IPL 2025: 5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್; ವಿಡಿಯೋ ನೋಡಿ
IPL 2025: ಐಪಿಎಲ್ 2025 ರ 61ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಿಚೆಲ್ ಮಾರ್ಷ್ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಒಂದು ಸಿಕ್ಸರ್ ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ ಕಾರಿಗೆ ತಾಗಿತು. ಟಾಟಾ ಮೋಟಾರ್ಸ್‌ನ ಉಪಕ್ರಮದಿಂದಾಗಿ, ಈ ಸಿಕ್ಸರ್ ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗೆ 5 ಲಕ್ಷ ರೂಪಾಯಿಗಳನ್ನು ದಾನ ಮಾಡುವುದಕ್ಕೆ ಕಾರಣವಾಯಿತು. ಮಾರ್ಷ್ 65 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಐಪಿಎಲ್ 2025 ರ 61ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ತಮ್ಮ ತಂಡಕ್ಕೆ ವೇಗದ ಆರಂಭ ನೀಡಿದರು. ಪಂದ್ಯದ ಮೊದಲ ಎಸೆತದಿಂದಲೇ ಅವರು ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಸಿಕ್ಸರ್‌ಗಳ ಮಳೆ ಸುರಿಸಿದರು. ಈ ವೇಳೆ, ಮಿಚೆಲ್ ಮಾರ್ಷ್ ಬಾರಿಸಿದ ಸಿಕ್ಸರ್ವೊಂದು ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ನೇರವಾಗಿ ಬಿದ್ದಿತು. ಈ ಸಿಕ್ಸರ್, ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗೆ ಬರೋಬ್ಬರಿ 5 ಲಕ್ಷ ರೂಗಳ ಕಾಣಿಕೆ ನೀಡಿತು.
5 ಲಕ್ಷ ರೂ ಮೌಲ್ಯದ ಸಿಕ್ಸರ್
ಮಿಚೆಲ್ ಮಾರ್ಷ್ 6ನೇ ಓವರ್‌ನ ಮೊದಲ ಎಸೆತವನ್ನು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸ್ ಬಾರಿಸಿದರು. ಈ ಸಿಕ್ಸ್ ಬೌಂಡರಿ ಲೈನ್ ಬಳಿ ನಿಲ್ಲಿಸಿದ್ದ ಟಾಟಾ ಕರ್ವ್ ಕಾರಿನ ಮೇಲೆ ಬಿದ್ದಿತು. ಇದರಿಂದಾಗಿ ಕಾರು ಕೊಂಚ ಜಖಂಗೊಂಡಿತು. ವಾಸ್ತವವಾಗಿ, ಸೀಸನ್ನ ಆರಂಭದಲ್ಲಿ ಟಾಟಾ ಮೋಟಾರ್ಸ್, ಯಾವುದೇ ಬ್ಯಾಟ್ಸ್‌ಮನ್ ಚೆಂಡನ್ನು ನೇರವಾಗಿ ಕಾರಿನ ಮೇಲೆ ಬೀಳುವಂತೆ ಹೊಡೆದರೆ, ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗಾಗಿ 5 ಲಕ್ಷ ರೂ. ಮೌಲ್ಯದ ಕ್ರಿಕೆಟ್ ಕಿಟ್‌ಗಳನ್ನು ದಾನ ಮಾಡುವುದಾಗಿ ಘೋಷಿಸಿತ್ತು. ಅದರಂತೆ ಈಗ ಮಾರ್ಷ್ ಬಾರಿಸಿರುವ ಸಿಕ್ಸರ್ ನೇರವಾಗಿ ಕಾರಿನ ಮೇಲೆ ಬಿದ್ದಿರುವುದರಿಂದ ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗಾಗಿ 5 ಲಕ್ಷ ರೂ. ಮೌಲ್ಯದ ಕ್ರಿಕೆಟ್ ಕಿಟ್ ದಾನವಾಗಿ ಸಿಗಲಿದೆ.
ಮಾರ್ಷ್ ಬಿರುಗಾಳಿಯ ಇನ್ನಿಂಗ್ಸ್
ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಿದರು. ಮಿಚೆಲ್ ಮಾರ್ಷ್ ಒಟ್ಟು 39 ಎಸೆತಗಳನ್ನು ಎದುರಿಸಿ 166.66 ಸರಾಸರಿಯಲ್ಲಿ 65 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು.

ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು

ಸಂಬಂಧಿಯ ಡಿಎನ್ಎ ಜೊತೆ ಮೃತರ ಡಿಎನ್ಎ ಮ್ಯಾಚ್ ಆದರೆ ದೇಹ ಹಸ್ತಾಂತರ

ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್

Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
