ಮೇಘನಾ ರಾಜ್​ ಮಗ ರಾಯನ್​ ರಾಜ್​ ಸರ್ಜಾಗೆ 11ನೇ ತಿಂಗಳ ಸಂಭ್ರಮ; ಇಲ್ಲಿದೆ ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Sep 23, 2021 | 7:14 PM

Meghana Raj: ರಾಯನ್ ರಾಜ್ ಸರ್ಜಾ ಮಾತನಾಡಲು ಪ್ರಯತ್ನಿಸುತ್ತಿದ್ದಾನೆ. ಈ ಮುದ್ದಾದ ವಿಡಿಯೋವನ್ನು ಮೇಘನಾ ಹಂಚಿಕೊಂಡಿದ್ದಾರೆ.

ಮೇಘನಾ ರಾಜ್​ ಹಾಗೂ ಚಿರಂಜೀವಿ ಸರ್ಜಾ ಮಗ ರಾಯನ್​ ರಾಜ್​ ಸರ್ಜಾ ಸೋಶಿಯಲ್​ ಮೀಡಿಯಾದಲ್ಲಿ ಮಿಂಚುತ್ತಿದ್ದಾನೆ. ಆತನಿಗೆ ಈಗ 11 ತಿಂಗಳು. ಈ ಖುಷಿಗೆ ಮೇಘನಾ ರಾಜ್​ ಅವರು ವಿಶೇಷ ವಿಡಿಯೋ ಒಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ರಾಯನ್ ರಾಜ್ ಸರ್ಜಾ ಮಾತನಾಡಲು ಪ್ರಯತ್ನಿಸುತ್ತಿದ್ದಾನೆ. ಈ ಮುದ್ದಾದ ವಿಡಿಯೋವನ್ನು ಮೇಘನಾ ಹಂಚಿಕೊಂಡಿದ್ದಾರೆ. ‘ನಮ್ಮೊಂದಿಗೆ ಪ್ರತಿ ತಿಂಗಳಿನ ಖುಷಿಯನ್ನು ಆಚರಿಸುತ್ತಿರುವ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಮೇಘನಾ ರಾಜ್​ ಬರೆದುಕೊಂಡಿದ್ದಾರೆ. ವಿಡಿಯೋವನ್ನು ವೀಕ್ಷಿಸಿದ ಅಭಿಮಾನಿಗಳು ರಾಯನ್​ ನಗುವನ್ನು ನೋಡಿ ಸಂತಸಗೊಂಡಿದ್ದಾರೆ. ಸದ್ಯ, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: Meghana Raj: ಮೇಘನಾ ರಾಜ್​ ಎರಡನೇ ಮದುವೆ ಬಗ್ಗೆ ಸುಳ್ಳು ಸುದ್ದಿ; ನಟ ಪ್ರಥಮ್​ ಆಕ್ರೋಶ