AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತಿಗೆ ನಿಂತರೆ ನಿಲ್ಲಿಸದ ನಿಶ್ವಿಕಾ ಕಾಲಿಗೆ ಪೆಟ್ಟಾಗಿದ್ದರೂ ಪ್ರೆಸ್ ಮೀಟ್​ನಲ್ಲಿ ಪಾಲ್ಗೊಂಡು ಬದ್ಧತೆ ಮೆರೆದರು!

ಮಾತಿಗೆ ನಿಂತರೆ ನಿಲ್ಲಿಸದ ನಿಶ್ವಿಕಾ ಕಾಲಿಗೆ ಪೆಟ್ಟಾಗಿದ್ದರೂ ಪ್ರೆಸ್ ಮೀಟ್​ನಲ್ಲಿ ಪಾಲ್ಗೊಂಡು ಬದ್ಧತೆ ಮೆರೆದರು!

TV9 Web
| Edited By: |

Updated on: Sep 28, 2021 | 10:15 PM

Share

ತನ್ನ ಕೈಗೆ ಮೈಕ್ ಸಿಕ್ಕಾಗ ನಾನ್ ಸ್ಟಾಪ್ ಮಾತಾಡಿದ ನಿಶ್ವಿಕಾ, ಚನ್ನಣ್ಣವರ್ ಕುರಿತು ಮೆಚ್ಚುಗೆ ಮಾತುಗಳನ್ನು ಹೇಳಿ, ಅವರ ಕಾರ್ಯ ವೈಖರಿಯನ್ನು ಕೊಂಡಾಡಿದರು. ಅವರ ಬಗ್ಗೆ ಕೇಳಿ ತಿಳಿದಿದ್ದರೂ ಮೊದಲ ಬಾರಿಗೆ ಮುಖತಃ ಭೇಟಿಯಾಗುವ ಸಂದರ್ಭ ಸಿಕ್ಕಿದ್ದಕ್ಕೆ ಸಂತೋಷವಾಗಿದೆ ಅಂತ ಹೇಳಿದರು.

‘ಅಮ್ಮಾ ಐ ಲವ್ ಯೂ,’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಸದ್ದು ಮಾಡುತ್ತಿರುವ ನೀಳಕಾಯದ ಸುಂದರಿ ನಿಶ್ವಿಕಾ ನಾಯ್ಡು ಇವತ್ತು ಬೇರೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಡಾರ್ಲಿಂಗ್ ಕೃಷ್ಣ ಎದುರು ಆಕೆ ನಾಯಕಿಯಾಗಿ ನಟಿಸುತ್ತಿರುವ ‘ದಿಲ್ ಪಸಂದ್’ ಚಿತ್ರ ಸೆಟ್ಟೇರಿದೆ. ಚಿತ್ರದ ನಿರ್ಮಾಕರು ಮಂಗಳವಾರ ಬೆಂಗಳೂರಿನಲ್ಲಿ ಒಂದು ಪ್ರೆಸ್ ಮೀಟ್ ಕರೆದಿದ್ದರು. ಸಾಮಾನ್ಯವಾಗಿ ಸಿನಿಮಾ ಸಂಬಂಧಿಸಿದ ಸಮಾರಂಭಗಳಿಂದ ಅಂತರ ಕಾಯ್ದುಕೊಳ್ಳುವ ಖಡಕ್ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಈ ಗೋಷ್ಟಿಗೆ ಶೀರ್ಷಿಕೆ ಲಾಂಚ್ ಮಾಡಲು ಅತಿಥಿಯಾಗಿ ಆಗಮಿಸಿದ್ದರು. ಓಕೆ, ನಿಶ್ವಿಕಾ ವಿಷಯಕ್ಕೆ ವಾಪಸ್ಸು ಹೋಗೋಣ. ಅಸಲಿಗೆ ಇಂದಿನ ಸುದ್ದಿಗೋಷ್ಟಿಯಲ್ಲಿ ಆಕೆ ಭಾಗಿಯಾಗಲಾರಳು ಅಂತಲೇ ಚಿತ್ರತಂಡ ಬಾವಿಸಿತ್ತು. ನಿಶ್ವಿಕಾ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಡೆದಾಡುವುದು ಕಷ್ಟವಾಗುತ್ತಿದೆಯಂತೆ. ಆದರೆ ಆಕೆ, ನೋವಿನ ಹೊರತಾಗಿಯೂ ಪ್ರೆಸ್ ಮೀಟ್ನಲ್ಲಿ ಕಾಣಿಸಿಕೊಂಡು ಬದ್ಧತೆ ಪ್ರದರ್ಶಿದ್ದಾರೆ.

ತನ್ನ ಕೈಗೆ ಮೈಕ್ ಸಿಕ್ಕಾಗ ನಾನ್ ಸ್ಟಾಪ್ ಮಾತಾಡಿದ ನಿಶ್ವಿಕಾ, ಚನ್ನಣ್ಣವರ್ ಕುರಿತು ಮೆಚ್ಚುಗೆ ಮಾತುಗಳನ್ನು ಹೇಳಿ, ಅವರ ಕಾರ್ಯ ವೈಖರಿಯನ್ನು ಕೊಂಡಾಡಿದರು. ಅವರ ಬಗ್ಗೆ ಕೇಳಿ ತಿಳಿದಿದ್ದರೂ ಮೊದಲ ಬಾರಿಗೆ ಮುಖತಃ ಭೇಟಿಯಾಗುವ ಸಂದರ್ಭ ಸಿಕ್ಕಿದ್ದಕ್ಕೆ ಸಂತೋಷವಾಗಿದೆ ಅಂತ ಹೇಳಿದರು.

ನಂತರ ‘ದಿಲ್ ಪಸಂದ್’ ಚಿತ್ರದಲ್ಲಿ ತಮ್ಮ ರೋಲ್ ಕುರಿತು ಮಾತಾಡಿದ ನಿಶ್ವಿಕಾ, ತನಗೆ ವಿಭಿನ್ನ ಬಗೆಯ ಪಾತ್ರ ಸಿಕ್ಕಿದೆ, ಒಬ್ಬ ಶ್ರೀಮಂತ ಮತ್ತು ಅಹಂಕಾರಿ ಹುಡುಗಿಯ ಪಾತ್ರ ತನ್ನದು, ಸಿನಿಮಾ ಕತೆ ಒಂದು ಲವ್ ಸ್ಟೋರಿಯಾಗಿದೆ ಎಂದರು.

ಸಿನಿಮಾನಲ್ಲಿ ಅವರ ಲುಕ್ಸ್ ಮತ್ತು ಭಾಷೆ ಡಿಫರೆಂಟ್ ಆಗಿವೆ ಎಂದ ನಿಶ್ವಿಕಾ, ನಿರ್ಮಾಪಕ ನಿರ್ದೇಶಕರ ಬಗ್ಗೆಯೂ ಮೆಚ್ಚುಗೆಯ ಮಾತಾಡಿ ಟೀಮ್​ನೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ನೀಡುತ್ತಿದೆ ಅಂತ ಹೇಳಿದರು.

ಇದನ್ನೂ ಓದಿ:  ಸಿನಿಮಾ ಬ್ಲಾಕ್​ ಟಿಕೆಟ್​ ಮಾರುತ್ತಿದ್ದ ರವಿ ಡಿ. ಚನ್ನಣ್ಣನವರ್​: ‘ದಿಲ್​ ಪಸಂದ್​’ ವೇದಿಕೆಯಲ್ಲಿ ಅಚ್ಚರಿ ವಿಚಾರ ಬಹಿರಂಗ