Bengaluru: ಸೋಮಣ್ಣ ವಿಷಯ ಮಾತಾಡುವಾಗ ಬಿಎಸ್ ಯಡಿಯೂರಪ್ಪ ಅದ್ಯಾಕೆ ವಿಜೆಯೇಂದ್ರನ ಹೆಸರು ಉಲ್ಲೇಖಿಸಿದರೋ?
ಅವರನ್ನು ಯಾವತ್ತೂ ಕಡೆಗಣನೆ ಮಾಡಿಲ್ಲ, ಇನ್ನು ಮುಂದೆ ಅವರೂ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ, ವಿಜಯೇಂದ್ರ ಸಹ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಯಡಿಯೂರಪ್ಪ ಹೇಳಿದರು.
ಬೆಂಗಳೂರು: ವಿ ಸೋಮಣ್ಣ (V Somanna) ಕುರಿತು ಬೆಂಗಳೂರಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಬಿಎಸ್ ಯಡಿಯೂರಪ್ಪನವರು (BS Yediyurappa), ಸಚಿವರನ್ನು ಪಕ್ಷದ ವರಿಷ್ಠರು ದೆಹಲಿಗೆ ಕರೆಸಿ ಮಾತಾಡಿದ್ದಾರೆ, ಎಲ್ಲ ಸಮಸ್ಯೆಗಳನ್ನು ನಿವಾರಿಸಿದ್ದಾರೆ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ತಾನು ಅವರೊಂದಿಗೆ ಮಾತಾಡದೆ, ಭೇಟಿಯಾಗದೆ ಮೂರು ತಿಂಗಳಾಗಿದೆ, ತನ್ನ ಜೊತೆಯೇ ಅವರಿದ್ದರು ಅಂತ ಹೇಳೋದು ಸರಿಯಲ್ಲ, ಅವರನ್ನು ಕಡೆಗಣನೆ ಯಾವತ್ತೂ ಮಾಡಿಲ್ಲ, ಇನ್ನು ಮುಂದೆ ಅವರೂ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ, ವಿಜಯೇಂದ್ರ (BY Vijayendra) ಸಹ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಯಡಿಯೂರಪ್ಪ ಹೇಳಿದರು. ಸೋಮಣ್ಣ ವಿಷಯ ಮಾತಾಡುವಾಗ ಮಾಜಿ ಮುಖ್ಯಮಂತ್ರಿಗಳು ಅದ್ಯಾಕೆ ವಿಜಯೇಂದ್ರ ಹೆಸರು ಉಲ್ಲೇಖಿಸಿದರೆಂದು ಅರ್ಥವಾಗಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