲು ಯತ್ನಿಸಿದ ವ್ಯಕ್ತಿ, ಇಲ್ಲಿದೆ ನೋಡಿ ಭಯಾನಕ ದೃಶ್ಯ
ಉತ್ತರಪ್ರದೇಶದ ಮಥುರಾದಲ್ಲಿ ತಂದೆಯ ಎದುರೇ ಮಗಳನ್ನು ಅಪಹರಿಸಲು ಯತ್ನಿಸಿದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಪ್ಪ-ಮಗಳನ್ನು ಅಡ್ಡಗಟ್ಟಿ, ಮಗಳನ್ನು ಎಳೆಯಲು ಪ್ರಯತ್ನಿಸಿದ್ದಾರೆ. ತಕ್ಷಣ ತಂದೆ ಸ್ಕೂಟರ್ ಸ್ಟಾರ್ಟ್ ಮಾಡಿ ಮಗಳನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡುತ್ತದೆ.
ಉತ್ತರಪ್ರದೇಶ, ನ.22: ತಂದೆಯ ಮುಂದೆ ಮಗಳನ್ನು ಅಪಹರಿಸಲು ಪ್ರಯತ್ನಿಸಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ. ಈ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಮೊದಲು ಬೈಕ್‌ನಲ್ಲಿ ಬಂದು, ಅದರಲ್ಲಿ ಒಬ್ಬ ಬೈಕ್ನಿಂದ ಅಂಗಡಿಯ ಬಳಿ ಇಳಿದು, ಅಲ್ಲೇ ತಿರುಗಾಡುವುದನ್ನು ಕಾಣಬಹುದು. ಮತ್ತೊಬ್ಬ ಬೈಕ್ನಲ್ಲೇ ಮುಂದೆ ಹೋಗುತ್ತಾನೆ. ಅದೇ ದಾರಿಯಲ್ಲಿ ವ್ಯಕ್ತಿಯೊಬ್ಬರು ಮಗಳ ಜತೆ ಸ್ಕೂಟರ್ನಲ್ಲಿ ಬರುತ್ತಾರೆ. ಈ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿ ಅಪ್ಪ-ಮಗಳನ್ನು ಅಡ್ಡಗಟ್ಟಿ ಮಾತನಾಡಿಸುತ್ತಾನೆ. ಸ್ವಲ್ಪ ಹೊತ್ತಿನ ನಂತರ ಸ್ಕೂಟರ್ನಲ್ಲಿದ್ದ ಪುಟ್ಟ ಹುಡುಗಿಯನ್ನು ಎಳೆಯಲು ಪ್ರಯತ್ನಿಸುತ್ತಾನೆ. ಸ್ಕೂಟರ್ನಲ್ಲಿದ್ದ ವ್ಯಕ್ತಿ, ಅಲ್ಲಿಂದ ತಪ್ಪಿಸಿಕೊಳ್ಳುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು @gharkekalesh ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಈ ವಿಡಿಯೋದಲ್ಲಿ ಶೀರ್ಷಿಕೆ ನೀಡಿದ್ದಾರೆ.