ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್

Updated on: Aug 21, 2025 | 7:36 AM

Welsh Fire vs Southern Brave: ಈ ಗುರಿಯನ್ನು ಬೆನ್ನತ್ತಿದ ವೆಲ್ಷ್ ಫೈರ್ ತಂಡವು ಕಳಪೆ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 100 ಎಸೆತಗಳಲ್ಲಿ ಗಳಿಸಿದ್ದು 125 ರನ್​ಗಳು ಮಾತ್ರ. ಪರಿಣಾಮ ಸದರ್ನ್ ಬ್ರೇವ್ ತಂಡವು ಈ ಪಂದ್ಯದಲ್ಲಿ 4 ರನ್​ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸದರ್ನ್​ ಬ್ರೇವ್ ತಂಡವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ದಿ ಹಂಡ್ರೆಡ್ ಲೀಗ್​ನ 21ನೇ ಪಂದ್ಯದಲ್ಲಿ ಸದರ್ನ್​ ಬ್ರೇವ್ ತಂಡ ರೋಚಕ ಜಯ ಸಾಧಿಸಿದೆ. ಕಾರ್ಡಿಫ್​ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸದರ್ನ್​ ಬ್ರೇವ್ ಹಾಗೂ ವೆಲ್ಷ್ ಫೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸದರ್ನ್ ಬ್ರೇವ್ ತಂಡ 100 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 129 ರನ್​ಗಳು. ಇದಕ್ಕೆ ಮುಖ್ಯ ಕಾರಣ ಮ್ಯಾಟ್ ಹೆನ್ರಿ.

ಮಿಂಚಿನ ದಾಳಿ ದಾಳಿ ಸಂಘಟಿಸಿದ ಮ್ಯಾಟ್ ಹೆನ್ರಿ 20 ಎಸೆತಗಳಲ್ಲಿ 16 ಡಾಟ್ ಬಾಲ್ ಎಸೆದಿದ್ದರು. ಇನ್ನುಳಿದ 4 ಎಸೆತಗಳಲ್ಲಿ ಕೇವಲ 5 ರನ್​ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಪರಿಣಾಮ ಸದರ್ನ್​ ಬ್ರೇವ್ ತಂಡವು 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್​ಗಳಿಸಲಷ್ಟೇ ಶಕ್ತರಾದರು.

ಆದರೆ ಈ ಗುರಿಯನ್ನು ಬೆನ್ನತ್ತಿದ ವೆಲ್ಷ್ ಫೈರ್ ತಂಡವು ಕಳಪೆ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 100 ಎಸೆತಗಳಲ್ಲಿ ಗಳಿಸಿದ್ದು 125 ರನ್​ಗಳು ಮಾತ್ರ. ಪರಿಣಾಮ ಸದರ್ನ್ ಬ್ರೇವ್ ತಂಡವು ಈ ಪಂದ್ಯದಲ್ಲಿ 4 ರನ್​ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸದರ್ನ್​ ಬ್ರೇವ್ ತಂಡವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

 

Published on: Aug 21, 2025 07:35 AM