ದಿಲ್ ಪಸಂದ್ ಚಿತ್ರದ ಕತೆ ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾಗಿ ಚಿತ್ರದ ನಾಯಕಿ ಮೇಘಾ ಶೆಟ್ಟಿ ಹೇಳುತ್ತಾರೆ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Sep 29, 2021 | 1:30 AM

ದಿಲ್ ಪಸಂದ್ ಸಿನಿಮಾದ ಕತೆಯನ್ನು ಹೇಳಲು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ಮೇಘಾ ಮನೆಗೆ ಹೋದಾಗ ಕತೆ ಕೇಳಿ ಆಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕರಂತೆ. ಕತೆ ತುಂಬಾ ಚೆನ್ನಾಗಿದೆ ಎಂದು ಅವರು ಹೇಳುತ್ತಾರೆ.

‘ದಿಲ್ ಪಸಂದ್’ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಮಂಗಳವಾರ ಬೆಂಗಳೂರಿನಲ್ಲಿ ನಡೆಯಿತು. ಪೊಲೀಸ್ ಅಧಿಕಾರಿ ರವಿ ಚನ್ನಣ್ಣವರ್ ಶೀರ್ಷಿಕೆಯನ್ನು ಲಾಂಚ್ ಮಾಡಿದರು. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಅಂತ ಕಾಣುತ್ತೆ-ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ. ಪ್ರೆಸ್ ಮೀಟ್ ಮುಗಿದ ಬಳಿಕ ಚಿತ್ರರಂಗಕ್ಕೆ ಇನ್ನೂ ಹೊಸಬರಾಗಿರುವ ಮೇಘಾ ಶೆಟ್ಟಿ ದಿಲ್ ಪಸಂದ್ ಸಿನಿಮಾ ಮತ್ತು ಚಿತ್ರಕಥೆ ಬಗ್ಗೆ ತಮ್ಮ ಅನಿಸಿಕೆಯನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು. ಮೇಘಾಗೆ ದಿಲ್ ಪಸಂದ್ ಕೇವಲ ಎರಡನೇ ಸಿನಿಮಾ. ಆಕೆ ಪಾದಾರ್ಪಣೆ ಮಾಡಿದ್ದು ಗಣೇಶ್ ಮುಖ್ಯಪಾತ್ರದಲ್ಲಿದ್ದ ‘ತ್ರಿಬಲ್ ರೈಡಿಂಗ್’ ಚಿತ್ರದ ಮೂಲಕ.

ದಿಲ್ ಪಸಂದ್ ಸಿನಿಮಾದ ಕತೆಯನ್ನು ಹೇಳಲು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ಮೇಘಾ ಮನೆಗೆ ಹೋದಾಗ ಕತೆ ಕೇಳಿ ಆಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕರಂತೆ. ಕತೆ ತುಂಬಾ ಚೆನ್ನಾಗಿದೆ ಎಂದು ಅವರು ಹೇಳುತ್ತಾರೆ. ಆಕೆಯ ಪಾತ್ರವೂ ಬಹಳ ಸೊಗಸಾಗಿದೆ, ತನಗೆ ಬಹಳ ಇಷ್ಟವಾಗಿದೆ ಎಂದು ಹೇಳುವ ಮೇಘಾ ಆ ಪಾತ್ರಕ್ಕೆ ತಾನು ನ್ಯಾಯ ಒದಗಿಸಬಲ್ಲೆ ಅಂತ ಭಾವಿಸಿ ಆಯ್ಕೆ ಮಾಡಿದ್ದಕ್ಕೆ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಚಿತ್ರದ ಕತೆ ಬಗ್ಗೆ ಮೇಘಾ ತುಂಬಾನೇ ಇಂಪ್ರೆಸ್ ಆಗಿರುವಂತಿದೆ. ಅದು ದೊಡ್ಡ ಮಟ್ಟು ಯಶ ಕಾಣಲಿದೆಯೆಂದು ಭವಿಷ್ಯ ನುಡಿಯುತ್ತಿದ್ದಾರೆ. ತಾನು ಚಿತ್ರರಂಗದಲ್ಲಿ ಈಗಷ್ಟೇ ಅಂಬೆಗಾಲು ಇಡುತ್ತಿರುವುದರಿಂದ ಎಲ್ಲರ ಬೆಂಬಲ ಮತ್ತು ಸಹಕಾರ ಬೇಕು ಅಂತ ಮೇಘಾ ಶೆಟ್ಟಿ ಹೇಳುತ್ತಾರೆ.

ಇದನ್ನೂ ಓದಿ: ಮಾತಿಗೆ ನಿಂತರೆ ನಿಲ್ಲಿಸದ ನಿಶ್ವಿಕಾ ಕಾಲಿಗೆ ಪೆಟ್ಟಾಗಿದ್ದರೂ ಪ್ರೆಸ್ ಮೀಟ್​ನಲ್ಲಿ ಪಾಲ್ಗೊಂಡು ಬದ್ಧತೆ ಮೆರೆದರು!

Loading...
Unable to load recommendations.
Follow Us
TV9 Web

TV9 Kannada

Read More