ಕನ್ನಡತಿ ಶ್ರದ್ಧಾ ಶ್ರೀನಾಥ್ ಬೆಂಗಳೂರಿನಲ್ಲಿ ಖಾಯಂ ಆಗಿ ಸೆಟ್ಲ್ ಆಗುವ ಮೊದಲು ಅರ್ಧ ದೇಶವನ್ನೇ ಸುತ್ತಿದ್ದರು!

ಶ್ರದ್ಧಾ ಸಾಂಪ್ರಾದಾಯಿಕ ಚೆಲುವಿನ ಒಡತಿ. ಆಕೆಯ ಸುಂದರ ಮುಖದಲ್ಲಿ ಎದ್ದು ಕಾಣೋದು ನೇರ ಮತ್ತು ಕಲಾವಿದನೊಬ್ಬ ತಿದ್ದಿತೀಡಿ ಚಿತ್ರಿಸಿದಂಥ ಮೂಗು. ಆಕೆ ಸೌಂದರ್ಯದ ಪ್ರಮುಖ ಆಕರ್ಷಣೆ ಮೂಗೆಂದರೆ ತಪ್ಪಾಗಲಾರದು.

TV9kannada Web Team

| Edited By: Arun Belly

Sep 28, 2021 | 5:38 PM

ಸೌಂದರ್ಯ ಮತ್ತು ಪ್ರತಿಭೆ ಎರಡನ್ನು ಹೊಂದಿದ್ದರೆ ಮಾತ್ರ ಸೆಲ್ಯುಲಾಯ್ಡ್ ದುನಿಯಾದಲ್ಲಿ ಜನ ಮಣೆ ಹಾಕುತ್ತ್ತಾರೆ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಬ್ಯುಸಿಯಾಗಿರುವ ಶ್ರದ್ಧಾ ಶ್ರೀನಾಥ್ ಅಪ್ಪಟ ಕನ್ನಡದ ಹುಡುಗಿ. ಹುಟ್ಟಿದ್ದು ಜಮ್ಮು ಮತ್ತು ಕಾಶ್ಮೀರ ಮತ್ತು ಸೇನೆಯಲ್ಲಿದ್ದ ತಂದೆಯ ನೌಕರಿ ನಿಮಿತ್ತ ಹಲವಾರು ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡಿ ಅಂತಿಮವಾಗಿ ಬೆಂಗಳೂರಿನ ಲಾ ಕಾಲೇಜೊಂದರಲ್ಲಿ ಕಾನೂನು ಪದವಿ ಪಡೆದ ಶ್ರದ್ಧಾ ಸಿನಿಮಾ ರಂಗಕ್ಕೆ ಬಂದ 5 ವರ್ಷಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಮೊದಲ ಕನ್ನಡ ಚಿತ್ರ 2016ರಲ್ಲಿ ರಿಲೀಸ್ ಆದ ಉ-ಟರ್ನ್. ಈ ಚಿತ್ರದಲ್ಲಿ ಆಕೆ ನೀಡಿದ ಮನೋಜ್ಞ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿಯೂ ಸಿಕ್ಕಿತ್ತು.

ಶ್ರದ್ಧಾ ಸಾಂಪ್ರಾದಾಯಿಕ ಚೆಲುವಿನ ಒಡತಿ. ಆಕೆಯ ಸುಂದರ ಮುಖದಲ್ಲಿ ಎದ್ದು ಕಾಣೋದು ನೇರ ಮತ್ತು ಕಲಾವಿದನೊಬ್ಬ ತಿದ್ದಿತೀಡಿ ಚಿತ್ರಿಸಿದಂಥ ಮೂಗು. ಆಕೆ ಸೌಂದರ್ಯದ ಪ್ರಮುಖ ಆಕರ್ಷಣೆ ಮೂಗೆಂದರೆ ತಪ್ಪಾಗಲಾರದು. ಆಕರ್ಷಕ ಕಣ್ಣುಗಳು, ಹಾಲುವರ್ಣದ ಕೆನ್ನೆ ಮತ್ತು ಮೋಹಕ ತುಟಿಗಳ ಹಿಂದೆ ಬೆಳ್ಳಗೆ ಹೊಳೆಯುವ ದಂತಪಂಕ್ತಿ. ಆಕೆಯ ನಿಲುವಿಗೆ ಸೊಬಗು ನೀಡುವ ಮೈಮಾಟ.

