ಕಣಿವೆ ಬಸವಣ್ಣ ದೇವಸ್ಥಾನದಲ್ಲಿರುವ ನಂದಿಯ ಗಾತ್ರ ಹೆಚ್ಚುತ್ತಿದೆ, ಅದು ಎದ್ದು ನಿಂತು ಗುಟುರು ಹಾಕಿದರೆ ಕಲಿಯುಗದ ಸಮಾಪ್ತಿ!
ನಂದಿಯ ಗಾತ್ರದ ಬಗ್ಗೆಯೂ ಅವರು ಸೋಜಿಗ ಹುಟ್ಟಿಸುವ ಅಂಶವೊಂದನ್ನು ದಾಖಲಿಸಿದ್ದಾರೆ. ಅದೇನೆಂದರೆ, ನಂದಿಯ ಗಾತ್ರ ಹೆಚ್ಚುತ್ತಾ ಹೋಗಿ ಕೊನೆಗೊಂದು ದಿನ ಅದು ಎದ್ದು ನಿಂತು ಗುಟುರು ಹಾಕಿದರೆ ಅಲ್ಲಿಗೆ ಕಲಿಯುಗದ ಸಮಾಪ್ತಿಯಂತೆ.
ಚಿಕ್ಕಬಳ್ಳಾಪುರದ ಜಿಲ್ಲೆಯ ನಂದಿಬೆಟ್ಟಕ್ಕೆ ನೀವು ಭೇಟಿ ನೀಡಿರಬಹುದು. ಒಂದೊಮ್ಮೆ ನೀಡಿದ್ದರೆ, ಬೆಟ್ಟದಲ್ಲಿರುವ ಕಣಿವೆ ಬಸವಣ್ಣನ ದೇವಸ್ಥಾನಕ್ಕೂ ಹೋಗಿರುತ್ತೀರಿ. ನೀವು ಉತ್ತರ ಕರ್ನಾಟಕದ ಕಡೆಯವರಾಗಿದ್ದು, ಅಥವಾ ಬೆಂಗಳುರಿನಿಂದ ದೂರವಿದ್ದು ಇಲ್ಲಿಗೆ ಪ್ರವಾಸ ಬರುವ ಯೋಚನೆಯಿದ್ದರೆ, ಈ ದೇವಸ್ಥಾನಕ್ಕೆ ಭೇಟಿ ನೀಡುವ ಅಂಶವನ್ನು ತಪ್ಪದೆ ನಿಮ್ಮ ನೋಟ್ ಪ್ಯಾಡ್ ಇಲ್ಲವೇ ಡೈರಿಯಲ್ಲಿ ನೋಟ್ ಮಾಡಿಕೊಳ್ಳಿ. ಈ ನಂದೀಶ್ವರ ದೇವಸ್ಥಾನಕ್ಕಿರುವ ಪ್ರಾಮುಖ್ಯತೆ ಅನನ್ಯವಾದದ್ದು. ಬೆಂಗಳೂರಿನ ದೊಡ್ಡ ಬಸವಣ್ಣ ದೇವಾಲಯನಲ್ಲಿರುವ ನಂದಿಗಿಂತ ಈ ದೇವಸ್ಥಾನಲ್ಲಿರುವ ನಂದಿಯ ಗಾತ್ರ ದೊಡ್ಡದು. ಅದಕ್ಕೂ ಮುಖ್ಯವಾದ ಸಂಗತಿಯೇನೆಂದರೆ, ಕಣಿವೆ ಬಸವಣ್ಣದೇವಸ್ಥಾನದಲ್ಲಿರುವ ನಂದಿಯ ಆಕಾರ ಮತ್ತು ಗಾತ್ರ ಹೆಚ್ಚುತ್ತಾ ಹೋಗುತ್ತಿದೆಯಂತೆ.
ಬ್ರಹ್ಮೇಂದ್ರ ಸ್ವಾಮಿಗಳು ಬರೆದಿರುವ ಕಾಲಜ್ಞಾನದಲ್ಲಿ ಈ ದೇವಸ್ಥಾನದ ಉಲ್ಲೇಖವಿದೆ. ನಂದಿಯ ಗಾತ್ರದ ಬಗ್ಗೆಯೂ ಅವರು ಸೋಜಿಗ ಹುಟ್ಟಿಸುವ ಅಂಶವೊಂದನ್ನು ದಾಖಲಿಸಿದ್ದಾರೆ. ಅದೇನೆಂದರೆ, ನಂದಿಯ ಗಾತ್ರ ಹೆಚ್ಚುತ್ತಾ ಹೋಗಿ ಕೊನೆಗೊಂದು ದಿನ ಅದು ಎದ್ದು ನಿಂತು ಗುಟುರು ಹಾಕಿದರೆ ಅಲ್ಲಿಗೆ ಕಲಿಯುಗದ ಸಮಾಪ್ತಿಯಂತೆ.
ಆಗಲೇ ಹೇಳಿದಂತೆ, ದೇವಸ್ಥಾನದಲ್ಲಿರುವ ನಂದಿ ಎಷ್ಟು ದೊಡ್ಡದಾಗಿದೆಯೆಂದರೆ, ಅದರ ಮೈದೊಳೆಯಲು, ಪೂಜೆ ಸಲ್ಲಿಸಲು ಏಣಿ ಬೇಕಾಗುತ್ತದೆ. ಚಿಕ್ಕಬಳ್ಳಾಪುರದ ರೈತ ಸಮುದಾಯಕ್ಕೆ ಕಣಿವೆ ಬಸವಣ್ಣನ ಮೇಲೆ ಅಪಾರ ಭಕ್ತಿ ಮತ್ತು ನಿಷ್ಠೆ.
ಸುಗ್ಗಿಯ ಸಮಯದಲ್ಲಿ ತಾವು ಬೆಳೆದ ಫಸಲಿನ ಒಂದಷ್ಟು ಭಾಗವನ್ನು ಅವರು ಬಸವಣ್ಣನ ಸನ್ನಿಧಿಗೆ ತಂದು ಅರ್ಪಿಸುತ್ತಾರೆ. ಹಾಗೆಯೇ, ರೈತಾಪಿ ಜನಗಳ ಮನೆಯಲ್ಲಿ ಹಸುವೊಂದು ಈದರೆ ಅದರ ಕೆಚ್ಚಲಿನ ಮೊದಲ ಹಾಲನ್ನು ತಂದು ಇಲ್ಲಿನ ನಂದಿಗೆ ಅಭೀಷೇಕ ಮಾಡುತ್ತಾರೆ.