ಕೆಲ ಮಹಿಳೆಯರ ಸೌಂದರ್ಯ ನೋಡುಗರ ಮನಸ್ಸಿನಲ್ಲಿ ಆರಾಧಿಸುವ ಭಾವನೆ ಮೂಡಿಸುತ್ತದೆ. ಅಂಥ ರೂಪವತಿಯರ ಸಾಲಿನಲ್ಲಿ ಶ್ರದ್ಧಾ ಸೇರುತ್ತಾರೆ.
ಆಕೆಯ ಸೌಂದರ್ಯ ಸಾಂಪ್ರದಾಯಿಕವೆನಿಸುವುದರಿಂದ ಸೀರೆಯಲ್ಲಿ ಮತ್ತೂ ಚೆನ್ನಾಗಿ ಕಾಣುತ್ತಾರೆ. ಇದರರ್ಥ ಬೇರೆ ಉಡುಗೆಗಳು ಆಕೆಗೆ ಒಪ್ಪಲಾರವು ಅಂತಲ್ಲ. ಪಾಶ್ಚಾತ್ಯ ಉಡುಗೆ, ಮಾಡ್ ಮತ್ತು ಜೀನ್ಸ್ ನಲ್ಲೂ ಆಕೆ ಚಂದ ಕಾಣುತ್ತಾರೆ. ಆದರೆ, ಸೀರೆಯಲ್ಲಿ ಮಾತ್ರ ಆಕೆ ಅಪ್ಸರೆಯೇ!

ನಿಮಗೆ ಆಶ್ಚರ್ಯವಾಗಬಹುದು, ನಟಿಯಾಗುವ ಮೊದಲು ಶ್ರದ್ಧಾ ಡುಮ್ಮಿಯಾಗಿದ್ದರು. ಕಟ್ಟುನಿಟ್ಟಿನ ಡಯಟ್ ಮತ್ತು ವರ್ಕ್ ಔಟ್ ಮೂಲಕ ಆಕೆ 18 ಕೆಜಿ ತೂಕ ಇಳಿಸಿಕೊಂಡರಂತೆ. ಅವರ ಬದ್ಧತೆ ನಿಜಕ್ಕೂ ಮೆಚ್ಚಬೇಕಾದದ್ದೇ.

ಕೆಲಸ ಮಾಡುವ ಕ್ಷೇತ್ರಗಳಲ್ಲಿ ಕೆಲವು ಸಂಗತಿಗಳು ಅನಿವಾರ್ಯವಾಗಿರುತ್ತವೆ. ನೀವು ಗ್ಲಾಮರ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೆ, ಸೌಂದರ್ಯ ಮತ್ತು ಮೈಮಾಟವನ್ನು ಕಾಯ್ದುಕೊಳ್ಳಲೇ ಬೇಕು. ಅದನ್ನು ಅರಿತುಕೊಂಡೇ ಶ್ರದ್ಧಾ ಕರೀಯರ್ನಲ್ಲಿ ಮುನ್ನುಗ್ಗುತ್ತಿದ್ದಾರೆ.

ಇದನ್ನೂ ಓದಿ:  ಬೆಂಗಳೂರು: ಮತಾಂತರದ ಆರೋಪ; 70 ರಿಂದ 80 ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿದ ವಿಡಿಯೋ ವೈರಲ್

Follow us on

Click on your DTH Provider to Add TV9 Kannada